Number Plate: ವಾಹನ ಮಾಲಿಕರಿಗೆ ಮುಖ್ಯ ಮಾಹಿತಿ- ನಂಬರ್ ಪ್ಲೇಟ್ ಬಗ್ಗೆ ಇಲ್ಲಿರೋ ಮಾಹಿತಿಯನ್ನು ತಪ್ಪದೇ ತಿಳಿಯಿರಿ !!
Number Plate: ಸಾರಿಗೆ ಇಲಾಖೆ ವತಿಯಿಂದ ಮೋಟಾರು ವಾಹನ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ನೋಂದಣಿ ಸಂಖ್ಯೆಯ ಬಹಿರಂಗ ಹರಾಜು ಪ್ರಕ್ರಿಯೆ ನಡೆಯಲಿದೆ. ಸದ್ಯ ಬೆಂಗಳೂರಿನ ಸಾರಿಗೆ ಆಯುಕ್ತರ ಕಚೇರಿಯಲ್ಲಿ, ಬೆಂಗಳೂರು ನಗರದಲ್ಲಿ ಪ್ರಾರಂಭಿಸಲಾಗುವ KA 05/NK ಮುಂಗಡ ಶ್ರೇಣಿ ಆರಂಭಿಸಿ, ನೋಂದಣಿ ಸಂಖ್ಯೆಯ ಬಹಿರಂಗ ಹರಾಜು ಪ್ರಕ್ರಿಯೆ ನಡೆಯಲಿದ್ದು, ಡಿಸೆಂಬರ್ 21 ರಂದು ಶಾಂತಿನಗರ ಕೆ.ಎಚ್. ರಸ್ತೆಯಲ್ಲಿರುವ ಟಿಟಿಎಂಸಿ ಕಟ್ಟಡದ 1ನೇ ಮಹಡಿಯ ಸಾರಿಗೆ ಆಯುಕ್ತರ ಕಚೇರಿಯಲ್ಲಿ, ನೋಂದಣಿ ಸಂಖ್ಯೆಯ ಬಹಿರಂಗ ಹರಾಜು ಪ್ರಕ್ರಿಯೆ ನಡೆಯಲಿದೆ.
ನೋಂದಾಣಿ ಸಂಖ್ಯೆ (Number Plate) 1, 123, 1234, 10, 11, 111, 1111, 100, 1000, 1001, 22, 27, 222, 234, 2222, 2727, 33, 36, 63,333, 3333, 3636, 45, 444, 4444, 4455, 4545, 5, 55, 555, 5454, 5555, 6, 63, 666, 6666, 6055, 6363, 7, 72, 77, 777, 786, 7272, 7777, 8, 88, 888, 8055, 8118, 8181, 8888, 9, 90, 99, 900, 909, 999, 9000, 9009, 9090 ಮತ್ತು 9999 & ಉಳಿದ ಸಂಖ್ಯೆಗಳಲ್ಲಿ ಯಾವುದೇ ಇಚ್ಛಿತ ನೋಂದಣಿ ಸಂಖ್ಯೆ ಹಂಚಿಕೆ ಮಾಡಲು ಅವಕಾಶ ಇರುತ್ತದೆ ಎನ್ನಲಾಗಿದೆ.
ಲಘು ಮೋಟಾರು ವಾಹನ (ಸಾರಿಗೇತರ ವರ್ಗದ ಕಾರು ಜೀಪು ಇತ್ಯಾದಿ ಸ್ವಂತ ಉಪಯೋಗಕ್ಕೆ ಬಳಸುವ ವಾಹನ) ರಾಜ್ಯದ ಯಾವುದೇ ಪ್ರಾಧಿಕಾರ ಕಚೇರಿಯಲ್ಲಿ ಹೊಸದಾಗಿ ಪ್ರಾರಂಭಿಸುವ ಮುಂಗಡ ಶ್ರೇಣಿಗಳಲ್ಲಿ ಅರ್ಜಿದಾರರು ಕೋರುವ ಆಯ್ಕೆ ನೋಂದಣಿ ಸಂಖ್ಯೆಗಳನ್ನ, ಬಹಿರಂಗ ಹರಾಜು ಕರೆಯುವ ಮೂಲಕ ಹಂಚಿಕೆ ಮಾಡಲಾಗುವುದು ಎಂದು ಮಾಹಿತಿ ನೀಡಲಾಗಿದೆ.
ಇದನ್ನು ಓದಿ: CM Pinarayi: ಕೇರಳ ರಾಜ್ಯಪಾಲರ ಮೇಲೆ ದಾಳಿಗೆ ಸಿಎಂ ಪಿಣರಾಯಿ ಸಂಚು ?!
ಇನ್ನು ಬಹಿರಂಗ ಹರಾಜು ಕುರಿತು ಹೆಚ್ಚಿನ ಮಾಹಿತಿಗಾಗಿ ಆಯುಕ್ತರು, ಸಾರಿಗೆ & ರಸ್ತೆ ಸುರಕ್ಷತೆ ರವರ ಕಚೇರಿ, ‘ಎ’ ಬ್ಲಾಕ್, 1 ನೇ ಮಹಡಿ, ಟಿಟಿಎಂಸಿ ಕಟ್ಟಡ, ಬಿಎಂಟಿಸಿ ಸಂಕೀರ್ಣ, ಶಾಂತಿನಗರ, ಬೆಂಗಳೂರು ಇಲ್ಲಿ ಭೇಟಿ ನೀಡಬಹುದು ಎಂದು ಬೆಂಗಳೂರು ದಕ್ಷಿಣ ಅಪರ ಸಾರಿಗೆ ಆಯುಕ್ತರು ಮಾಹಿತಿಯನ್ನ ನೀಡಿದ್ದಾರೆ.