High School Teachers: ಶಾಲಾ ಶಿಕ್ಷಕರಿಗೆ ವಿಶೇಷ ಭತ್ಯೆ ಮಂಜೂರು – ಸರ್ಕಾರದ ಹೊಸ ಆದೇಶ

Special Allowance For High School Teachers Govt Order latest updates

High School Teachers: ಕರ್ನಾಟಕ ಸರ್ಕಾರ ಸರ್ಕಾರಿ/ ಅನುದಾನಿತ ಪ್ರೌಢ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರುಗಳು ಮತ್ತು ಉಪನ್ಯಾಸಕರುಗಳಿಗೆ ವಿಶೇಷ ಭತ್ಯೆ ಮಂಜೂರು ಮಾಡುವ ಕುರಿತು ಆದೇಶ ಹೊರಡಿಸಿದೆ.

 

ಸರ್ಕಾರಿ/ ಅನುದಾನಿತ ಪ್ರೌಢ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರುಗಳು ಮತ್ತು ಉಪನ್ಯಾಸಕರುಗಳಿಗೆ ವಿಶೇಷ ಭತ್ಯೆ ಮಂಜೂರು ಮಾಡಿ ವೇತನ ತಾರತಮ್ಯ ಸರಿಪಡಿಸುವ ನಿಟ್ಟಿನಲ್ಲಿ ಹೈಕೋರ್ಟ್ ನೀಡಿರುವ ತೀರ್ಪಿನ ಆಧಾರದ ಮೇಲೆ ತೀರ್ಮಾನ ಕೈಗೊಳ್ಳಲಾಗಿದೆ. ಆರ್ಥಿಕ ಇಲಾಖೆ ಕರ್ನಾಟಕ ಆಡಳಿತ ನ್ಯಾಯಮಂಡಳಿಯ ತೀರ್ಪಿನಲ್ಲಿನ ನಿರ್ದೇಶನದ ಅನುಸಾರ, ಪ್ರೌಢ ಶಿಕ್ಷಣ ಇಲಾಖೆಯ ಶಿಕ್ಷಕರುಗಳಿಗೆ ಮಂಜೂರು ಮಾಡಲಾದ ವಿಶೇಷ ಭತ್ಯೆಯನ್ನು 2007-08ರ ಅಧಿಸೂಚನೆಯನ್ವಯ ನೇಮಕಗೊಂಡು ದಿನಾಂಕ 01/08/2008ರ ನಂತರ ಕಾರ್ಯವರದಿ ಮಾಡಿಕೊಂಡ ಶಿಕ್ಷಕರುಗಳಿಗೆ ವಿಸ್ತರಿಸುವ ತೀರ್ಮಾನ ಕೈಗೊಳ್ಳಲಾಗಿದೆ.

ವಿಶೇಷ ಭತ್ಯೆ ಸೌಲಭ್ಯ ಪಡೆಯುತ್ತಿದ್ದ ಸರ್ಕಾರಿ/ ಅನುದಾನಿತ ಪ್ರೌಢ ಶಿಕ್ಷಣ ಸಂಸ್ಥೆಗಳ ಹಾಲಿ ಈ ಸೌಲಭ್ಯವನ್ನು ಪಡೆಯುತ್ತಿದ್ದ ಶಿಕ್ಷಕರುಗಳಿಗೆ ವಿಶೇಷ ಭತ್ಯೆಯನ್ನು ಮುಂದುವರೆಸಿ ಆದೇಶಗಳನ್ನು ಹೊರಡಿಸಲಾಗುತ್ತದೆ. ಪ್ರೌಢ ಶಿಕ್ಷಣ ಇಲಾಖೆಯ ಶಿಕ್ಷಕರುಗಳಿಗೆ ಮಂಜೂರು ಮಾಡಲಾಗಿದ್ದ ವಿಶೇಷ ಭತ್ಯೆಯ ದರಗಳನ್ನು ಪರಿಷ್ಕರಿಸಿ ಆದೇಶಗಳನ್ನು ಹೊರಡಿಸಲಾಗಿರುತ್ತದೆ.

6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನ ಅನುಸಾರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಶಿಕ್ಷಕರುಗಳಿಗೆ ಮಂಜೂರು ಮಾಡಲಾಗಿದ್ದ ವಿಶೇಷ ಭತ್ಯೆಯನ್ನು ಶಿಕ್ಷಕರುಗಳ ಮೂಲ ವೇತನದೊಂದಿಗೆ ವಿಲೀನಗೊಳಿಸಿ ಶಿಕ್ಷಕರುಗಳ ವೇತನವನ್ನು ಪರಿಷ್ಕರಿಸಿ ಆದೇಶ ಹೊರಡಿಸಲಾಗಿರುತ್ತದೆ. ವಿಶೇಷ ಭತ್ಯೆಯ ಆದೇಶಗಳನ್ನು ದಿನಾಂಕ 01/04/2018ರಿಂದ ಜಾರಿಗೆ ಬರುವಂತೆ ನಿರಸನಗೊಳಿಸಲಾಗಿರುತ್ತದೆ. ಈ ಸೌಲಭ್ಯವು 2007-08ರ ಅಧಿಸೂಚನೆಯನ್ವಯ ಪ್ರಕಟಿಸಲಾದ ಆಯ್ಕೆ ಪಟ್ಟಿಯಲ್ಲಿನ ನಿರ್ದಿಷ್ಟ ಉಪನ್ಯಾಸಕರು/ ಶಿಕ್ಷಕರರಿಗೆ ಮಾತ್ರ ಸೀಮಿತವಾಗಿರಲಿದೆ. ಅಧಿಸೂಚನೆಯ ಅನುಸಾರ ನೇರ ನೇಮಕಾತಿ ಹೊಂದಿದ್ದು, ದಿನಾಂಕ 01/08/2008ರ ನಂತರ ಕಾರ್ಯವರದಿ ಮಾಡಿಕೊಂಡ ಉಪನ್ಯಾಸಕರು/ ಶಿಕ್ಷಕರುಗಳ ಪ್ರಕರಣಗಳಲ್ಲಿ ವಿಶೇಷ ಭತ್ಯೆಯು ಅವರು ಕಾರ್ಯ ವರದಿ ಮಾಡಿಕೊಂಡ ದಿನಾಂಕದಿಂದ ಪರಿಗಣಿಸಿ ಮಂಜೂರು ಮಾಡಲಾಗುತ್ತದೆ. ಸದರಿ ಭತ್ಯೆಯ ಪರಿಷ್ಕರಣೆ ಸೌಲಭ್ಯವನ್ನೂ ಕೂಡ ವಿಸ್ತರಿಸಲಾಗುತ್ತದೆ.

Leave A Reply

Your email address will not be published.