Home Karnataka State Politics Updates Shivamogga Crime: ಫೇಸ್ ಬುಕ್ನಲ್ಲಿ ಭದ್ರಾವತಿ ಶಾಸಕನ ವಿರುದ್ಧ ಪೋಸ್ಟ್ – BJP ಕಾರ್ಯಕರ್ತನ ಕಾರು...

Shivamogga Crime: ಫೇಸ್ ಬುಕ್ನಲ್ಲಿ ಭದ್ರಾವತಿ ಶಾಸಕನ ವಿರುದ್ಧ ಪೋಸ್ಟ್ – BJP ಕಾರ್ಯಕರ್ತನ ಕಾರು ಪುಡಿಪುಡಿ

Hindu neighbor gifts plot of land

Hindu neighbour gifts land to Muslim journalist

Shivamogga Crime: ಶಿವಮೊಗ್ಗ ಫೇಸ್ ಬುಕ್ ನಲ್ಲಿ(Facebook Post)ಶಾಸಕರ ವಿರುದ್ಧ ಬರೆದುಕೊಂಡ ಹಿನ್ನೆಲೆ ಕಿಡಿಗೇಡಿಗಳು ಬಿಜೆಪಿ ಯುವಮೋರ್ಚಾ ಕಾರ್ಯಕರ್ತನ ಕಾರಿನ ಗಾಜುಗಳನ್ನು ಒಡೆದು ಹಾಕಿದ ಘಟನೆ ಭದ್ರಾವತಿಯ ಸಿದ್ದಾಪುರ ಬಡಾವಣೆಯಲ್ಲಿ ನಡೆದಿದ್ದು, ಪ್ರಕರಣದ ಕುರಿತಂತೆ ಮೂವರು ಆರೋಪಿಗಳನ್ನು(Shivamogga Crime) ಬಂಧಿಸಿರುವ ಘಟನೆ ವರದಿಯಾಗಿದೆ.

ಕನಕ ಮಂಟಪದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯ, ಡಿಕೆಶಿ ಮತ್ತು ಭದ್ರಾವತಿ ಶಾಸಕರಿಗೆ ಎಂಪಿಎಂ ಆರಂಭಿಸುವ ಭರವಸೆ ನೀಡಿದ್ದರು. ಭದ್ರಾವತಿ ಶಾಸಕರು ಚುನಾವಣೆಯ ಸಂದರ್ಭ ಎಂಪಿಎಂ ಕಾರ್ಖಾನೆ ಆರಂಭಿಸುವುದಾಗಿ ಹೇಳಿಕೊಂಡಿದ್ದರಂತೆ. ಚುನಾವಣೆ ಗೆದ್ದ ಬಳಿಕ ಕಾರ್ಖಾನೆ ಆರಂಭಿಸದೆ ಹೋದಲ್ಲಿ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದರಂತೆ. ಆದರೆ ಈ ವಿಚಾರದಲ್ಲಿ ಮಾತು ನೀಡಿದ ಹಾಗೆ ನಡೆದುಕೊಳ್ಳದ ಹಿನ್ನೆಲೆ ಪೋಸ್ಟ್ ಒಂದನ್ನು ಹಾಕಲಾಗಿದೆ. ಒಸಿ ಮತ್ತು ಮಟ್ಕಾ ನಿಲ್ಲಿಸಿ ಕಾರ್ಖಾನೆ ಆರಂಭಿಸಿ ಎಂದು ಗೋಕುಲ್ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿಕೊಂಡಿದ್ದು, ಹೀಗಾಗಿ, ಶಾಸಕನ ಬೆಂಬಲಿಗರು ಬೈಕ್‌ನಲ್ಲಿ ಬಂದು ಕಾರಿನ ಗಾಜು ಒಡೆದು ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.

ಒಂದೇ ಬೈಕ್‌ನಲ್ಲಿ ಬಂದ ಮೂವರು ಕಿಡಿಗೇಡಿಗಳು ಕಾರಿನ ಗಾಜು ಒಡೆಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಗೋಕುಲ್ ಅವರ ಮನೆಮುಂದೆ ನಿಂತಿದ್ದ ಮಾರುತಿ ಸ್ವಿಫ್ಟ್ ಕಾರಿನ ಗಾಜು ಒಡೆದು ಹಾಕಿದ್ದ ದುಷ್ಕರ್ಮಿಗಳನ್ನು ಗಣೇಶ (22 ), ಹರ್ಷ (23),ನಂಜೇಗೌಡ (22) ಎಂದು ಗುರುತಿಸಲಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಲಾಗಿದ್ದು ಭದ್ರಾವತಿ ನ್ಯೂಟೌನ್ ಠಾಣೆ ಪೊಲೀಸರು ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಆರ್ಟಿಕಲ್ 370 ರದ್ಧತಿ ಎತ್ತಿ ಹಿಡಿದ ಸುಪ್ರೀಂ ಕೋರ್ಟ್- ಮೋದಿ ಸರ್ಕಾರಕ್ಕೆ ಕೊನೆಗೂ ಧಕ್ಕಿತು ಜಯ !!