Google Pay: ಗೂಗಲ್ ಪೇನಲ್ಲಿ ರೀಚಾರ್ಜ್ ಮಾಡ್ತೀರಾ ?! ಹಾಗಿದ್ರೆ ಇನ್ನು ಫೀಸ್ ಎಂದು ಖಾತೆಯಿಂದ ಕಟ್ ಆಗುತ್ತೆ ಇಷ್ಟು ಮೊತ್ತ?!
Convenience Fee on Mobile Recharge: Google Pay ಯುಪಿಐ ಬಳಸಿ ತಮ್ಮ ಮೊಬೈಲ್ ಅನ್ನು ರೀಚಾರ್ಜ್ ಮಾಡುವ ಬಳಕೆದಾರರಿಗೆ ಶಾಕಿಂಗ್ ಸುದ್ದಿ ಇಲ್ಲಿದೆ. ಇನ್ನುಮುಂದೆ Google Pay ಯುಪಿಐ ಬಳಸಿ ತಮ್ಮ ಮೊಬೈಲ್ ಅನ್ನು ರೀಚಾರ್ಜ್ ಮಾಡುವ ಬಳಕೆದಾರರಿಗೆ ಶುಲ್ಕವನ್ನು ವಿಧಿಸಲು (Convenience Fee)ಪ್ರಾರಂಭಿಸಿದೆ. ಇದರ ಅಡಿಯಲ್ಲಿ, ಕಂಪನಿಯು 3 ರೂ.ವರೆಗೆ ಶುಲ್ಕವನ್ನು ವಿಧಿಸುತ್ತಿದೆ. Google Pay ಮೂಲಕ ಪ್ರಿಪೇಯ್ಡ್ ಯೋಜನೆಗಳನ್ನು ರೀಚಾರ್ಜ್ ಮಾಡುವ ಬಳಕೆದಾರರಿಗೆ ಈ ಶುಲ್ಕ ಅನ್ವಯವಾಗುತ್ತದೆ.
ಈ ಮೊದಲು ಈ ಸೇವೆಗಳು ಸಂಪೂರ್ಣವಾಗಿ ಉಚಿತವಾಗಿತ್ತು. ಟೆಲಿಕಾಂ ಆಪರೇಟರ್ ವಿಧಿಸಿದ ಹಣವನ್ನು ಮಾತ್ರ ಬಳಕೆದಾರರು ಪಾವತಿಸಬೇಕಾಗಿತ್ತು. ನೀವು ಗೂಗಲ್ ಪೇ ಮೂಲಕ ರೀಚಾರ್ಜ್ ಮಾಡುತ್ತಿದ್ದರೂ ಈ ವಿಷಯವನ್ನು ಇಲ್ಲಿಯವರೆಗೆ ಗಮನಿಸಿರಲಿಕ್ಕಿಲ್ಲ. ಆದರೆ ಈಗ Google Pay ಕೂಡಾ Paytm ಮತ್ತು PhonePe ಪಟ್ಟಿಗೆ ಸೇರಿಕೊಂಡಿದೆ. Paytm ಮತ್ತು PhonePe ಕಳೆದ ಹಲವು ದಿನಗಳಿಂದ ಮೊಬೈಲ್ ರೀಚಾರ್ಜ್ ಮೇಲೆ ಹೆಚ್ಚುವರಿ ಶುಲ್ಕ ವಿಧಿಸುತ್ತಿದೆ. ಮೊಬೈಲ್ ರೀಚಾರ್ಜ್‌ನಲ್ಲಿ ವಿಧಿಸಲಾಗುವ Convenience Fee ಕುರಿತು Google ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.
ಮಾಹಿತಿಯ ಪ್ರಕಾರ, Google Pay ಮೂಲಕ 100 ರೂ.ವರೆಗೆ ರೀಚಾರ್ಜ್ ಮಾಡಿದರೆ, ಯಾವುದೇ ರೀತಿಯ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಇದಲ್ಲದೇ 100 ರಿಂದ 200 ರೂ.ಗಳ ರೀಚಾರ್ಜ್‌ಗೆ 2 ರೂ. ಮತ್ತು 300 ರೂ. ಅಥವಾ ಅದಕ್ಕಿಂತ ಹೆಚ್ಚಿನ ರೀಚಾರ್ಜ್‌ಗೆ 3 ರೂ.ಗಳಷ್ಟು ಹಣವನ್ನು ನೀಡಬೇಕಾಗುತ್ತದೆ. ಈ ಹೆಚ್ಚುವರಿ ಶುಲ್ಕ ಪಾವತಿಸುವುದನ್ನು ತಪ್ಪಿಸಬೇಕಾದರೆ ಆಪರೇಟರ್‌ನ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೇರವಾಗಿ ರೀಚಾರ್ಜ್ ಮಾಡಬಹುದು.
ಸದ್ಯ Paytm ಮತ್ತು PhonePeನಂತಹ ಪಾವತಿ ಸೇವಾ ಪೂರೈಕೆದಾರ ಅಪ್ಲಿಕೇಶನ್‌ಗಳ ನಿಯಮಗಳನ್ನು ಅನುಸರಿಸಲು Google Pay ತನ್ನ ನೀತಿಯನ್ನು ಬದಲಾಯಿಸಿದೆ ಎನ್ನಲಾಗಿದೆ.