Arecanut plant: ಮೊದಲ ವರ್ಷದ ಅಡಿಕೆ ಸಸಿಗಳ ಆರೈಕೆಯ ವಿಧಾನ ಹೇಗಿರಬೇಕು, ಯಾವಾಗ ಎಷ್ಟು ಗೊಬ್ಬರ ಹಾಕಬೇಕು ?

Agriculture news method of care of first year arecanut plant when fertilizer applied here is detail

Arecanut plant: ಅಡಿಕೆ ಗಿಡಗಳ ಮೊದಲ ವರ್ಷದಲ್ಲಿ ಸಸಿಗಳಿಗೆ ಬೇಕಾದ ಗೊಬ್ಬರ ಪ್ರಮಾಣವನ್ನು ತಿಳಿಯಲು ಇಲ್ಲಿ ಸೂಚನೆಗಳಿವೆ. ಅಡಿಕೆ ಆಗಲಿ ಯಾವುದೇ ಇತರ ಬೆಳೆಗಳಾಗಲಿ ಒಳ್ಳೆಯ ಗುಣಮಟ್ಟದ ಬೀಜ ಅಥವಾ ಗಿಡಗಳು ಬಹಳ ಮುಖ್ಯ. ಬೀಜ ಮತ್ತು ಗಿಡಗಳ ಆಯ್ಕೆಯ ಬಗ್ಗೆ ಇನ್ನೊಂದು ಬಾರಿ ಹೇಳುತ್ತೇವೆ. ಇದೀಗ ಗಿಡ ನೆಟ್ಟು ಒಂದು ವರ್ಷದ ಒಳಗೆ ಯಾವ ರೀತಿಯಲ್ಲಿ ಪೋಷಣೆ ಮಾಡಬೇಕು ಎನ್ನುವ ಬಗ್ಗೆ ತಿಳಿದುಕೊಳ್ಳೋಣ. 3-4 ವರ್ಷದ ಸಸಿಗಳ (Arecanut plant)ಪೋಷಣೆಯ ಮೇಲೆ ಇವುಗಳ ಇಡೀ ಜೀವಮಾನದ ಬೆಳವಣಿಗೆಯನ್ನು ನಿರ್ಧರಿಸುತ್ತದೆ. ಹಾಗಾಗಿ ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವಂತೆ ಸಸಿಗಳನ್ನು ಪೋಷಿಸಿ ರಕ್ಷಿಸಬೇಕು.

ಅಡಿಕೆ ಸಸಿಗಳಲ್ಲಿ ಮುಂಗಾರು ಮಳೆ: ಪ್ರಾರಂಭವಾಗುವ ಸಮಯದಲ್ಲಿ ಹೊಸ ಬೇರುಗಳ ಉತ್ಪತ್ತಿ ಹೆಚ್ಚು. ಈ ಸಮಯದಲ್ಲಿ ಅಡಿಕೆ ಸಸಿಗೆ ತುರ್ತು ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವ ಉದ್ದೇಶದಿಂದ ಅದಕ್ಕೆ ಸರಿಯಾದ ಗೊಬ್ಬರ ಪ್ರಮಾಣವನ್ನು ಕೊಡಬೇಕು. ಇದರಿಂದ ಸಸಿಗಳ ಉತ್ತಮ ಬೆಳವಣಿಗೆ ಮತ್ತು ಅವುಗಳ ಆರೋಗ್ಯವು ಸುಧಾರಿಸಲು ಸಹಾಯಕವಾಗುತ್ತದೆ.

ಸಾಮಾನ್ಯವಾಗಿ ದೀರ್ಘಾವಧಿ ಬೆಲೆಗಳಿಗೆ ಅವುಗಳ ವಯಸ್ಸಿಗನುಗುಣವಾಗಿ ಪೋಷಕಾಂಶಗಳನ್ನು ನೀಡುವ ಅವಶ್ಯಕವಿದೆ. ಎಳೆಯ ಗಿಡಕ್ಕೆ ಒಂದು ರೀತಿ, ಬೆಳೆದ ಗಿಡಕ್ಕೆ(Arecanut plant) ಇನ್ನೊಂದು ಪ್ರಕಾರ, ಫಸಲು ಕೊಡುತ್ತಿರುವುದಕ್ಕೆ ಬೇರೆಯದೆ ಪ್ರಮಾಣದಲ್ಲಿ ಆಹಾರ ಪೋಷಕ ಸತ್ವಗಳನ್ನು ನೀಡಬೇಕು. ಲೆಕ್ಕಾಚಾರ ನಡೆಸಿ ಯಾವ ಪೋಷಕಗಳನ್ನು ಹೆಚ್ಚು ಕೊಡಬೇಕು ಎಂಬುದನ್ನು ತಿಳಿದು ಅದೇ ರೀತಿಯಲ್ಲಿ ಕಚ್ಚಾಗೊಬ್ಬರ ಅಥವಾ ಕಾಂಪೌಂಡ್ ಗೊಬ್ಬರ ಬೇರೆ ಬೇರೆ ಪ್ರಮಾಣದಲ್ಲಿ ಕೊಡಬೇಕು.

* ಸಾಮಾನ್ಯವಾಗಿ ಅಡಿಕೆ ಗಿಡಗಳಿಗೆ ಮೂರು ಕಂತುಗಳಲ್ಲಿ ಮರ /ಸಸಿಗಳಿಗೆ ಗೊಬ್ಬರ ಹಂಚಿಕೊಡುವುದು ಪ್ರಯೋಜನಕರ.
* ಪ್ರತಿ ವರ್ಷ, ಮುಂಗಾರು ಮಳೆ ಪ್ರಾರಂಭವಾಗುವ ಸಮಯದಲ್ಲಿ ಹಟ್ಟಿ ಗೊಬ್ಬರ ಹಂಚಿಕೊಡುವುದು ಅವಶ್ಯಕ. ಇದು ಸಸ್ಯಬೆಳವಣಿಗೆಗೆ ಬಹು ಮುಖ್ಯ ಕಾಲಘಟ್ಟವಾಗಿರುತ್ತದೆ.
* ಮಳೆಗಾಲದಲ್ಲಿ ಮಣ್ಣು ಸಡಿಲವಾಗಿರುವುದರಿಂದ ಮತ್ತು ಅತ್ಯಂತ ಹೆಚ್ಚು ತೇವಾಂಶ ಹೊಂದಿರುವ ಕಾರಣ ಈ ಸಮಯದಲ್ಲಿ ಗೊಬ್ಬರ ಕೊಡುವುದು ಆಗತ್ಯ. ನೀರಿಗೆ ಕೊರತೆ ಇಲ್ಲದ ಜೀವಂತಿಕೆ ಇರೋ ಆ ಸಂದರ್ಭದಲ್ಲಿ ಗಿಡಗಳು ಬೆಳೆಯಲು ಅನುಕೂಲ ಆಗುತ್ತದೆ.

ಒಂದು ವರ್ಷದ ಅಡಿಕೆ ಸಸಿಗೆ( Arecanut plant) ಏನು ಗೊಬ್ಬರ ?
* ಅಡಿಕೆ ಸಸಿಗೆ ವರ್ಷಕ್ಕೆ ಒಮ್ಮೆ ಸುಮಾರು 5 ಕಿಲೋ ಒಣ ಗೊಬ್ಬರ ಅಥವಾ ಕುರಿ ಗೊಬ್ಬರ ಕೊಡಬೇಕು. ಅಥವಾ ಕೋಳಿ ಗೊಬ್ಬರ ಕೂಡಾ ಆಗುತ್ತದೆ. ಆದರೆ, ಕೋಳಿ ಗೊಬ್ಬರ ಖಾರ ಆಗಿರುವುದರಿಂದ ಪ್ರಮಾಣ ಕಮ್ಮಿ ಮಾಡಿಕೊಳ್ಳಿ ಮತ್ತು ಇತರ ಗೊಬ್ಬರಗಳ ಜತೆ ಮಿಶ್ರಣ ಮಾಡಬೇಕು.
* ಈ ಕೊಡುವ ಗೊಬ್ಬರ ಹಾಳು ಮೂಳು ಸೊಪ್ಪು ಸದೆಯ ಗೊಬ್ಬರದ ಅಂಶ ಕಮ್ಮಿ ಇರುವ ಗೊಬ್ಬರದ ವಸ್ತುಗಳು ಇರಲೇಬೇಕು. ಮತ್ತು ಅದು ಸುಮಾರು 8 – 15 ಕೆಜಿ ಆಗಿದ್ದರೂ ಏನೂ ತೊಂದರೆ ಇಲ್ಲ. ಹೀಗೆ ಕೊಡುವ ಕಡಿಮೆ ಪೋಷಕಾಂಶದ ಈ ಗೊಬ್ಬರ ಸಾಕಷ್ಟು ತೇವಾಂಶ ಹಿಡಿದಿಡುವುದರಿಂದ ಈ ಗೊಬ್ಬರ ಉಳಿದ ಅಥವಾ ನಾವು ಕೊಡುವ ಕುರಿ ಕೋಳಿ ಗೊಬ್ಬರಗಳ ಫಲವತ್ತಾದ ಅಂಶಗಳು ಗಿಡಗಳಿಗೆ ಸುಲಭವಾಗಿ ಪ್ರಾಪ್ತವಾಗಿ ಫಲಿತಾಂಶ ಪ್ರಾಪ್ತವಾಗುತ್ತದೆ. ಗಿಡದ ಬುಡದ ಸಡಿಲವಾಗಿ ನೀರು ಗಾಳಿ ಆಡಲು ಸುಲಭವಾಗುತ್ತದೆ.

ಎಷ್ಟು ಪ್ರಮಾಣದ ಗೊಬ್ಬರ:
* ಹೆಚ್ಚಿನ ಮಳೆಯ ಪ್ರದೇಶಗಳಲ್ಲಿ ನೈಟ್ರೋಫೋಸ್ಟೇಟ್ ಗೊಬ್ಬರವಾದ 15:15:15 (ಸುಫಲಾ) ಅನುಕೂಲಕರವಾಗಿದೆ. ಅಥವಾ NPK ಮಿಶ್ರಣ ಮಾಡಿ ಕೊಡಬಹುದು.
* ಇತರ ಪ್ರದೇಶಗಳಲ್ಲಿ 17:17:17 ಗೊಬ್ಬರ ಹಂಚಿಕೊಡುವುದು ಸೂಕ್ತವಾಗಿದೆ.
* ಒಂದು ವರ್ಷದ ಅಡಿಕೆ ಗಿಡಕ್ಕೆ ವರ್ಷಕ್ಕೆ 35 ಗ್ರಾಂ ಸಾರಜನಕ, 15 ಗ್ರಾಂ ರಂಜಕ, ಮತ್ತು 45 ಗ್ರಾಂ ಪೊಟ್ಯಾಶ್ ನ ಅವಶ್ಯಕತೆ ಇದೆ.
*17:17:17 ಗೊಬ್ಬರದಲ್ಲಿ 2% ಪೋಷಕಗಳು ಹೆಚ್ಚಿರುವುದರಿಂದ ಇದರ ಪ್ರಮಾಣವನ್ನು ಮೂರು ಸಮಾನ ಕಂತುಗಳ ಮೂಲಕ ಕೊಡುವುದು ಅತ್ಯಂತ ಉತ್ತಮ.
* ಕೆಲವರು ಬೇಸಿಗೆಯಲ್ಲಿ ಪ್ರತಿ ತಿಂಗಳೂ ಗೊಬ್ಬರ ಕೊಡುತ್ತಾರೆ. ಹಾಗೆ ಗೊಬ್ಬರ ಕೊಡುವವರು ಮಳೆಗಾಲದ ಆರಂಭದಲ್ಲಿ 1/3 ಭಾಗವನ್ನು ಕೊಡಬೇಕು ಮತ್ತು ಉಳಿದ ಪ್ರಮಾಣವನ್ನು ಸೆಪ್ಟೆಂಬರ್ ನ ನಂತರದ ಪ್ರತಿ ತಿಂಗಳಿಗೆ ಬೇಕಾದಂತೆ ವಿಂಗಡಿಸಿ ಕೊಡಬೇಕು.
* ಸರ್ಕಾರಿ ಕಾಂಪ್ಲೆಕ್ಸ್ ಗೊಬ್ಬರ ಕೊಡುವಾಗ ಪ್ರತಿ ಮರಕ್ಕೆ 100 ಗ್ರಾಂ ಸುಫಲಾ ಮತ್ತು 50 ಗ್ರಾಂ NPK ಕೊಟ್ಟರೆ ಅದು ಸಸಿಗೆ ಬೇಕಾದ ಪೋಷಕಗಳನ್ನು ನೀಡುತ್ತದೆ. ಈ ರೀತಿ ಹಂಚಿದ ಗೊಬ್ಬರ ಮೂಲಕ ಗಿಡಕ್ಕೆ ಅಗತ್ಯವಾದ ಸಾರಜನಕ, ಫಾಸ್ಪರಸ್ ಮತ್ತು ಪೊಟ್ಯಾಶಿಯ ಅಗತ್ಯ ತೃಪ್ತಿಯಾಗುತ್ತದೆ.

* ಕೆಲವರು, ಮಳೆ ಕಮ್ಮಿ ಆದ ನಂತರ ಸಪ್ಟೆಂಬರ್ ತಿಂಗಳಲ್ಲಿ ಒಮ್ಮೆಲೇ ಕೊಡುತ್ತಾರೆ. ಆಗ ಗಿಡಕ್ಕೆ 50 ಗ್ರಾಂ ಯೂರಿಯಾ ಮತ್ತು 50 ಗ್ರಾಂ ಮ್ಯುರೇಟ್ ಆಫ್ ಪೊಟ್ಯಾಶ್ ಸಾಕಾಗುತ್ತದೆ. ಹೆಚ್ಚಿನ ಪ್ರಮಾಣ ಒಮ್ಮೆಲೇ ನೀಡುವುದು ಬೇರಿಗೆ ಹಾನಿಕರ.
* ಮತ್ತೆ ಕೆಲವರು, ನೀರಿನ ಟ್ಯಾಂಕಿಗೆ ಗೊಬ್ಬರ ಹಾಕಿ ಇದನ್ನು ಹನಿ ನೀರಾವರಿಯ ಮೂಲಕ ಕೊಡುವಾಗ ಮಾಸಿಕ ಒಂದು ಗಿಡಕ್ಕೆ 6-7 ಗ್ರಾಂ ಪ್ರಮಾಣದಲ್ಲಿ ಸಾಕಾಗುತ್ತದೆ. ಎಷ್ಟು ನೀರು, ಎಷ್ಟು ಗೊಬ್ಬರ ಎನ್ನುವುದನ್ನು ಗಿಡಗಳ ಸಂಖ್ಯೆಯ ಆಧಾರದಲ್ಲಿ ಲೆಕ್ಕಾಚಾರ ಮಾಡಿಕೊಳ್ಳಬೇಕು. ಇಲ್ಲಿ ಜಾಗ್ರತೆ ವಹಿಸುವ ಅಗತ್ಯ ಏನೆಂದರೆ, ಹಾನಿ ನೀರಾವರಿಯ ಮೂಲಕ ಎಲ್ಲಾ ಸಸ್ಯಗಳಿಗೂ ಸಮಾನ ಪ್ರಮಾಣದ ನೀರು ಮಿಶ್ರಿತ ಗೊಬ್ಬರ ಹೋಗಬೇಕು. ನೀರು ಹಾಯಿಸುವಾಗ ಆ ಬಗ್ಗೆ ಜಾಗ್ರತೆ ವಹಿಸಬೇಕು.

*ಹೆಚ್ಚುವರಿ ಪೋಷಕಾಂಶ:*
*ಸಾರಜನಕ ಮತ್ತು ಪೊಟ್ಯಾಶ್ ಪ್ರಮಾಣದ ಬದಲಾಗಿ, ಮಳೆಗಾಲ ಪ್ರಾರಂಭವಾದ ಸಮಯದಲ್ಲಿ ಗಿಡಕ್ಕೆ ಮೆಗ್ನಿಶಿಯಂ ಸಲ್ವೇಟ್ 10 ಗ್ರಾಂ ಮತ್ತು ಸತುವಿನ ಸಲ್ವೇಟು 5 ಗ್ರಾಂ ಮತ್ತು ಕ್ಯಾಲ್ಸಿಯಂ 50 ಗ್ರಾಂ ಕೊಡುವ ಅಭ್ಯಾಸ ಇದೆ. ಈ ಪೋಷಕಾಂಶಗಳು ಎಳವೆಯಲ್ಲಿ ಗಿಡಕ್ಕೆ ಅಂತರ್ಗತ ಶಕ್ತಿಯನ್ನು ಹೆಚ್ಚಿಸುತ್ತವೆ.

*ನೀರಿಗೆ ಗೊಬ್ಬರ ಹಾಕುವ ಪರಿಮಾಣ:*
ಈ ಪ್ರಮಾಣವನ್ನು ಅನುಗುಣವಾಗಿ ಪಾಲಿಸಲು ಅನುಕೂಲವಾಗಬೇಕಾದರೆ 200 ಲೀಟರ್ ನೀರಿಗೆ 3 ಕಿ. ಸುಫಲ ಗೊಬ್ಬರವನ್ನು ಹಾಕಿ, ಮಿಶ್ರಣ ಮಾಡಿ ಅಡಿಗೆ ಸಸಿ/ ಮರಕ್ಕೆ ಒಂದು ಲೀಟರ್ ಪ್ರಮಾಣದಲ್ಲಿ ಎರೆಯಬೇಕು.
ಉಳಿದಕ್ಕೂ ಕೂಡ ಇದೇ ರೀತಿ ಪ್ರಮಾಣವನ್ನು ಲೆಕ್ಕಾಚಾರ ಹಾಕಿ 2 ಕಿಲೋ ಮೆಗ್ನೀಷಿಯಂ ಸಲ್ಫೇಟ್ + ಕಿಲೋ ಸತುವಿನ ಸಲ್ಫೇಟ್ ಮಿಶ್ರಣ ಮಾಡಿ ಪ್ರತಿ ಗಿಡಕ್ಕೆ ಒಂದು ಲೀಟರ್ ಪ್ರಮಾಣ ಬರುವಂತೆ ಏರೆಯಬೇಕು.
ಸಣ್ಣ ಪ್ರಮಾಣದ ಸುಣ್ಣವನ್ನು ಮಳೆ ಬರುವ ಸಮಯದಲ್ಲಿ ಹಾಕಿದರೆ ಉತ್ತಮ. ಇದಕ್ಕೆ ಮಳೆ ಬರುವ ಸಮಯದ ಏಳು ದಿನಕ್ಕೆ ಮುಂಚೆ ಬೇರುಗಳು ಹಬ್ಬಿರುವ ಜಾಗಕ್ಕೆಲ್ಲ ಹರಡಬೇಕು. ಎಲೆ ಪ್ರಾಯದ ಸಸಿಗಳ ಬೆಳವಣಿಗೆಗೆ ಸುಣ್ಣದ ಪೂರೈಕೆ ಉಪಯುಕ್ತಕಾರಿ.

ಇದನ್ನೂ ಓದಿ: ದುಡ್ಡಿನ ವಿಷ್ಯದಲ್ಲಿ ಇದೊಂದು ನಿಯಮ ಪಾಲಿಸಿ ಸಾಕು – ಆದಷ್ಟು ಬೇಗ ನಿಮ್ಮನ್ನು ಕೋಟ್ಯಾದೀಶ್ವರರನ್ನಾಗಿ ಮಾಡುತ್ತೆ !!

Leave A Reply

Your email address will not be published.