BJP: ಬಿಜೆಪಿಯ ‘ಕಮಲ’ ಚಿಹ್ನೆ ಬದಲಾವಣೆ ?!

Political news BJP party flag symbol of lotus changed here is details

BJP lotus symbol: ಕಮಲ ನಮ್ಮ ರಾಷ್ಟ್ರೀಯ ಹೂವು ಆದರೂ ಇಂದು ಕಮಲ ಎಂದಾಕ್ಷಣ ನೆನಪಿಗೆ ಬರುವುದು ಬಿಜೆಪಿ. ಬಿಜೆಪಿ(BJP) ಎಂದರೆ ಕಮಲ, ಕಮಲ ಎಂದರೆ ಬಿಜೆಪಿ. ಅಂದರೆ ಭಾರತೀಯ ಜನತಾ ಪಾರ್ಟಿಯ ಚಿಹ್ನೆಯಾಗಿ ಕಮಲ(BJP lotus symbol) ಆಗಿರವುದು ಇದಕ್ಕೆ ಕಾರಣ. ಆದರೀಗ ಬಿಜೆಪಿಯ ಈ ಸಂಕೇತಕ್ಕೆ ಇದೀಗ ಸಂಚಕಾರ ಎದುರಾಗಿದ್ದು, ಬಿಜೆಪಿಯ ಚಿನ್ಹೆ ಬದಲಾಗುತ್ತಾ ಎಂಬ ಆತಂಕ ಎದುರಾಗಿದೆ.

 

ಹೌದು, ಬಿಜೆಪಿ ಸಂಕೇತ ಕಮಲ ಇದೀಗ ಮದ್ರಾಸ್ ಹೈಕೋರ್ಟ್(Madras high court)ನ ಕಟಕಟೆಯಲ್ಲಿ ನಿಂತಿದೆ. ಅಂದರೆ ಮದ್ರಾಸ್‌ ಹೈಕೋರ್ಟಿನಲ್ಲೊಂದು ಈ ಕುರಿತಾದ ಕೇಸ್ ಒಂದು ದಾಖಲಾಗಿದ್ದು ಬಿಜೆಪಿಯ ಚಿಹ್ನೆಯಾಗಿರುವ ಕಮಲವು ರಾಷ್ಟ್ರೀಯ ಹೂವಾಗಿದ್ದು, ಧಾರ್ಮಿಕ ಸಂಕೇತವೂ ಆಗಿದೆ. ಹಾಗಾಗಿ ಅದನ್ನ ರಾಜಕೀಯ ಪಕ್ಷದ ಚಿಹ್ನೆಯಾಗಿ ಬಳಸುವುದು ರಾಷ್ಟ್ರೀಯ ಸಮಗ್ರತೆಗೆ ಅಗೌರವ ತೋರಿದಂತೆ ಎಂದು ರಮೇಶ್‌ ಎಂಬುವವರು ಮದ್ರಾಸ್‌ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ.

ಅಂದಹಾಗೆ ಸೋಶಿಯಲಿಸ್ಟ್‌ ಪಕ್ಷದ ಮುಖ್ಯಸ್ಥರಾಗಿರುವ ರಮೇಶ್‌(Ramesh) ಅವರು ಚಿಹ್ನೆ ನೀಡುವಾಗ ಭಾರತೀಯ ಚುನಾವಣಾ ಆಯೋಗವು ತನ್ನದೇ ನೀತಿ-ನಿಯಮಗಳನ್ನು ಉಲ್ಲಂಘಿಸಿದೆ. ಈ ರೀತಿಯ ಪಕ್ಷಪಾತದಿಂದಾಗಿ ಇತರ ಪಕ್ಷಗಳಿಗೆ ಅನ್ಯಾಯವಾಗುತ್ತಿದೆ ಎಂದು ವಾದ ಮಂಡಿಸಿದ್ದಾರೆ.

ಇನ್ನು ಅರ್ಜಿಯನ್ನು ವಿಚಾರಣೆ ನಡೆಸಿರುವ ನ್ಯಾ| ಎಸ್‌ವಿ ಗಂಗಾಪುರ್‌ವಾಲಾ ಅವರು ಅರ್ಜಿದಾರರಿಗೆ 20,000 ಡೆಪಾಸಿಟ್ ನೀಡಲು ಸೂಚಿಸಿದ್ದು ಡಿ.18 ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿದ್ದಾರೆ.

ಇದನ್ನೂ ಓದಿ: Ashok shanabhag: ‘ಮೂರು ಮುತ್ತು’ ಖ್ಯಾತಿಯ ಅಶೋಕ್ ಶ್ಯಾನಭಾಗ್ ನಿಧನ !!

Leave A Reply

Your email address will not be published.