PM Modi: ಲೋಕಸಭಾ ಚುನಾವಣೆಗೆ ಮೋದಿಯಿಂದ ಹೊಸ ಗ್ಯಾರಂಟಿ ಘೋಷಣೆ !!

National political news Return every Paisa PM Modi salms Congress over Jharkhand Odisha It raids

PM Modi: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಹೊಸ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಗೆ ಎಚ್ಚರಿಸಿದ್ದಾರೆ. ಹೌದು, ‘ಜನರಿಂದ ಲೂಟಿ ಮಾಡಿದ ಪ್ರತಿ ಪೈಸೆಯನ್ನೂ ಹಿಂದಿರುಗಿಸಬೇಕು, ಇದು ಮೋದಿ ಗ್ಯಾರಂಟಿ’ ಎಂದು ಕಿಡಿ ಕಾರಿದ್ದಾರೆ.

 

ಒಡಿಶಾದ ಕಾಂಗ್ರೆಸ್‌ ಸಂಸದ ಧೀರಜ್‌ ಸಾಹು ಅವರಿಗೆ ಸೇರಿವೆ ಎನ್ನಲಾದ ಸ್ಥಳಗಳ ಮೇಲೆ ಒಡಿಶಾದಲ್ಲಿ ದಾಳಿ ಮಾಡಿರುವ ಆದಾಯ ತೆರಿಗೆ ಇಲಾಖೆ, 225 ಕೋಟಿ ರೂ. ಗೂ ಹೆಚ್ಚು ನಗದು ವಶಕ್ಕೆ ಪಡೆದಿರುವ ಬೆನ್ನಲ್ಲೇ ಕಾಂಗ್ರೆಸ್‌ ವಿರುದ್ಧ ಮೋದಿ ಕಿಡಿಕಾರಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಮೋದಿ ಅವರು ‘ದೇಶದ ಜನರು ಈ ನೋಟುಗಳ ಕಂತೆಯನ್ನು ನೋಡಬೇಕು ಮತ್ತು ಅದರ (ಕಾಂಗ್ರೆಸ್) ನಾಯಕರನ್ನು ‘ನಿಮ್ಮ ಪ್ರಾಮಾಣಿಕತೆಯ ವಿಳಾಸ ಎಲ್ಲಿದೆ’ ಎಂದು ಕೇಳಬೇಕು. ಜನರಿಂದ ಲೂಟಿ ಮಾಡಿದ ಪ್ರತಿ ಪೈಸೆಯನ್ನೂ ಹಿಂದಿರುಗಿಸಬೇಕಾಗುತ್ತದೆ. ಇದು ಮೋದಿ ಗ್ಯಾರಂಟಿ’ ಎಂದಿದ್ದಾರೆ.
ಇದರೊಂದಿಗೆ ಐಟಿ ವಶಕ್ಕೆ ಪಡೆದಿರುವ ಹಣದ ಕಂತೆಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಈಗಾಗಲೇ ಐಟಿ ವಶಪಡಿಸಿಕೊಂಡಿರುವ ಭಾರೀ ಮೊತ್ತದ ನೋಟುಗಳನ್ನು ಎಣಿಸಲು ಸುಮಾರು 8 ಯಂತ್ರಗಳನ್ನು ಬಳಸಲಾಗುತ್ತಿದೆ. ಇನ್ನೂ ಹೆಚ್ಚುವರಿ 2 ಯಂತ್ರಗಳನ್ನು ತರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ನೋಟು ಎಣಿಕೆಯಲ್ಲಿ 30 ಬ್ಯಾಂಕ್‌ ಸಿಬ್ಬಂದಿಗಳು ಭಾಗಿಯಾಗಿದ್ದಾರೆ. ಎಣಿಕೆ ಆಗದ 150 ಹಣದ ಬ್ಯಾಗ್‌ಗಳನ್ನು ಭಾರತೀಯ ಸ್ಟೇಟ್‌ ಬ್ಯಾಂಕ್‌ ಖಾತೆಗೆ ಕೊಂಡೊಯ್ಯಲಾಗಿದೆ.

ಇದನ್ನೂ ಓದಿ: ಡೀಸೆಲ್ ವಾಹನ ಹೊಂದಿರೋರಿಗೆ ಸಂತಸದ ಸುದ್ದಿ- ನಿತಿನ್ ಗಡ್ಕರಿ ಹೊಸ ಘೋಷಣೆ

Leave A Reply

Your email address will not be published.