Aditya-L1 Captures sun image: ಸೂರ್ಯನ ಫೋಟೋ ಸೆರೆಹಿಡಿದ ಭಾರತದ ‘ಆದಿತ್ಯಾ’ – ಅಬ್ಬಬ್ಬಾ.. ಒಂದೊಂದೂ ಫೋಟೋ ಕೂಡ ರೋಚಕ !!

National news isro Aditya-L1 suits captured first full disk image of sun photo viral

ISRO Spacecraft Aditya-L1 Captures Sun First image: ಇಸ್ರೋ ಆದಿತ್ಯ ಎಲ್‌-1 ಬಾಹ್ಯಾಕಾಶ ನೌಕೆಯಲ್ಲಿರುವ ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್(SUIT) ಮೂಲಕ ಸೂರ್ಯನ ಡಿಸ್ಕ್‌ನ ಆರಂಭಿಕ ಸಂಪೂರ್ಣ ಚಿತ್ರಗಳನ್ನು (ISRO Spacecraft Aditya-L1 Captures Sun First imagr)ಸೆರೆಹಿಡಿದಿದೆ.

 

ಬಾಹ್ಯಾಕಾಶದಲ್ಲಿ ಒಂದಲ್ಲ ಒಂದು ಸಾಧನೆಗೆ ಮುನ್ನುಡಿ ಬರೆಯುತ್ತಿರುವ ಇಸ್ರೋ ಆದಿತ್ಯ ಎಲ್‌-1 ಬಾಹ್ಯಾಕಾಶ ನೌಕೆಯಲ್ಲಿರುವ ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್( ISRO Spacecraft Aditya L1 Captures Sun First Pictures)ಮೂಲಕ ಸೂರ್ಯನ ಡಿಸ್ಕ್‌ನ ಆರಂಭಿಕ ಸಂಪೂರ್ಣ ಚಿತ್ರಗಳನ್ನು ಸೆರೆಹಿಡಿದಿದೆ. ಈ ಮೂಲಕ ಸೂರ್ಯನಿಂದ ಲಕ್ಷಾಂತರ ಕಿಲೋಮೀಟರ್ ದೂರದಿಂದಲೇ ಕ ಸೂರ್ಯನ ಹತ್ತಿರದ ಚಿತ್ರಗಳನ್ನು ನೋಡಲು ಅನುವು ಮಾಡಿಕೊಟ್ಟಿದೆ. ಆದಿತ್ಯ-ಎಲ್1 (Aditya L1)ಬಾಹ್ಯಾಕಾಶದಿಂದ ಸೂರ್ಯನ ಅನೇಕ ಚಿತ್ರಗಳನ್ನು ಹಂಚಿಕೊಂಡಿದ್ದು, ಒಂದೊಂದು ಫೋಟೋ ಕೂಡ ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

“ಆದಿತ್ಯ-ಎಲ್ 1 ನಲ್ಲಿರುವ ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್ (ಎಸ್‌ಯುಐಟಿ) ಉಪಕರಣವು 200-400 ಎನ್‌ಎಂ ತರಂಗಾಂತರ ವ್ಯಾಪ್ತಿಯಲ್ಲಿ ಸೂರ್ಯನ ಮೊದಲ ಪೂರ್ಣ-ಡಿಸ್ಕ್ ಚಿತ್ರಗಳನ್ನು ಯಶಸ್ವಿಯಾಗಿ ಸೆರೆಹಿಡಿದಿದೆ’ ಎಂಬ ಮಾಹಿತಿಯನ್ನು ಇಸ್ರೋ ಹಂಚಿಕೊಂಡಿದೆ. ISRO SUIT ತೆಗೆದ ಚಿತ್ರಗಳನ್ನು X ನಲ್ಲಿ ಪೋಸ್ಟ್ ಮಾಡಿದ್ದು, “SUIT ಪೇಲೋಡ್ ಸೂರ್ಯನ ಪೂರ್ಣ-ಡಿಸ್ಕ್ ಚಿತ್ರಗಳನ್ನು ನೇರಳಾತೀತ ತರಂಗಾಂತರಗಳಲ್ಲಿ ಸೆರೆಹಿಡಿದಿದೆ” ಎಂದು ತಿಳಿಸಿದೆ. ಈ ಚಿತ್ರಗಳು 200-400 ನ್ಯಾನೋ ಮೀಟರ್ ತರಂಗಾಂತರದ ವ್ಯಾಪ್ತಿಯಲ್ಲಿ ಸೂರ್ಯನ ಪೂರ್ಣ-ಡಿಸ್ಕ್ ಚಿತ್ರಣಗಳನ್ನು ಯಶಸ್ವಿಯಾಗಿ ದಾಖಲಿಸಿದ್ದು, ಇವುಗಳು ಇಸ್ರೋ ವಿಜ್ಞಾನಿಗಳಿಗೆ ಜಾಗತಿಕ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡುವಲ್ಲಿ ನೆರವಾಗುವುದರಲ್ಲಿ ಸಂಶಯವಿಲ್ಲ.

ಇದನ್ನೂ ಓದಿ: RBI ಹೊಸ ರೂಲ್ಸ್- ಒಬ್ಬ ವ್ಯಕ್ತಿ ಇಷ್ಟು ಬ್ಯಾಂಕ್ ಖಾತೆ ಮಾತ್ರ ಹೊಂದಬೇಕು

Leave A Reply

Your email address will not be published.