Foamy Urine: ಮೂತ್ರ ಮಾಡಿದಾಗ ಈ ಲಕ್ಷಣ ಏನಾದ್ರೂ ಕಂಡುಬರುತ್ತಾ? ಹಾಗಿದ್ರೆ ಬೇಡ ನೆಗ್ಲೇಟ್ !!

Lifestyle health care foamy urine symptoms causes and treatment complete detail in kannada

Foamy Urine: ನಾವು ಸೇವಿಸುವ ಆಹಾರ ತ್ಯಾಜ್ಯವಾಗಿ ದೇಹದಿಂದ(Body )ಹೊರ ಹೋಗುತ್ತದೆ. ಈ ಒಂದು ಪ್ರಕ್ರಿಯೆಗೆ ನಮ್ಮ ಜೀರ್ಣಾಂಗ ವ್ಯವಸ್ಥೆ (Digestion System) ಹಾಗೂ ಇನ್ನಿತರ ಅಂಗಾಂಗಗಳು ಸೇರಿ ಕೆಲಸ ಮಾಡುತ್ತವೆ. ನಾವು ತಿನ್ನುವ ಆಹಾರದಲ್ಲಿ (Food)ಇರುವ ಪೌಷ್ಟಿಕ ಸತ್ವಗಳನ್ನು ನಮ್ಮ ದೇಹಕ್ಕೆ ತಲುಪಿಸಿ ಉಳಿದ ತ್ಯಾಜ್ಯವನ್ನು ಮಲ ಹಾಗೂ ಮೂತ್ರದ (Urine)ರೂಪದಲ್ಲಿ ಹೊರಗೆ ತಳ್ಳುತ್ತವೆ. ಇಂದಿನ ಒತ್ತಡಯುತ ಜೀವನ ಶೈಲಿ ಮತ್ತು ಆಹಾರ ಕ್ರಮದಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿವೆ. ಇದರ ಜೊತೆಗೆ ಮೂತ್ರದ ಬಣ್ಣ( Foamy Urine)ಬದಲಾವಣೆ ಕಾಣಿಸಬಹುದು.

 

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮೂತ್ರ ಸಂಬಂಧಿ ಕಾಯಿಲೆಗಳನ್ನು ಎದುರಿಸುತ್ತಿದ್ದು, ಮೂತ್ರದ ಸೋಂಕು, ಮೂತ್ರದ ಬಣ್ಣ ಮತ್ತು ವಾಸನೆಯಲ್ಲಿ ಬದಲಾವಣೆ ಕಾಣಿಸಬಹುದು. ಇದರ ಜೊತೆಗೆ ಮೂತ್ರ ವಿಸರ್ಜನೆಯ ಸಮಯದಲ್ಲಿ ಮೂತ್ರದಲ್ಲಿ ನೊರೆ ನೊರೆ ಬರುತ್ತಿದೆ ಎಂದರೆ ದಯವಿಟ್ಟು ಕಡೆಗಣಿಸಲೇಬೇಡಿ!! ಏಕೆಂದರೆ, ಮೂತ್ರ ನೊರೆ ನೊರೆಯಾಗಿ ಕಂಡುಬಂದಲ್ಲಿ ಅನೇಕ ಅಪಾಯಕಾರಿ ರೋಗಗಳ ಆರಂಭಿಕ ಲಕ್ಷಣವಾಗಿರಬಹುದು.

ಮೂತ್ರ ವಿಸರ್ಜನೆಯ ಸಮಯದಲ್ಲಿ ಮೂತ್ರದಲ್ಲಿ ನೊರೆ ನೊರೆ ಬರಲು ಕಾರಣಗಳೇನು ಗೊತ್ತಾ??

ನೊರೆ ಮೂತ್ರಕ್ಕೆ ಕಾರಣಗಳು:
* ಕಿಡ್ನಿ ಸಮಸ್ಯೆ:
ಕೆಲವರಲ್ಲಿ ಮೂತ್ರ ನೊರೆಯಾಗಿ ಕಂಡುಬರಲು ಕಿಡ್ನಿ ಸಮಸ್ಯೆ ಕಾರಣವಾಗಿರಬಹುದು. ಇದಲ್ಲದೆ, ದೇಹದಲ್ಲಿ ನೀರಿನಂಶ ಕಡಿಮೆ ಇರುವವರಲ್ಲಿ ಕೂಡ. ಕಿಡ್ನಿ ಕಲ್ಲುಗಳ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.

* ಮಧುಮೇಹ:
ಮಧು ಮೇಹದಿಂದ ಬಳಲುತ್ತಿರುವವರು ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು ಹೆಚ್ಚಿನವರಿಗೆ ಗೊತ್ತಿರುವ ಸಂಗತಿ. ಇದಲ್ಲದೇ ಮೂತ್ರದಲ್ಲಿ ನೊರೆ ಕೂಡ ಬರುವ ಸಾಧ್ಯತೆ ಹೆಚ್ಚು. ಈ ರೀತಿಯ ಮೂತ್ರದ ಸಮಸ್ಯೆ ನಿಮಗೆ ಎದುರಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಇಲ್ಲದೆ ಹೋದರೆ ಇವುಗಳು ವಿವಿಧ ರೀತಿಯ ಸೋಂಕುಗಳಿಗೆ ಕಾರಣವಾಗುವ ಸಾಧ್ಯತೆಗಳಿವೆ.

* ಅಮಿಲೋಯ್ಡೋಸಿಸ್:
ಅಮಿಲೋಯ್ಡೋಸಿಸ್ ಬಹಳ ಅಪರೂಪದ ಕಾಯಿಲೆಯಿಂದ ಕೂಡ ಮೂತ್ರದಲ್ಲಿ ನೊರೆ ಕಂಡುಬರುವ ಸಾಧ್ಯತೆ ಬಗ್ಗೆ ತಜ್ಞರು ಮಾಹಿತಿ ನೀಡುತ್ತಾರೆ. ಇದರಿಂದ ಕೆಲವರಲ್ಲಿ ಮೂತ್ರ ವಿಸರ್ಜನೆಯ ಸಮಸ್ಯೆ ಕೂಡ ಕಂಡುಬರುತ್ತದೆ.

* ಕಡಿಮೆ ನೀರು ಕುಡಿಯುವುದು:
ಬಾಯಾರಿಕೆಯಾದಾಗ ಮಾತ್ರ ನೀರು ಕುಡಿಯುವ ಅಭ್ಯಾಸ ಹೆಚ್ಚಿನವರಿಗೆ ಇದೆ. ಈ ಅಭ್ಯಾಸದಿಂದ ಮೂತ್ರಪಿಂಡ ಹಾನಿಗೊಳಗಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ದಿನಕ್ಕೆ ಎರಡರಿಂದ ಮೂರು ಲೀಟರ್ ನೀರು ಕುಡಿಯುವ ಅಭ್ಯಾಸ ಇಟ್ಟುಕೊಂಡರೆ ಒಳ್ಳೆಯದು . ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೆ ನೊರೆ ಮೂತ್ರ ಹಾಗೂ ಮೂತ್ರದ ಬಣ್ಣ ಬದಲಾವಣೆಯ ಲಕ್ಷಣಗಳು ಕಂಡುಬರುತ್ತವೆ.

* ಒತ್ತಡ:
ಹೆಚ್ಚು ಒತ್ತಡ ಉಂಟಾದಾಗ ಕೂಡ ಮೂತ್ರದಲ್ಲಿ ನೊರೆ ಕಂಡುಬರುವ ಸಾಧ್ಯತೆಗಳಿವೆ.

ಇದನ್ನೂ ಓದಿ: ಈ ಜಿಲ್ಲೆಯ ರೈತರಿಗೆ ಭರ್ಜರಿ ಸುದ್ದಿ- ನೀರಾವರಿಗಾಗಿ ನಿಮಗೆ ಸಿಗಲಿದೆ ಶೇ.90 ರಷ್ಟು ಸಹಾಯಧನ !!

Leave A Reply

Your email address will not be published.