Drip Irrigation: ಈ ಜಿಲ್ಲೆಯ ರೈತರಿಗೆ ಭರ್ಜರಿ ಸುದ್ದಿ- ನೀರಾವರಿಗಾಗಿ ನಿಮಗೆ ಸಿಗಲಿದೆ ಶೇ.90 ರಷ್ಟು ಸಹಾಯಧನ !!

Karnataka news agriculture news drip irrigation in 14 district latest news

Drip Irrigation: ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ನಡುವೆ, ಈ ಬಾರಿ ಮಳೆ ಕೊರತೆಯಾಗಿರುವ ಹಿನ್ನೆಲೆ ರೈತರಿಗೆ ಸಮಸ್ಯೆ ಎದುರಾಗಿದೆ. ಹೀಗಾಗಿ, ರಾಜ್ಯದ 14 ಜಿಲ್ಲೆಗಳಲ್ಲಿ ಅಟಲ್ ಭೂಜಲ ಯೋಜನೆಯಡಿ ಸೂಕ್ಷ್ಮ ನೀರಾವರಿ (Atal Water Scheme)ಕಾರ್ಯಕ್ರಮ ಜಾರಿಗೊಳ್ಳಲಿದೆ.

 

ರಾಜ್ಯದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಅಂತರ್ಜಲ ಬಳಕೆ ಮಾಡುತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆ ಒಳಗೊಂಡಂತೆ 14 ಜಿಲ್ಲೆಗಳಲ್ಲಿ ಅಟಲ್ ಭೂಜಲ ಯೋಜನೆಯಡಿ ನೀರಿನ ಮಿತ ಬಳಕೆಗೆ ನೆರವಾಗುವ ನಿಟ್ಟಿನಲ್ಲಿ ಸೂಕ್ಷ್ಮ ನೀರಾವರಿ(Drip Irrigation)ಕಾರ್ಯಕ್ರಮ ಜಾರಿಗೊಳಿಸಲಾಗಿದ್ದು,ರೈತರಿಗೆ ಶೇ.90ರಷ್ಟು ಸಹಾಯಧನ ಸಿಗಲಿದೆ.

ಪ್ರಧಾನಮಂತ್ರಿ ಕೃಷಿಸಿಂಚಾಯಿ ಯೋಜನೆ ಮತ್ತು ಅಟಲ್ ಭೂಜಲ್ ಯೋಜನೆಯಡಿ ಸೂಕ್ಷ್ಮನೀರಾವರಿ ಘಟಕಗಳನ್ನು (ತುಂತುರು ಮತ್ತು ಹನಿ ನೀರಾವರಿ) ಕೃಷಿ ಬೆಳೆಗಳಿಗೆ ನೀಡಲು ಆದೇಶ ನೀಡಲಾಗಿದೆ. ಹೆಚ್ಚುತ್ತಿರುವ ಅಂತರ್ಜಲ ಬಳಕೆ ಹಾಗೂ ಬರ ಪೀಡಿತ ತಾಲೂಕುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಅದರಲ್ಲೂ ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ತಾಲೂಕುಗಳು ಈ ವ್ಯಾಪ್ತಿಗೆ ಬರಲಿದೆ. ಈ ಯೋಜನೆಯಡಿ ಯಾರು ಬೇಕಾದರೂ ನೋಂದಣಿ ಮಾಡಿಕೊಳ್ಳಬಹುದು.

ಅಟಲ್ ಭೂ ಜಲ್ ಯೋಜನೆಯಡಿಯಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳು ಹಾಗೂ ಎಲ್ಲ ಗ್ರಾಮ ಪಂಚಾಯಿತಿಗಳು ಒಳಪಡಲಿದ್ದು, ಪ್ರತಿ ಗಾಮ ಪಂಚಾಯಿತಿಗೆ 40 ಲಕ್ಷ ರೂ. ವರೆಗೆ ಸೂಕ್ಷ್ಮ ನೀರಾವರಿ ಘಟಕಗಳಿಗೆ ಸಹಾಯಧನ ನೀಡಲು ಅವಕಾಶವಿದೆ. ಹೀಗಾಗಿ ಎಲ್ಲ ರೈತರ ಸದುಪಯೋಗ ಪಡಿಸಿಕೊಳ್ಳಬಹುದು. ರಾಜ್ಯದ ಚಿಕ್ಕಬಳ್ಳಾಪುರ, ಬೆಳಗಾವಿ, ಬಾಗಲಕೋಟೆ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ. ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಗದಗ, ಹಾಸನ, ಕೋಲಾರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸೂಕ್ಷ್ಮ ನೀರಾವರಿ ಯೋಜನೆಯಡಿ ತುಂತುರು ಮತ್ತು ಹನಿ ನೀರಾವರಿ ಯಶಸ್ವಿ ಯೋಜನೆಗೆ ಚಾಲನೆ ನೀಡಲಾಗುತ್ತದೆ.

ತುಂತುರು ನೀರಾವರಿ ಘಟಕಗಳನ್ನು ಜಿಲ್ಲೆಯ ಎಲ್ಲ ವರ್ಗದ ರೈತರಿಗೆ ತಾಲೂಕುಗಳು ಈ ವ್ಯಾಪ್ತಿಗೆ 2 ಹೆಕ್ಟೇರ್ ಪ್ರದೇಶದವರೆಗೆ ಶೇ.90ರಷ್ಟು ಯಾರೂ ಬೇಕಾದರೂ ಯೋಜನೆ ಮತ್ತು ಹನಿ ನೀರಾವರಿ ಘಟಕಗಳನ್ನು ಸಣ್ಣ ಅತಿ ಸಣ್ಣ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ. 90 ಸಹಾಯ ಧನ ನೀಡಲಾಗುತ್ತದೆ. ಇದರ ಜೊತೆಗೆ ಇತರೆ ವರ್ಗದ ರೈತರಿಗೆ ಶೇ.45ರ ಸಹಾಯದನದಲ್ಲಿ ವಿತರಿಸಲು ತೀರ್ಮಾನ ಕೈಗೊಳ್ಳಲಾಗಿದೆ.

ಇದನ್ನೂ ಓದಿ:  ಡೀಸೆಲ್ ವಾಹನ ಹೊಂದಿರೋರಿಗೆ ಸಂತಸದ ಸುದ್ದಿ- ನಿತಿನ್ ಗಡ್ಕರಿ ಹೊಸ ಘೋಷಣೆ

Leave A Reply

Your email address will not be published.