Government School: ರಾಜ್ಯದ ಶೇ.85 ರಷ್ಟು ಶಾಲೆಗಳಲ್ಲಿ ಶೌಚಾಲಯ ಇಲ್ಲ ?! ಶಿಕ್ಷಣ ಸಚಿವರು ಹೇಳಿದ್ದಿಷ್ಟು

Karnataka education minister madhu bangarappa says 23 Government School don't have toilet in state in Belagavi session

Government School: ಶುಕ್ರವಾರ ನಡೆದ ಅಧಿವೇಶನದಲ್ಲಿ, ಪ್ರಸ್ತುತ ಕರ್ನಾಟಕದ 46,829 ಸರ್ಕಾರಿ ಶಾಲೆಗಳ (Government School) ಪೈಕಿ 23 ಶಾಲೆಗಳಲ್ಲಿ ಮಾತ್ರ ಶೌಚಾಲಯವಿಲ್ಲ (toilets) ಸೂಚಿಸಿದ್ದು, ರಾಜ್ಯದ 5,775 ಶಾಲೆಗಳಲ್ಲಿ ಹೊಸ ಶೌಚಾಲಗಳನ್ನು ನಿರ್ಮಿಸಲು ಡಿಸೆಂಬರ್ 1 ರಂದು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿತು. ಆದರೆ ರಾಜ್ಯದ ಶೇ 85 ರಷ್ಟು ಶಾಲೆಗಳಲ್ಲಿ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂಬುದು ಸರ್ಕಾರಕ್ಕೆ ತಿಳಿದಿದೆಯೇ ಎಂದು ಕಾಂಗ್ರೆಸ್ ಶಾಸಕ ಸಚಿವ ತನ್ವೀರ್ ಸೇಠ್ ಪ್ರಶ್ನಿಸಿದರು.

ತನ್ವೀರ್ ಸೇಠ್ ಇವರ ಪ್ರಶ್ನೆಗೆ ಉತ್ತರಿಸಿದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಸ್ತುತ 23 ಶಾಲೆಗಳಲ್ಲಿ ಶೌಚಾಲಯವಿಲ್ಲ. ಆದರೆ ಇನ್ನು ಉಳಿದ ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಸರಕಾರಿ ಶಾಲೆಗಳಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗುವುದು. ಎಲ್ಲ ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇದೆ ಎಂದು ಹೇಳಿದರು.

ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಶೌಚಾಲಯ ವ್ಯವಸ್ಥೆ ಸುಧಾರಿಸುವ ಪ್ರಯತ್ನದ ಭಾಗವಾಗಿ, ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಹೇಳಿರುವ ಹಾಗೆ 5,775 ಶಾಲೆಗಳು ಮತ್ತು 150 ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಹೊಸ ಶೌಚಾಲಯಗಳನ್ನು ನಿರ್ಮಿಸಲಾಗುವುದು. ಶಾಲೆಗಳಲ್ಲಿ ಹೊಸ ಶೌಚಾಲಯಗಳ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಮಾಡಿದ ಪ್ರಸ್ತಾವನೆಯನ್ನು ಜಾರಿಗೆ ತರಲು ಈಗಾಗಲೇ ಡಿಸೆಂಬರ್ 1 ರಂದು ರಾಜ್ಯವು ಆದೇಶ ಹೊರಡಿಸಿದೆ ಎಂದು ಉತ್ತರಿಸಿದರು.

ಮುಖ್ಯವಾಗಿ ಎಂಜಿಎನ್‌ಆರ್‌ಇಜಿಎ ಯೋಜನೆಯ 200 ಕೋಟಿ ರೂಪಾಯಿ ಹಣವನ್ನು ಬಳಸಿಕೊಂಡು ಶಾಲೆಗಳಲ್ಲಿ ಹೊಸ ಶೌಚಾಲಯಗಳನ್ನು ನಿರ್ಮಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಕರ್ನಾಟಕ ಸರ್ಕಾರ ಸೂಚಿಸಿದೆ. ಇನ್ನು ಕುಡಿಯುವ ನೀರು ಮತ್ತು ಶುದ್ಧ ಶೌಚಾಲಯ ವ್ಯವಸ್ಥೆಗೆ ಪ್ರತಿ ವರ್ಷ ಶಾಲೆಗಳಿಗೆ ಹಣ ಮಂಜೂರು ಮಾಡಲಾಗುತ್ತಿದ್ದು, ಪ್ರಸಕ್ತ ವರ್ಷ 46,829 ಶಾಲೆಗಳಲ್ಲಿ ಮೂಲಭೂತ ಸೌಲಭ್ಯಕ್ಕಾಗಿ 120 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.

ಶಾಲಾ ಶೌಚಾಲಯಗಳು ಮತ್ತು ಕುಡಿಯುವ ನೀರಿನ ಸೌಲಭ್ಯಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಶಾಲೆಗಳ ಮುಖ್ಯಸ್ಥರಿಗೆ ವಹಿಸಲಾಗಿದ್ದರೂ, ನವೆಂಬರ್ 8, 2021 ರಂದು ಹೊರಡಿಸಲಾದ ಸರ್ಕಾರದ ಆದೇಶದಂತೆ ನರೇಗಾ ಯೋಜನೆಯ ನಿಧಿಯಿಂದ ಸೌಲಭ್ಯಗಳ ನಿರ್ವಹಣೆಯನ್ನು ಕೈಗೊಳ್ಳಬಹುದು ಎಂದು ತಿಳಿಸಿದರು.

ಇದನ್ನೂ ಓದಿ: ಕರ್ನಾಟಕ ಸೇರಿ ದೇಶದ 44 ಕಡೆ ದಾಳಿ ಮಾಡಿ ಐಸಿಸ್ ಉಗ್ರರ ಭೇಟೆಯಾಡಿದ NIA

Leave A Reply

Your email address will not be published.