RBI ಹೊಸ ರೂಲ್ಸ್- ಒಬ್ಬ ವ್ಯಕ್ತಿ ಇಷ್ಟು ಬ್ಯಾಂಕ್ ಖಾತೆ ಮಾತ್ರ ಹೊಂದಬೇಕು
Business news RBI new rules for bank accounts limit here is detail
Bank Accounts : ಪ್ರತಿಯೊಬ್ಬರು ಭವಿಷ್ಯದ ಹಿತ ದೃಷ್ಟಿಯಿಂದ ಬ್ಯಾಂಕ್ ಖಾತೆ (Bank account)ಹೊಂದಿರುವುದು ಸಾಮಾನ್ಯ ವಿಷಯ. ಮೋದಿ ಸರ್ಕಾರ ಜನ ಧನ ಯೋಜನೆಯನ್ನು ಜಾರಿಗೆ ತಂದ ಬಳಿಕ ಬ್ಯಾಂಕ್ ಖಾತೆಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿ, ಉಳಿತಾಯ ಖಾತೆಯನ್ನು ಬಳಸುವವರ ಸಂಖ್ಯೆಯು ಕೂಡ ಹೆಚ್ಚಾಗಿದೆ. ಬ್ಯಾಂಕುಗಳಲ್ಲಿ ವಹಿವಾಟು(Bank Transaction)ನಡೆಸುವಾಗ ಅಥವಾ ಯಾವುದೇ ಬ್ಯಾಂಕಿನಲ್ಲಿ ಖಾತೆಯನ್ನು ತೆರೆಯುವಾಗ, ಗರಿಷ್ಠ ಎಷ್ಟು ಬ್ಯಾಂಕ್ ಖಾತೆಗಳನ್ನು(Bank Accounts limits)ತೆರೆಯಬಹುದು ಎಂಬ ಪ್ರಶ್ನೆ ಹೆಚ್ಚಿನವರನ್ನು ಕಾಡದಿರದು.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಒಬ್ಬ ವ್ಯಕ್ತಿಯು ತನ್ನ ಹೆಸರಿನಲ್ಲಿ ಎಷ್ಟು ಬ್ಯಾಂಕ್ ಖಾತೆಗಳನ್ನು ತೆರೆಯಬಹುದು(Bank Accounts Limits )ಎಂಬುದನ್ನು ಸ್ಪಷ್ಟಪಡಿಸಿದೆ. ಸದ್ಯ, ಜನರು ತಮ್ಮ ಅಗತ್ಯಗಳಿಗೆ ಅನುಸಾರವಾಗಿ ಬ್ಯಾಂಕ್ ಖಾತೆಗಳನ್ನು ತೆರೆಯುವ ಆಯ್ಕೆಯನ್ನು ಹೊಂದಿದ್ದು, ಇವುಗಳಲ್ಲಿ ಚಾಲ್ತಿ ಖಾತೆಗಳು, ಸಂಬಳ ಖಾತೆಗಳು, ಜಂಟಿ ಖಾತೆಗಳು, ಉಳಿತಾಯ ಖಾತೆಗಳನ್ನು ಒಳಗೊಂಡಿದೆ.
ಭಾರತದಲ್ಲಿ ಒಬ್ಬ ವ್ಯಕ್ತಿಯು ಬ್ಯಾಂಕ್ ಖಾತೆ ತೆರೆಯಲು ಇಂತಿಷ್ಟೇ ಎಂದು ಯಾವುದೇ ಮಿತಿಯಿಲ್ಲ. ಯಾವುದೇ ವ್ಯಕ್ತಿಯು ತನ್ನ ಅಗತ್ಯಗಳಿಗೆ ಅನುಗುಣವಾಗಿ ಹಲವು ಬ್ಯಾಂಕ್ ಖಾತೆಗಳನ್ನು ತೆರೆಯಲು ಅವಕಾಶವಿದೆ. ಆರ್ಬಿಐ ಇದಕ್ಕೆ ಯಾವುದೇ ಮಿತಿಯನ್ನು ನಿಗದಿ ಮಾಡಿಲ್ಲ. ಆದರೆ, ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಹೆಚ್ಚಿನ ಬ್ಯಾಂಕ್ ಖಾತೆಗಳನ್ನು ತೆರೆಯುವ ಸಂದರ್ಭ ಎಲ್ಲಾ ಖಾತೆಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಹೊಂದಿರಬೇಕು ಜೊತೆಗೆ ಬ್ಯಾಂಕ್ ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ಇದನ್ನೂ ಓದಿ: Foamy Urine: ಮೂತ್ರ ಮಾಡಿದಾಗ ಈ ಲಕ್ಷಣ ಏನಾದ್ರೂ ಕಂಡುಬರುತ್ತಾ? ಹಾಗಿದ್ರೆ ಬೇಡ ನೆಗ್ಲೇಟ್ !!