Home Business Vinod raj: ಅಬ್ಬಬ್ಬಾ.. ವಿನೋದ್ ರಾಜ್ ಅವರ ತಿಂಗಳ ಆದಾಯ ಕೇಳಿದ್ರೆ ನೀವು ತಲೆ ತಿರುಗಿ...

Vinod raj: ಅಬ್ಬಬ್ಬಾ.. ವಿನೋದ್ ರಾಜ್ ಅವರ ತಿಂಗಳ ಆದಾಯ ಕೇಳಿದ್ರೆ ನೀವು ತಲೆ ತಿರುಗಿ ಬೀಳ್ತೀರಾ!! ಎಲ್ಲಿಂದ ಬರುತ್ತೆ ಗುರೂ.. ಈ ಪಾಟಿ ದುಡ್ಡು ?!

Hindu neighbor gifts plot of land

Hindu neighbour gifts land to Muslim journalist

Vinod raj: ನಟ ಹಾಗೂ ಡ್ಯಾನ್ಸರ್ ವಿನೋದ್ ರಾಜ್(Vinod raj)ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಹಿರಿಯ ನಟಿ ಲೀಲಾವತಿ(Leelavati) ಹಾಗೂ ಅವರ ಮಗ ವಿನೋದ್ ರಾಜ್ ರ ತಾಯಿ-ಮಗನ ಜೋಡಿ ಬಗ್ಗೆ ಎಲ್ಲರಿಗೂ ಗೊತ್ತೇ ಇರುತ್ತೆ ಅಲ್ವಾ? ಇಬ್ಬರೂ ನಟನೆ ಮಾತ್ರವಲ್ಲದೆ ಸಮಾಜ ಸೇವೆ ಮೂಲಕ ಕನ್ನಡಿಗರ ಜನಮಾನಸದಲ್ಲಿ ಉಳಿದಿದ್ದಾರೆ. ಅಂದಹಾಗೆ ಈ ವಿನೋದ್ ರಾಜ್ ಅವರ ಒಂದು ತಿಂಗಳ ಆದಾಯದ ಎಷ್ಟೆಂದು ನೀವು ಕೇಳಿದ್ರೆ ತಲೆ ತಿರುಗಿ ಬೀಳ್ತೀರಾ!!

ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದಲ್ಲಿ ಸಾಕಷ್ಟು ವರ್ಷಗಳಿಂದ ತಾಯಿ-ಮಗ ಜೀವನ ನಡೆಸುತಿದ್ದು, ಕೃಷಿ, ಹೈನುಗಾರಿಗೆ ಮಾಡುತ್ತಾ ಬಂದ ಹಣದಲ್ಲಿಯೇ ಸಮಾಜ ಸೇವೆ ಮಾಡುತ್ತಿದ್ದಾರೆ. ಜೊತೆಗೆ ಆಸ್ಪತ್ರೆ, ಪಶು ಆಸ್ಪತ್ರೆಗಳನ್ನು ಕಟ್ಟಿಸಿ ಸಾರ್ವಜನಿಕ ಸೇವೆಗೆ ನೀಡಿದ್ದಾರೆ. ಇಷ್ಟೆಲ್ಲಾ ಮಾಡುವ ವಿನೋದ್ ರಾಜ್ ಅವರ ತಿಂಗಳ ಆದಾಯ ಮಾತ್ರ ನಿಮ್ಮನ್ನು ತಲೆತಿರುಗಿಸಿತ್ತೆ.

ಹೌದು, ತಮ್ಮ ತಾಯಿ ಲೀಲಾವತಿ ಅವರು ಹಾಸಿಗೆ ಹಿಡಿದಿರುವುದರಿಂದ ಅನೇಕ ಗಣ್ಯರು ಲೀಲಾವತಿ ಮನೆಗೆ ಭೇಟಿ ನೀಡುತ್ತಿದ್ದಾರೆ. ಈ ವೇಳೆ ವಿನೋದ್ ರಾಜ್ ಅವರು ಮಾಧ್ಯಮಗಳೊಂದಿಗೆ ತಮ್ಮ ಕೆಲವು ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದು ಇದರೊಂದಿಗೆ ಜನರ ಸೇವೆ ಮಾಡಲು ತಮಗೆ ಹಣದ ಮೂಲ ಎಲ್ಲಿಂದ ಎಂಬ ವಿಚಾರವನ್ನು ತೆರೆದಿಟ್ಟಿದ್ದಾರೆ.

ಇದನ್ನು ಓದಿ: KPTCL Job: KPTCL 1,500 ಹುದ್ದೆಗಳ ಭರ್ತಿ – ಆಯ್ಕೆ ಪಟ್ಟಿ ಬಿಡುಗಡೆ ಕುರಿತು ಬಿಗ್ ಅಪ್ಡೇಟ್ ಕೊಟ್ಟ ಸರ್ಕಾರ

ಅಂದಹಾಗೆ ವಿನೋದ್ ರಾಜ್ ಅವರಿಗೆ ಸೋಲದೇವನಹಳ್ಳಿಯ ಒಟ್ಟು ಜಾಗ ಇರೋದು 7 ಎಕರೆ 16 ಗುಂಟೆ ಜಾಗವಿದೆ. ಈ ಜಾಗವನ್ನು ತೆಗೆದುಕೊಂಡಾಗ ಕೇವಲ ಒಂದೆರೆಡು ಹಲಸಿನ ಮರಗಳಿದ್ದವು. ಆದರೆ ಲೀಲಾವತಿ ಹಾಗೂ ವಿನೋದ್ ರಾಜ್ ಅವರ ಶ್ರಮದಿಂದ ಅದು ಇಂದು ಸುಂದರ ತೊಟವಾಗಿದೆ.

ಅಲ್ಲದೆ ಬೆಂಗಳೂರಿನ ಮೈಲಹಳ್ಳಿಯಲ್ಲಿ ಒಂದು ತೋಟವಿದೆ. 20 ವರ್ಷದ ಹಿಂದೆ 21 ಲಕ್ಷಕ್ಕೆ ಜಮೀನು ಖರೀದಿ ಮಾಡಿದ್ದರಂತೆ. ಮುಂದೆ ಅದಕ್ಕೆ ಒಳ್ಳೆಯ ಡಿಮ್ಯಾಂಡ್ ಬಂತು, ಕರೋನಾ ಸಮಯದಲ್ಲಿ ಉತ್ತಮ ವ್ಯಾಪಾರ ಕೂಡ ಆದದರಿಂದ ಮಾರಾಟ ಮಾಡಿದರಂತೆ. ಅಲ್ಲದೆ 103 ಸೈಟ್​ ವ್ಯಾಪಾರದಲ್ಲಿ 6-7.30 ಕೋಟಿ ರೂ ಅಷ್ಟು ಲಾಭ ಬಂತಂತೆ!! ಜೊತೆಗೆ ತಮ್ಮ ಇತರ ಆದಾಯಗಳ ಕುರಿತು ಅವರು ಮಾತನಾಡಿದ್ದು, ಮಾಧ್ಯಮವೊಂದರ ಸಂದರ್ಶನವೂ ಇಲ್ಲಿದೆ ನೋಡಿ.