Arjuna Elephant:ಪುಂಡಾನೆ ಅರ್ಜುನ ‘ದಸರಾ ಕ್ಯಾಪ್ಟನ್’ ಆಗಿದ್ದೇಗೆ ಗೊತ್ತಾ?! ಇಲ್ಲಿದೆ ನೋಡಿ ಜನಮೆಚ್ಚಿದ ಆನೆಯ ಇಂಟ್ರೆಸ್ಟಿಂಗ್ ಸ್ಟೋರಿ
Mysore news Arjuna elephant died intresting story about Arjuna elephant
Arjuna Elephant Died : ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಬರೋಬ್ಬರಿ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ (63 ವರ್ಷ) ಇಹಲೋಕದ ಯಾತ್ರೆ (Arjuna Elephant Died)ಮುಗಿಸಿ ಬಿಟ್ಟಿದೆ. ದಸರಾ ಜಂಬೂಸವಾರಿಯಲ್ಲಿ ಅಂಬಾರಿ ಹೊತ್ತಿದ್ದ ಅರ್ಜುನ ಕಾಡಾನೆಯೊಂದಿಗೆ ಕಾದಾಡಿ ವೀರಮರಣವನ್ನಪ್ಪಿದ್ದು, ಈ ವಿಚಾರ ಕರ್ನಾಟಕದ ಜನತೆಗೆ ದುಃಖ ತರಿಸಿದೆ.
1960 ರಲ್ಲಿ ಅರ್ಜುನ ಜನಿಸಿದ್ದು, ತನ್ನ ವಿಶಿಷ್ಟ ವ್ಯಕ್ತಿತ್ವದ ಮೂಲಕ ಮನೆ ಮಾತಾಗಿದ್ದ ಕ್ಯಾಪ್ಟನ್ ಅರ್ಜುನನಾಗಿ ಹೆಸರುಪಡೆದಿದ್ದ. 1968ರಲ್ಲಿ ಕೊಡಗು(Coorg)ಜಿಲ್ಲೆಯ ತಿತಿಮತಿ ಬಳಿಯ ಬೆಂಡೆಕಟ್ಟೆಯಲ್ಲಿ ಖೆಡ್ಡಾ ವಿಧಾನದಲ್ಲಿ 15 ವರ್ಷದ ಪುಂಡ ಅರ್ಜನನನ್ನು(Arjuna Elephant) ಸೆರೆ ಹಿಡಿದು ಪಳಗಿಸಲಾಗಿತ್ತು. ಈ ರೀತಿ ಪಳಗಿದ ಬಳಿಕವೇ 1990ರ ದಶಕದಲ್ಲಿ ಮೈಸೂರಿನಲ್ಲಿ ದಸರಾ ಉತ್ಸವದ ಸಮಯದಲ್ಲಿ ಮೆರವಣಿಗೆಗಳನ್ನು ಒಳಗೊಂಡ ಶಿಬಿರಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡಲಾಗಿತ್ತು. ದ್ರೋಣ, ಬಲರಾಮ ಆನೆಗಳು ಅನಾರೋಗ್ಯಕ್ಕೆ ಒಳಗಾದ ಬಳಿಕ ಅರ್ಜುನನನ್ನು ಅಂಬಾರಿ ಹೊರಲು ಅವಕಾಶ ನೀಡಲಾಗಿತ್ತು.
ಕಟ್ಟುಮಸ್ತಾದ ದೇಹ ಹೊಂದಿದ್ದ ಅರ್ಜುನ 3.75 ಮೀಟರ್ ಉದ್ದ 2.98 ಮೀಟರ್ ಎತ್ತರ 5800 ರಿಂದ 6000 ಕೆ.ಜಿ. ತೂಕವಿತ್ತು. ಹುಲಿ ಸೆರೆ, ಪುಂಡಾನೆ ಸೆರೆ ಕಾರ್ಯಾಚರಣೆಯಲ್ಲಿ ಪರಿಣತಿ ಹೊಂದಿದ್ದ ಈತ ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಮತ್ತು ಒರಿಸ್ಸಾಗಳಲ್ಲಿ ಕಾಡಾನೆಗಳನ್ನು ಸೆರೆಹಿಡಿಯುವಲ್ಲಿ ಅರ್ಜುನ ನೆರವಾಗಿದ್ದ. ಇದೇ ರೀತಿ ಪುಂಡಾನೆ ಸೆರೆಹಿಡಿಯುವ ಕಾರ್ಯಾಚರಣೆಯು ಹಾಸನದಲ್ಲಿ ನಡೆಡಿದ್ದು, ಈ ಸಂದರ್ಭ ಅರ್ಜುನ ಮೃತಪಟ್ಟಿದ್ದಾನೆ.
ಮೊದಲಿಗೆ ಪುಂಡನಾಗಿ ಕೇಡಿ, ರೌಡಿ, ಕೋಪಿಷ್ಟ ಎನಿಸಿಕೊಂಡಿದ್ದ ಅರ್ಜುನ ಆ ಬಳಿಕ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ.ಅರ್ಜುನನಿಗೆ ವಯಸ್ಸಾದ ಹಿನ್ನೆಲೆ ಕಾಡು ಪ್ರಾಣಿಗಳ ಕಾರ್ಯಾಚರಣೆ ಹೊರತುಪಡಿಸಿ ಬಿಡುವಿನ ಸಂದರ್ಭ ನಾಗರಹೊಳೆ ರಾಷ್ಟ್ರೀಯ ಉದ್ಯಾವನದ ನಡುವೆ ಇರುವ ಐತಿಹಾಸಿಕ ಬಳ್ಳೆ ಆನೆ ಶಿಬಿರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದನಂತೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಕಾಡಾನೆ ಸೆರೆ ಹಿಡಿದು ಸ್ಥಳಾಂತರ ಮಾಡುವ ಕಾರ್ಯಾಚರಣೆ ನಡೆಯುತ್ತಿತ್ತು ಎನ್ನಲಾಗಿದೆ. ಈ ಸಂದರ್ಭ ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವ ಕಾರ್ಯಾಚರಣೆ ನಡೆಯುತ್ತಿದಾ ಗ ಅರ್ಜುನನ ಮೇಲೆ ಒಂಟಿಸಲಗವೊಂದು ದಾಳಿ ನಡೆಸಿದೆ. ಈ ಸಂದರ್ಭ ಇನ್ನುಳಿದ ಮೂರು ಸಾಕಾನೆಗಳು ಓಡಿ ಹೋಗಿದ್ದು, ಒಂಟಿಸಲಗದ ಜೊತೆ ಅರ್ಜುನ ಆನೆ ಏಕಾಂಗಿಯಾಗಿ ಹೋರಾಟ ನಡೆಸಿದೆ. ಈ ದುರ್ಘಟನೆ ವೇಳೆ ಅರ್ಜುನ ಆನೆ ಮೃತಪಟ್ಟಿದೆ ಎಂದು ತಿಳಿದುಬಂದಿದೆ. ಕಾಡಾನೆಗಳಿಂದ ದಾಳಿಗೊಳಗಾಗಿ ಸಾವನ್ನಪ್ಪಿದ ಅರ್ಜುನ ಇನ್ನಿಲ್ಲ ಎಂಬ ಸತ್ಯವನ್ನು ಜನತೆಗೆ ಅರಗಿಸಿಕೊಳ್ಳಲಾಗುತ್ತಿಲ್ಲ.
ಇದನ್ನೂ ಓದಿ: RSS ಕಚೇರಿಯಲ್ಲಿ ಜಾತಿ ತಾರತಮ್ಯ?! ಮಾಜಿ ಶಾಸಕನಿಗೇ ಕಚೇರಿಗೆ ನೋ ಎಂಟ್ರಿ ಎಂದ ಸಂಘ