Home Karnataka State Politics Updates Siddaramaiah – HD Revanna: ಸಿದ್ದರಾಮಯ್ಯಗೆ ಮಾಟ ಮಂತ್ರ ಮಾಡಿದ್ರೆ ಏನಾಗುತ್ತೆ ಗೊತ್ತಾ?! ಸ್ಪೋಟಕ ಮಾಹಿತಿ...

Siddaramaiah – HD Revanna: ಸಿದ್ದರಾಮಯ್ಯಗೆ ಮಾಟ ಮಂತ್ರ ಮಾಡಿದ್ರೆ ಏನಾಗುತ್ತೆ ಗೊತ್ತಾ?! ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಎಚ್ ಡಿ ರೇವಣ್ಣ

Siddaramaiah - HD Revanna

Hindu neighbor gifts plot of land

Hindu neighbour gifts land to Muslim journalist

Siddaramaiah – HD Revanna: ಸಿದ್ದರಾಮಯ್ಯಗೆ ದೇವರ ಶಕ್ತಿಯಿದೆ‌. ಮಾಟಮಂತ್ರ ಮಾಡಿಸಿದರೆ ತಿರುಗೇಟಾಗುತ್ತೆ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಅವರು ಹೇಳಿದ್ದು ದೊಡ್ಡ ಪ್ರಶ್ನೆ ಆಗಿದೆ. ಹೌದು, ವಿಧಾನಸಭೆ ಅಧಿವೇಶದಲ್ಲಿ ಮಂಗಳವಾರ ಆರ್‌ ಅಶೋಕ್‌, ಎಚ್‌ಡಿ ರೇವಣ್ಣ ಹಾಗೂ ಸಿದ್ದರಾಮಯ್ಯ (Siddaramaiah – HD Revanna) ಅವರ ನಡುವೆ ಸಾಮಾನ್ಯ ಚರ್ಚೆ ನಡೆದಿದ್ದು, ಸಿದ್ದರಾಮಯ್ಯನವರಿಗೆ ಯಾರೋ ಮಾಟ ಮಾಡಿಸಿದ್ದಾರೆ. ಮೊದಲಿನಂತೆ ಇಲ್ಲ ಎಂದು ಅಶೋಕ್‌ ಕಾಲೆಳೆದರು. ಅದಕ್ಕೆ ಎಚ್‌ಡಿ ರೇವಣ್ಣ ಈ ರೀತಿ ಪ್ರತಿಕ್ರಿಯೆ ನೀಡಿರುವುದು ಎಂದು ತಿಳಿದು ಬಂದಿದೆ.

ವಿಧಾನಸಭೆಯಲ್ಲಿ ಬರ ಸಮಸ್ಯೆ ಕುರಿತಾದ ಚರ್ಚೆಯ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಆರ್.‌ಅಶೋಕ್ ಮಾತನಾಡುತ್ತಾ, ” ಜಿಲ್ಲಾ ಮಂತ್ರಿಗಳು ಜಿಲ್ಲೆಯಲ್ಲಿ ಜನತಾ ದರ್ಶನ ಕಾರ್ಯಕ್ರಮ ಮಾಡಿಲ್ಲ.‌ ಸಿಎಂ ಕನಸಿನ ಯೋಜನೆಯನ್ನ ಮಂತ್ರಿಗಳು ಪಾಲನೆ ಮಾಡುತ್ತಿಲ್ಲ.‌ಹಾಗಾಗಿ ಸಿಎಂ ಅವರೆ ನೀವು ಏನಾದರೂ ಮಾಡಬೇಕು.‌ ಸಿಎಂ ಸಿದ್ದರಾಮಯ್ಯ ಅವರು ಮೊದಲನಂತೆ ಖಡಕ್ ಆಗಿಲ್ಲ. ಹಿಂದೆ ಖಡಕ್ ಆಗಿ ಅಧಿಕಾರಿಗಳಿಗೆ ಚಳಿ ಜ್ವರ ಬಿಡಿಸಿದ್ದನ್ನು ನಾನು ನೋಡಿದ್ದೇನೆ. ಈಗ ಯಾಕೋ ಗರ ಬಡೆದವರಂತೆ ಸಿದ್ದರಾಮಯ್ಯ ಆಗಿದ್ದಾರೆ ” ಎಂದರು.

ನಮ್ಮ ಕಡೆ ಗಾಳಿ ಹೊಡೆದೈತೆ ಅಂತಾರೆ, ರೇವಣ್ಣ ಸಿದ್ದರಾಮಯ್ಯ ಅವರಿಗೆ ಒಳ್ಳೆಯ ಸ್ನೇಹಿತರು. ಹಾಗಾಗಿ ರೇವಣ್ಣ ಏನಾದರೂ ಆಂಜನೇಯ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಗಾಳಿ ಬಿಡಿಸಲು ಆಗುತ್ತಾ ನೋಡಬೇಕು ಎಂದು ಕಾಲೆಳೆದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಎಚ್ ಡಿ ರೇವಣ್ಣ, ” ಸಿದ್ದರಾಮಯ್ಯಗೆ ದೇವರ ಶಕ್ತಿಯಿದೆ‌. ಮಾಟಮಂತ್ರ ಮಾಡಿಸಿದರೆ ಮಾಡಿಸವರಿಗೇ ತಿರುಗು ಬಾಣವಾಗುತ್ತದೆ ” ಎಂದರು.

ಇದಕ್ಕೆ ಅಶೋಕ್ ಪ್ರತಿಕ್ರಿಯೆ ‌ನೀಡಿ, ಮಾಟ, ಮಂತ್ರ ತಗಲದಂತೆ ಹೋಮ ಮಾಡಿಸಿದ್ದಾರಂತೆ, ಅದು ಕುಮಾರಸ್ವಾಮಿ ಅವರಿಗೆ ಮಾಡಿಸಬೇಕಿತ್ತು ಎಂದರು. ಸಿದ್ದರಾಮಯ್ಯ ಗರ ಬಡದಂತೆ ಆಗಿದ್ದಾರೆ ಎಂದು ನಾನು ಹೇಳಿಲ್ಲ. ಮಾಜಿ ಸಚಿವ ಆಂಜನೇಯ ಅವರು ಹೇಳಿದ್ದು ಎಂದು ಆರ್. ಅಶೋಕ್ ಇದೇ ವೇಳೆ ಹೇಳಿ ನಕ್ಕಿದ್ದಾರೆ .

ಇದನ್ನೂ ಓದಿ: ಯಶ್ 19 ಚಿತ್ರಕ್ಕೆ ʻನ್ಯಾಚುರಲ್‌ ಬ್ಯೂಟಿʼನೇ ನಾಯಕಿ !! ಅಚ್ಚರಿಯಂತೆ ಕನ್ನಡಕ್ಕೆ ಎಂಟ್ರಿ ಕೊಟ್ಟ ನಟಿ – ಅಭಿಮಾನಿಗಳು ಫುಲ್ ಖುಷ್