Home latest Fisher Boat Missing: ಅರಬ್ಬೀ ಸಮುದ್ರಕ್ಕಿಳಿದಿದ್ದ ಮೀನುಗಾರರ ಬೋಟ್ ನಾಪತ್ತೆ- 27 ಮೀನುಗಾರರು ಕಣ್ಮರೆ

Fisher Boat Missing: ಅರಬ್ಬೀ ಸಮುದ್ರಕ್ಕಿಳಿದಿದ್ದ ಮೀನುಗಾರರ ಬೋಟ್ ನಾಪತ್ತೆ- 27 ಮೀನುಗಾರರು ಕಣ್ಮರೆ

Fisher Boat Missing
Image source: Pikist

Hindu neighbor gifts plot of land

Hindu neighbour gifts land to Muslim journalist

Fisher Boat Missing: ಅರಬ್ಬಿ ಸಮುದ್ರಕ್ಕೆ ಇಳಿದಿದ್ದ 27 ಮೀನುಗಾರರಿದ್ದ ಬೋಟ್
ನಾಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಹೌದು, ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಿದ್ದರೂ ಸಹ ಸೂಚನೆಗಳನ್ನು ನಿರ್ಲಕ್ಷಿಸಿ ಗೋವಾ ಮೂಲದ ಬೋಟ್ ಅರಬ್ಬಿ ಸಮುದ್ರದಕ್ಕೆ ಇಳಿದು, ಇದೀಗ ಕಾಣೆಯಾಗಿದೆ (Fisher Boat Missing).

ನವೆಂಬರ್ 29 ರಂದು ಗೋವಾದ ಪಣಜಿಯಿಂದ ಹೊರಟಿದ್ದ ಬೋಟ್ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೆಲೆಕೇರಿ ಸಮುದ್ರ ಭಾಗದಲ್ಲಿ ಕೊನೆಯ ಲೊಕೇಷನ್ ತೋರಿಸಿತ್ತು. ನಂತರ ಲೊಕೇಷನ್ ಸೂಚಿಸದೆ ಇದ್ದುದಲ್ಲದೆ ಬೋಟ್ ನಾಪತ್ತೆಯಾಗಿದೆ.

ಮಾಹಿತಿ ಪ್ರಕಾರ, ಇಂಜಿನ್ ಸಮಸ್ಯೆಯಾಗಿ ಸಮುದ್ರದಲ್ಲಿ ಬೋಟ್ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಇದೀಗ ಬೋಟ್ ಮಾಲೀಕ ಕೋಸ್ಟ್ ಗಾರ್ಡ್ ಗೆ ಮಾಹಿತಿ ನೀಡಿದ್ದು, ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Indira Gandhi: ಮಿಜೋರಾಂನಲ್ಲಿ ಹೊಸ ಪಕ್ಷ ಅಧಿಕಾರಕ್ಕೆ- ಆದರೂ ಇಂದಿರಾಗಾಂಧಿ ಆಪ್ತನಿಗೆ ಸಿಎಂ ಪಟ್ಟ?! ಏನಿದು ಹೊಸ ಲಾಜಿಕ್ ?!