BJP: ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ಬದಲು !! ರಾಜ್ಯ ರಾಜಕೀಯ ಮಹಾನ್ ಸಂಚಲನ

Karnataka politics news BasanaGouda Patil says after Lok sabha elections BJP state president and opposition leader replaced

BJP: ರಾಜ್ಯದಲ್ಲಿ ಅತಂತ್ರವಾಗಿದ್ದ ಬಿಜೆಪಿ(BJP)ಗೆ ಕೊನೆಗೂ ರಾಜ್ಯಾಧ್ಯಕ್ಷ(State president) ಹಾಗೂ ವಿಪಕ್ಷ ನಾಯಕರ(Opposition leader) ಆಯ್ಕೆಯಿಂದ ಹೊಸ ಚೈತನ್ಯ ಬಂದಿದೆ. ಹೊಸ ನಾಯಕರ ಆಯ್ಕೆಯಿಂದ ಕಾರ್ಯಕರ್ತರೂ ಹುರುಪಿನಿಂದ ಸಂಘಟಿತರಾಗಿದ್ದಾರೆ. ಆದರೆ ಈ ಎಲ್ಲಾ ಸಂಭ್ರಮದ ನಡುವೆಯೇ ವಿಪಕ್ಷ ನಾಯಕ ಹಾಗೂ ರಾಜ್ಯದ್ಯಕ್ಷರ ಬದಲಾವಣೆಯ ಕೂಗು ಕೇಳಿಬರುತ್ತಿದೆ.

ಹೌದು, ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆಗೆ ಹಲವರು ಆಕಾಂಕ್ಷಿಗಳಿದ್ದರು. ಆದರೆ ಹೈಕಮಾಂಡ್ ಯಡಿಯೂರಪ್ಪರ ಪುತ್ರ, ಬಿಜೆಪಿ ನಾಯಕ ಬಿ ವೈ ವಿಜಯೇಂದ್ರ(B Y Vijayendra) ಅವರಿಗೆ ಪಟ್ಟಾಭಿಷೇಕ ಮಾಡಿಬಿಟ್ಟಿತು. ಈ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿತು. ಮುಖ್ಯವಾಗಿ ಬಿಜೆಪಿ ಪ್ರಬಲ ನಾಯಕ, ಹಿಂದೂ ಹುಲಿ, ಉತ್ತರ ಕರ್ನಾಟಕದ ಭಾಗದ ಮಾಸ್ ಲೀಡರ್ ಆದ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಈ ಬಗ್ಗೆ ಭಾರೀ ಆಕ್ರೋಶ ಹೊರಹಾಕಿದ್ದರು. ಇದು ಬೇಡ ವಿಪಕ್ಷ ನಾಯಕ ಸ್ಥಾನವಾದರೂ ಸಿಗುತ್ತದೆ ಎಂದು ಅವರಷ್ಟೇ ಅಲ್ಲದೆ ಅಭಿಮಾನಿಗಳು ಕೂಡ ನಿರೀಕ್ಷಿಸಿದ್ದರು. ಆದರೆ ಆರ್ ಅಶೋಕ್(R Ashok) ಅವರಿಗೆ ಹೈಕಮಾಂಡ್ ಈ ಪಟ್ಟ ಕಟ್ಟಿತು. ಹೀಗಾಗಿ ಇದರಿಂದ ಅಸಮಾಧಾನಿತರಾದ ಯತ್ನಾಳ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನೆ ದಿನ ವಿಧಾನಮಂಡಲ ಅಧಿವೇಶನ ಆರಂಭ ಆದಾಗಿಂದಲೂ ಬಸವನಗೌಡ ಪಾಟೀಲ್ ಯತ್ನಾಳ್(Basavanagouda yatnal)ಅವರು ಈ ಕುರಿತು ಅಸಮಧಾನ ತೋಡಿಕೊಂಡಿದ್ದಾರೆ. ಅಲ್ಲದೆ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕರ ಬದಲಾವಣೆ ಕುರಿತು ಮಾತನಾಡಿ ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕರ ಬದಲಾವಣೆಯಾಗಲಿದೆ ಹೊಸ ಶಾಕ್ ಕೊಟ್ಟಿದ್ದಾರೆ.

ಅಂದಹಾಗೆ ಬೆಳಗಾವಿಯ ಸುವರ್ಣಸೌಧದಿಂದ ಹೊರಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ಉತ್ತರ ಕರ್ನಾಟಕದವರು ದಕ್ಷಿಣ ಕರ್ನಾಟಕ ಭಾಗದ ನಾಯಕರ ಗುಲಾಮರಲ್ಲ. ಅಲ್ಲದೆ, ಉತ್ತರ ಕರ್ನಾಟಕದವರಿಗೆ ನಾಯಕತ್ವ ನೀಡಿ ನ್ಯಾಯ ಒದಗಿಸುವವರೆಗೂ ಪಕ್ಷದ ಶಾಸಕಾಂಗ ಸಭೆಗೂ ನಾನು ಹೋಗುವುದಿಲ್ಲ. ಲೋಕಸಭೆ ಚುನಾವಣೆ ಬಳಿಕ ಇಡೀ ದೇಶದಲ್ಲಿ ಕುಟುಂಬ ರಾಜಕಾರಣ ಕೊನೆಯಾಗಲಿದೆ. ವಂಶ ರಾಜಕಾರಣವನ್ನು ಕೊನೆಗಣಿಸುವುದೇ ನಮ್ಮ ಗುರಿ. ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲೂ ವಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷರ ಬದಲಾವಣೆಯಾಗಲಿದೆ ಎಂದರು. ಸದ್ಯ ಯತ್ನಾಳರ ಮಾತಿನಿಂದ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಯಾಗಿದೆ.

ಇದನ್ನೂ ಓದಿ : ಭ್ರೂಣಲಿಂಗ ಹತ್ಯೆ ಪ್ರಕರಣ- ಸುಳಿವು ನೀಡಿದವರಿಗೆ ಬಹುಮಾನ ಘೋಷಿಸಿದ ಸರ್ಕಾರ

Leave A Reply

Your email address will not be published.