Home Breaking Entertainment News Kannada Actress Leelavati husband: ಇವರೇ ನೋಡಿ ನಟಿ ಲೀಲಾವತಿ ಅವರ ನಿಜವಾದ ಗಂಡ !!

Actress Leelavati husband: ಇವರೇ ನೋಡಿ ನಟಿ ಲೀಲಾವತಿ ಅವರ ನಿಜವಾದ ಗಂಡ !!

Actress Leelavati husband

Hindu neighbor gifts plot of land

Hindu neighbour gifts land to Muslim journalist

Actress Leelavati husband: ಕನ್ನಡ ಚಿತ್ರರಂಗದ ಆರಂಭದ ದಿನಗಳಿಂದೂ ಚಂದನವನದಲ್ಲಿ ಮಿಂಚಿ, ಮೆರೆದು, ಅಪಾರ ಹೆಗ್ಗಳಿಕೆ ಪಡೆದ ಕೆಲವೇ ಕೆಲವು ನಟಿಯರಲ್ಲಿ ನಟಿ ಲೀಲಾವತಿ ಅವರೂ ಒಬ್ಬರು. ಸದ್ಯ ಲೀಲಾವತಿ ಅವರು ವಯೋಸಹಜ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು ಅನೇಕ ಅಭಿಮಾನಿಗಳು, ಸಿನಿ ನಟ-ನಟಿಯರು, ರಾಜಕೀಯ ನಾಯಕರು ಅವರ ಮನೆಗೆ ತೆರಳಿ ಆರೋಗ್ಯ ವಿಚಾರಿಸುತ್ತಿದ್ದಾರೆ. ಈ ನಡುವೆ ಲೀಲಾವತಿ(Leelavati) ಅವರು ತಮ್ಮ ಗಂಡನ(Actress Leelavati husband) ಜೊತೆ ಇರುವ ಹಳೇ ಫೋಟೋ ಒಂದು ವೈರಲ್ ಆಗುತ್ತಿದೆ.

Actress Leelavati husband

ಇದುವರೆಗೂ ನಟಿ ಲೀಲಾವತಿ ಅವರ ಗಂಡ ಯಾರು? ನಟ, ಖ್ಯಾತ ನೃತ್ಯಗಾರ ವಿನೋದ್ ರಾಜ್(Vinod raj) ಅವರ ತಂದೆ ಯಾರು ಎಂದು ಹಲವರಲ್ಲಿ ಕಾಡುತ್ತಿದ್ದ ಪ್ರಶ್ನೆ. ಇಂಡಸ್ಟ್ರಿ ಅಂದರೆ ಹಾಗೆ ಅಲ್ವಾ? ಅಂತೆಯೇ ರಾಜ್ ಕುಮಾರ್ ಹಾಗೂ ಲೀಲಾವತಿ ಅವರ ಕುರಿತು ಹಲವು ವಿಚಾರಗಳು ಲೀಲಾವತಿ ಅವರ ಬದುಕುಲ್ಲೂ ಕೇಳಿ ಬಂದಿತ್ತು. ಅದೇನೆ ಇರಲಿ ಇದೀಗ ಲೀಲಾವತಿ ಅವರ ನಿಜವಾದ ಗಂಡ ಯಾರು ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದ್ಧು, ಆ ಫೋಟೋ ವೈರಲ್ ಆಗಿದೆ.

ಅಂದಹಾಗೆ ಲೀಲಾವತಿ ಅವರ ನಿಜವಾದ ಗಂಡ ಮಹಾಲಿಂಗ ಭಾಗವತರ್(Mahalinga bhagavatar) ಎಂಬುವವರು. ಈ ಫೋಟೋದಲ್ಲಿ ನಟಿ ಲೀಲಾವತಿಯವರ ಪಕ್ಕದಲ್ಲಿರುವ ವ್ಯಕ್ತಿಯೇ ಅವರ ಪತಿ ಮಹಾಲಿಂಗ ಭಾಗವತರ್ . ನಟಿ ಲೀಲಾವತಿಯವರನ್ನು ಗುರುತಿಸಿ ರಂಗಭೂಮಿಗೆ ಕರೆ ತಂದವರು ಇವರೇ. ಸ್ವತಃ ನಟರಾಗಿದ್ದ ಮಹಾಲಿಂಗ ಭಾಗವತರ್ ಅವರು ಒಂದು ನಾಟಕದ ಕಂಪನಿ ನಡೆಸುತ್ತಿದ್ದರು. ಒಂದು ದಿನ ನಾಟಕ ಕಂಪನಿ ನಷ್ಟದಿಂದ ಮುಚ್ಚಿ ಹೋಯಿತು. ಆಗ ಲೀಲಾವತಿಯವರೊಡನೆ ಸುಬ್ಬಯ್ಯ ನಾಯ್ಡು ರವರ ನಾಟಕ ಮಂಡಳಿಗೆ ಮಹಾಲಿಂಗ ಭಾಗವತರ್ ಕೂಡ ಸೇರಿದರು. ಬಳಿಕ ಲೀಲಾವತಿ ಅವರಿಗೆ ಸಿನಿಮಾದಲ್ಲಿ ಅವಕಾಶ ಕೊಡಿಸಲು ಅವರು ತುಂಬಾ ಕಷ್ಟ ಪಟ್ಟಿದ್ದರು.

ಇನ್ನು ಮಹಾಲಿಂಗ ಭಾಗವತರ್ ಅವರೇ ಲೀಲಾವತಿ ಅವರ ಗಂಡ ಎಂದು ಅನೇಕರಿಗೆ ತಿಳಿದಿಲ್ಲ. ಈ ಹಿಂದೆ ಒಂದು ಸಂದರ್ಶನದಲ್ಲಿ ಲೀಲಾವತಿ ಅವರ ಕಾಲದ ನಟ ಡಿಂಗ್ರಿ ನಾಗರಾಜ್ ಈ ಬಗ್ಗೆ ಮಾತನಾಡಿದ್ದು, ಲೀಲಾವತಿ ಅವರ ಪತಿ ಮಹಾಲಿಂಗ ಭಾಗವತರ್ ಎಂದೇ ಹೇಳಿದ್ದರು ಎಂಬುದನ್ನು ನೆನೆಯಬಹುದು.

ಇದನ್ನೂ ಓದಿ: Anushree: ಆಸ್ಟ್ರೇಲಿಯಾಕ್ಕೆ ಹೋಗಿ ಯಾರಿಗೂ ತಿಳಿಯದಂತೆ ಪ್ರಿಯಾಂಕ ಚೋಪ್ರಾ ಗಂಡನನ್ನು ಭೇಟಿಯಾದ್ರಾ ಆಂಕರ್ ಅನುಶ್ರೀ ?!