Home Breaking Entertainment News Kannada Samantha To Be Mother: ಸದ್ಯದಲ್ಲೇ ತಾಯಿಯಾಗಲಿದ್ದಾರೆ ನಟಿ ಸಮಂತಾ !! ತಂದೆ ಯಾರು ಗೊತ್ತಾ?

Samantha To Be Mother: ಸದ್ಯದಲ್ಲೇ ತಾಯಿಯಾಗಲಿದ್ದಾರೆ ನಟಿ ಸಮಂತಾ !! ತಂದೆ ಯಾರು ಗೊತ್ತಾ?

Samantha To Be Mother
Image source: Pinterest.com

Hindu neighbor gifts plot of land

Hindu neighbour gifts land to Muslim journalist

Samantha To Be Mother : ಕಳೆದ ಕೆಲವು ವರ್ಷಗಳಿಂದ ತಮ್ಮ ವೈವಾಹಿಕ ಜೀವನದಿಂದ ಮತ್ತು ತಮ್ಮ ಸಿನೆಮಾ ಜೀವನದಿಂದ ಭಾರಿ ಸುದ್ದಿಯಲ್ಲಿರುವ ತೆಲುಗಿನ ನಟಿ (Telugu Actress)ನಟಿ ಸಮಂತಾ (Samantha Ruth Prabhu)ಮತ್ತು ನಾಗ ಚೈತನ್ಯ (Naga Chaitanya)ಜೋಡಿ ಕಳೆದ ವರ್ಷ ತಮ್ಮ ವೈವಾಹಿಕ ಜೀವನದಲ್ಲಾದ ಕೆಲವು ಅಹಿತಕರವಾದ ಘಟನೆಗಳಿಂದ ಬೇಸತ್ತು ಹೋಗಿ ವಿಚ್ಛೇಧನ ಪಡೆದ ಬಳಿಕ ತಮ್ಮ ವೈಯಕ್ತಿಕ ಬದುಕಿನಲ್ಲಿ ಸಂತೋಷ ಕಾಣುತ್ತಿದ್ದಾರೆ. ಈ ನಡುವೆ, ಸಮಂತಾ ರುತ್‌ ಪ್ರಭು ಶೀಘ್ರದಲ್ಲೇ ತಾಯಿಯಾಗಲಿದ್ದಾರೆ (Samantha To Be Mother)ಎಂಬ ಸುದ್ದಿ ಹರಿದಾಡುತ್ತಿದೆ.

ಸಮಂತಾ ರುತ್ ಪ್ರಭು (Samantha)ಸದ್ಯ ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಮೈಯೋಸಿಟಿಸ್‌ಗೆ ಚಿಕಿತ್ಸೆಯ ಹಿನ್ನೆಲೆ ಅವರು ಸದ್ಯ ವೆಕೆಷನ್‌ನಲ್ಲಿದ್ದಾರೆ. ಈ ನಡುವೆ, ಸಮಂತಾ ರುತ್‌ ಪ್ರಭು ಸದ್ಯದಲ್ಲೇ ತಾಯಿಯಾಗಲಿದ್ದಾರೆ(Samantha To Be Mother) ಎಂಬ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಸಮಂತಾ ಇಬ್ಬರು ಮಕ್ಕಳನ್ನು ದತ್ತು ಸ್ವೀಕರಿಸಲು ಯೋಜನೆ ಹಾಕಿಕೊಂಡಿದ್ದಾರಂತೆ. ಈ ಮೂಲಕ ಸಮಂತಾ ತಾಯಿಯಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಕೆಲ ವರದಿಗಳ ಅನುಸಾರ, ಸಮಂತಾ ಸಿಂಗಲ್‌ ಪೇರೆಂಟ್‌ ಆಗಲು ಇಚ್ಛಿಸಿದ್ದು, ಇಬ್ಬರು ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಯೋಚಿಸುತ್ತಿದ್ದಾರೆ ಎನ್ನಲಾಗಿದೆ. ತನ್ನ ಫೌಂಡೇಶನ್ ‘ಪ್ರತ್ಯೂಷಾ ಸಪೋರ್ಟ್’ಗೆ ಹಣ ನೀಡುವ ಜೊತೆ ಜೊತೆಗೆ ಸಮಂತಾ ಇಬ್ಬರು ಮಕ್ಕಳನ್ನು ಒಂದೇ ಬಾರಿಗೆ ದತ್ತು ತೆಗೆದುಕೊಳ್ಳುವ ಮೂಲಕ ತಾಯಿಯಾಗಲು ಮುಂದಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಮಂಗಳೂರಲ್ಲಿ ಮತ್ತೆ ಪ್ರತ್ಯಕ್ಷವಾಯ್ತು ಕಾಡು ಕೋಣ – ನಗರದಲ್ಲೆಲ್ಲಾ ಇದರದ್ದೇ ಹಾವಳಿ