Home News Viral video: ಕೃಷ್ಣನ ಭಜನೆ ಹಾಡಿಗೆ ನೃತ್ಯ ಮಾಡಿದ ಹಸು – ತಾಳಕ್ಕೆ ತಕ್ಕ ಹೆಜ್ಜೆ...

Viral video: ಕೃಷ್ಣನ ಭಜನೆ ಹಾಡಿಗೆ ನೃತ್ಯ ಮಾಡಿದ ಹಸು – ತಾಳಕ್ಕೆ ತಕ್ಕ ಹೆಜ್ಜೆ ಕಂಡು ಪುಳಕಿತರಾದ ಜನ !!

Viral vedeio

Hindu neighbor gifts plot of land

Hindu neighbour gifts land to Muslim journalist

Viral video: ಗೋವನ್ನು ಹಿಂದೂಗಳು ಪೂಜನೀಯ ಭಾವನೆಯಿಂದ ಕಾಣುವುದುಂಟು. ಅವುಗಳನ್ನು ಮನೆಗಳಲ್ಲಿ ಮಾತ್ರವಲ್ಲದೆ ಮಠ- ಮಂದಿರಗಳಲ್ಲಿ, ದೇವಾಲಯಗಳಲ್ಲಿ ಸಾಕುತ್ತಾರೆ. ಅಂತೆಯೇ ಇಲ್ಲೊಂದೆಡೆ ದೇವಾಲಯವೋ ಅಥವಾ ಮಠದಲ್ಲೆಲ್ಲೋ ಒಂದೆಡೆ ಕಟ್ಟಿದ ಹಸುವೊಂದು ಪಕ್ಕದಲ್ಲಿ ಮಹಿಳೆಯರು ಹಾಡೋ ಕೃಷ್ಣನ ಭಜನೆಗೆ ಎಷ್ಟು ಚಂದ ಹೆಜ್ಜೆ ಹಾಕಿದೆ ಗೊತ್ತಾ?! ಇದನ್ನು ಕಂಡರೆ ನೀವೇ ಆಶ್ಚರ್ಯಗೊಳ್ಳುತ್ತೀರಾ !! ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್(Viral Video) ಆಗ್ತಿದೆ.

ಹೌದು, ಫೇಸ್ ಬುಕ್ ನಲ್ಲಿ ‘ಉಡುಪಿಯ ಕಂಡೀರಾ'(Udupiya kandira) ಎಂಬ ಫೇಜ್ ಒಂದರಲ್ಲಿ ‘ಭಜನೆಗೆ ಹೆಜ್ಜೆ ಹಾಕಿತಾ ಹಸು’ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಕೃಷ್ಣನ ಸ್ವಾಗತಂ ಕೃಷ್ಣ, ಶರಣಾಗತಂ ಕೃಷ್ಣ ಎಂಬ ಭಜನೆಗೆ ಹಸುವುದೊಂದು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದೆ. ಒಂದ ಕಾಲು ಎತ್ತಿ, ಮತ್ತೊಂದು ಕಾಲನ್ನು ನೆಲಕ್ಕೆ ಒತ್ತುತ್ತಾ, ಆಚೀಚೆ ಆಡಿ ನಲಿಯುವ ಈ ಹಸುವನ್ನು ಕಂಡ ವೀಕ್ಷರು ನಿಜಕ್ಕೂ ಇದು ಅಚ್ಚರಿಯೇ ಸರಿ ಎಂದಿದ್ದಾರೆ.

ಅಂದಹಾಗೆ ವೈರಲ್ ಆದ ವಿಡಿಯೋದಲ್ಲಿ ಕೊಟ್ಟಿಗೆಯೊಂದರಲ್ಲಿ ಹಸುವೊಂದನ್ನು ಕಟ್ಟಿ ಹಾಕಲಾಗಿದೆ. ಅದರ ಪಕ್ಕದಲ್ಲೇ ಮಹಿಳೆಯರು ಕೃಷ್ಣನ ಸ್ವಾಗತಂ ಕೃಷ್ಣ, ಶರಣಾಗತಂ ಕೃಷ್ಣ ಎಂದು ಭಜನೆ ಮಾಡುತ್ತಿದ್ದಾರೆ. ಇದರ ತಾಳಕ್ಕೆ ತಕ್ಕಂತೆ ಹಸು ತನ್ನ ಮುಂಗಾಲುಗಳಿಂದ ಹೆಜ್ಜೆ ಹಾಕುತ್ತಿದೆ. ಭಜನೆಯನ್ನು ಆಲಿಸಿಯೇ ತಾನು ಕುಣಿಯುತ್ತಿರುವಂತೆ ಇದು ಕಾಣುತ್ತದೆ.

ಇನ್ನು ಇದು ಬಹುಶಃ ಉಡುಪಿಯ ಅಷ್ಠಮಠಗಳಲ್ಲಿ ಯಾವದೋ ಒಂದು ಮಠವಾಗಿರಬೇಕು. ಯಾಕೆಂದರೆ ‘ಉಡುಪಿಯ ಕಂಡೀರಾ’ ಪೇಜ್ ಉಡುಪಿ ಜಿಲ್ಲಾ ದರ್ಶನವನ್ನು ಮಾಡಿಸುವಂತದ್ದು. ಹೀಗಾಗಿ ಅದು ಉಡುಪಿಯ ಮಠವೇ ಇರಬಹುದು. ಒಟ್ಟಿನಲ್ಲಿ ಈ ವಿಡಿಯೋ ನೋಡಿದರೆ ನಿಜಕ್ಕೂ ರೋಮಾಂಚನವಾಗುತ್ತೆ.

https://www.facebook.com/share/v/hRWuanUtsd7FkLrK/?mibextid=jmPrMh

ಇದನ್ನು ಓದಿ: Bigg boss kannada: ಬಿಗ್ ಬಾಸ್’ನ ಮತ್ತೊಬ್ಬ ಸ್ಪರ್ಧಿ ಮೇಲೆ ದೂರು ದಾಖಲು ?!