IAF Plane Crash : ಭೀಕರ ಅಪಘಾತಕ್ಕೀಡಾದ ವಾಯುಪಡೆ ತರಬೇತಿ ವಿಮಾನ !! ಇಬ್ಬರು ಪೈಲಟ್‌ಗಳ ಸಾವು

IAF Plane Crash : ತೆಲಂಗಾಣದಲ್ಲಿ ವಾಯುಪಡೆಯ ತರಬೇತಿ ವಿಮಾನ(IAF Plane Crash) ಬೆಳಗ್ಗೆ 8.55ರ ಸುಮಾರಿಗೆ ಪತನಗೊಂಡ ಘಟನೆ ವರದಿಯಾಗಿದೆ. ಈ ದುರ್ಘಟನೆಯಲ್ಲಿ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ(Death)ಎಂದು ತಿಳಿದುಬಂದಿದೆ.

image source: News 18

ಇದನ್ನು ಓದಿ: Tripthi dimri: ಅನಿಮಲ್​ ಚಿತ್ರಕ್ಕಾಗಿ ಪೂರ್ತಿ ಬೆತ್ತಲಾದ ನಟಿ ಖ್ಯಾತ ನಟಿ – ವೈರಲ್ ಆಯ್ತು ಬೆಡ್ ರೂಮ್ ವಿಡಿಯೋ !!

ಪೊಲೀಸರ ಮಾಹಿತಿ ಅನುಸಾರ, ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ಈ ಅವಘಡ ಸಂಭವಿಸಿದ್ದು, ವಿಮಾನದಲ್ಲಿ ಇಬ್ಬರು ಭಾರತೀಯ ವಾಯುಪಡೆ ಅಧಿಕಾರಿಗಳಿದ್ದರು. ಈ ಅಪಘಾತ ಸಂಭವಿಸಿದ ಸಂದರ್ಭ ವಿಮಾನ ತೂಪ್ರಾನ್ ಪ್ರದೇಶದಲ್ಲಿತ್ತು ಏರ್ ಫೋರ್ಸ್ ಅಕಾಡೆಮಿ ದುಂಡಿಗಲ್‌ನಿಂದ ವಿಮಾನ ಟೇಕಾಫ್ ಆಗಿತ್ತು ಎನ್ನಲಾಗಿದೆ. ಇಂದು ಬೆಳಗ್ಗೆ ಪಿಸಿ 7 ಎಂಕೆ II ವಿಮಾನ ತರಬೇತಿ ಸಂದರ್ಭ ಅಪಘಾತಕ್ಕೀಡಾಗಿದೆ ಎಂದು ಭಾರತೀಯ ವಾಯುಪಡೆ ಮಾಹಿತಿ ನೀಡಿದೆ.

ಇದನ್ನು ಓದಿ: Adhar Update: ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆ ಕ್ಯಾನ್ಸಲ್- ಸರ್ಕಾರದ ಹೊಸ ಆದೇಶ !! ಯಾಕಾಗಿ ಗೊತ್ತಾ ?

ದಿಂಡುಗಲ್‌ನ ಏರ್ ಫೋರ್ಸ್ ಅಕಾಡೆಮಿ ತರಬೇತಿ ವೇಳೆ ಈ ಅವಘಡ ಸಂಭವಿಸಿದ್ದು, ವಿಮಾನದಲ್ಲಿದ್ದ ಇಬ್ಬರೂ ಪೈಲೆಟ್ ಗಳು ಗಂಭೀರವಾಗಿ ಗಾಯಗೊಂಡಿದ್ದು, ಆ ಬಳಿಕ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರಲ್ಲಿ ಒಬ್ಬರು ಇನ್ಸ್ಟ್ರಕ್ಟರ್ ಆಗಿದ್ದು, ಮತ್ತೊಬ್ಬರು ಕೆಡೆಟ್ ಆಗಿದ್ದರು. ಈ ಅವಘಡದ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂತಾಪ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.