Fixed Deposit Rates: FD ಇಡುವವರಿಗೆ ಮುಖ್ಯ ಮಾಹಿತಿ- ದುಪ್ಪಟ್ಟು ಬಡ್ಡಿ ನೀಡುತ್ತೆ ನೋಡಿ ಈ ಬ್ಯಾಂಕ್!!
Fixed Deposit Rates: ಭಾರತದಲ್ಲಿ ಅತಿಸಾಮಾನ್ಯವಾಗಿ ಬಳಕೆಯಾಗುವ ಸೇವಿಂಗ್ ಸ್ಕೀಮ್ಗಳಲ್ಲಿ (Savings Scheme)ಫಿಕ್ಸೆಡ್ ಡೆಪಾಸಿಟ್ (Fixed Deposit) ಕೂಡ ಒಂದು. ಭಾರತದ ಅತಿ ದೊಡ್ಡ ಬ್ಯಾಂಕ್ ಎನಿಸಿಕೊಂಡಿರುವ ಎಸ್‌ಬಿಐ (SBI) ಹಣಕಾಸಿನ ಭದ್ರತೆಯನ್ನು ಉಳಿಸಿಕೊಂಡು ತಮ್ಮ ಉಳಿತಾಯವನ್ನು ಹೆಚ್ಚಿಸಲು ಬಯಸುವ ಮಂದಿಗೆ ಫಿಕ್ಸೆಡ್ ಡೆಪಾಸಿಟ್‌ಗೆ(Fixed Deposit Rates) ಹೆಚ್ಚಿನ ಬಡ್ಡಿದರವನ್ನು ನೀಡುತ್ತಿದೆ.ಪ್ರಸ್ತುತ ಮೂರು ಬ್ಯಾಂಕ್‌ಗಳು ವಿಶೇಷ ಎಫ್‌ಡಿ ಯೋಜನೆಗಳನ್ನು ನಡೆಸುತ್ತಿದ್ದು, ಈ ಯೋಜನೆಗಳ ಪ್ರಯೋಜನಗಳನ್ನು ನೀವು ಡಿಸೆಂಬರ್ 31 ರೊಳಗೆ ಪಡೆಯಬಹುದಾಗಿದೆ.
* IDBI ವಿಶೇಷ FD ಯೋಜನೆ:
IDBI ಬ್ಯಾಂಕ್ ವಿಶೇಷ FD “ಅಮೃತ್ ಮಹೋತ್ಸವ FD ಯೋಜನೆ”ಯನ್ನು ನಡೆಸುತ್ತಿದೆ.ಈ ವಿಶೇಷ ನಿಶ್ಚಿತ ಠೇವಣಿ ಅವಧಿಯನ್ನು ಅಕ್ಟೋಬರ್ 31 ರಿಂದ ಡಿಸೆಂಬರ್ 31 ರವರೆಗೆ ವಿಸ್ತರಿಸಲಾಗಿದೆ. ಈ ಯೋಜನೆಯಲ್ಲಿ 444 ದಿನಗಳ FD 7.65% ಬಡ್ಡಿಯನ್ನು ನೀಡುತ್ತದೆ.
* ಇಂಡಿಯನ್ ಬ್ಯಾಂಕ್ ಎಫ್‌ಡಿ ಯೋಜನೆ:
ಇಂಡಿಯನ್ ಬ್ಯಾಂಕ್ ಸದ್ಯ “ಇಂಡ್ ಸೂಪರ್ 400″ ಮತ್ತು ಇಂಡ್ ಸುಪ್ರೀಂ 300 ಡೇಸ್” ಹೆಸರಿನ ಎರಡು ವಿಶೇಷ ಎಫ್‌ಡಿ ಯೋಜನೆಗಳನ್ನು ನಡೆಸುತ್ತಿದ್ದು, ಇದೀಗ ಇಂಡಿಯನ್ ಬ್ಯಾಂಕ್ ಇದನ್ನು ಡಿಸೆಂಬರ್ 31, 2023ರವರೆಗೆ ವಿಸ್ತರಿಸಿ ಅಧಿಸೂಚನೆ ಹೊರಡಿಸಿದೆ. ಈ ಯೋಜನೆಯ ಲಾಭವನ್ನು ಪಡೆಯಲು ಗ್ರಾಹಕರು ಕೂಡಲೇ ಸಮೀಪದ ಬ್ಯಾಂಕ್ ಶಾಖೆಗೆ ಭೇಟಿ ಮಾಡಿ ಯೋಜನೆಗೆ ಸೇರಲು ಇಂಡಿಯನ್ ಬ್ಯಾಂಕ್ ಮನವಿ ಮಾಡಿದೆ.
ವಿಶೇಷ ನಿಶ್ಚಿತ ಠೇವಣಿ (FD) ಯೋಜನೆಗಳಲ್ಲಿ Ind Super 400 ಯೋಜನೆ ಕೂಡ ಒಂದಾಗಿದ್ದು, 10,000 ರೂಪಾಯಿಯಿಂದ 2 ಕೋಟಿ ರೂಪಾಯಿಗಳ ನಡುವಿನ ಹೂಡಿಕೆಗಳಿಗೆ 400 ದಿನಗಳಲ್ಲಿ ಹೆಚ್ಚಿನ ಬಡ್ಡಿ ದರದ ಆಯ್ಕೆಗಳನ್ನು ಒದಗಿಸುತ್ತದೆ. ಸಾಮಾನ್ಯ ಹೂಡಿಕೆದಾರರಿಗೆ 7.25 ಪ್ರತಿಶತ ಬಡ್ಡಿಯನ್ನು ಒದಗಿಸುತ್ತದೆ. ಹಿರಿಯ ನಾಗರಿಕರಿಗೆ 7.75 ಪ್ರತಿಶತ ಬಡ್ಡಿಯನ್ನು ಒದಗಿಸುತ್ತದೆ.ಅದೇ ರೀತಿ ಅತ್ಯಂತ ಹಿರಿಯ ನಾಗರಿಕರಿಗೆ 8.00 ಪ್ರತಿಶತ ಬಡ್ಡಿಯನ್ನು ನೀಡಲಾಗುತ್ತದೆ.
Ind Supreme 300 ಯೋಜನೆಯಲ್ಲಿ 300 ದಿನಗಳವರೆಗೆ 5,000 ರೂಪಾಯಿಯಿಂದ 2 ಕೋಟಿಗಳ ನಡುವಿನ ಹೂಡಿಕೆಗಳಿಗೆ ಹೆಚ್ಚಿನ ಬಡ್ಡಿ ಒದಗಿಸಲಾಗುತ್ತದೆ. ಹಿರಿಯ ನಾಗರಿಕರಿಗೆ ಶೇ 0.50 ಹೆಚ್ಚುವರಿ ಬಡ್ಡಿ ನೀಡಲಾಗುತ್ತದೆ. ಹಿರಿಯ ನಾಗರಿಕರ ಪಟ್ಟಿಯಲ್ಲಿ ಬ್ಯಾಂಕ್ ಉದ್ಯೋಗಿಗಳಿಗೆ ಶೇ 1.50 ಹೆಚ್ಚುವರಿ ಬಡ್ಡಿ ನೀಡಲಾಗುತ್ತದೆ. ಅತ್ಯಂತ ಹಿರಿಯ ನಾಗರಿಕರಲ್ಲಿ ಬ್ಯಾಂಕ್ ಉದ್ಯೋಗಿಗಳಿಗೆ ಶೇ 1.75 ಹೆಚ್ಚುವರಿ ಬಡ್ಡಿಯನ್ನು ಒದಗಿಸುತ್ತದೆ.ಇದರಲ್ಲಿ 7.05 ಶೇಕಡಾ ಸ್ಥಿರ ಬಡ್ಡಿದರವನ್ನು ಹೊಂದಿರುತ್ತದೆ. ಅತಿ ಹಿರಿಯ ನಾಗರಿಕರಿಗೆ ಶೇ 0.75 ಹೆಚ್ಚುವರಿ ಬಡ್ಡಿ, ಬ್ಯಾಂಕ್ ಉದ್ಯೋಗಿಗಳಿಗೆ ಶೇ 1 ಹೆಚ್ಚುವರಿ ಬಡ್ಡಿ ನೀಡಲಾಗುತ್ತದೆ.
* SBI ಅಮೃತ್ ಕಲಶ ಯೋಜನೆ :
ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ SBI “ಅಮೃತ ಕಲಶ ಯೋಜನೆ” ಎಂಬ ಯೋಜನೆಯನ್ನು ಜಾರಿಗೆ ತಂದಿದ್ದು, ಭಾರತೀಯ ನಾಗರಿಕರು ಮತ್ತು NRI ಗ್ರಾಹಕರಿಗೆ SBIಯ ಅಮೃತ್ ಕಲಶ್ FD ಯೋಜನೆ ಆಕರ್ಷಕ ಬಡ್ಡಿದರಗಳನ್ನು ನೀಡುತ್ತದೆ. ಈ ವಿಶೇಷ ಕಾರ್ಯಕ್ರಮವನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದೆ. ಈ ವಿಶೇಷ ನಿಶ್ಚಿತ ಠೇವಣಿ ಯೋಜನೆಯು 400 ದಿನಗಳ ಮೆಚ್ಯುರಿಟಿ ಅವಧಿಯನ್ನು ಹೊಂದಿದೆ.ಅಮೃತ್ ಕಲಶ ಯೋಜನೆಯ ಬಡ್ಡಿಯನ್ನು ಮಾಸಿಕ, ತ್ರೈಮಾಸಿಕ ಮತ್ತು ಅರ್ಧ ವಾರ್ಷಿಕ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ SBI ಯ ಅಮೃತ್ ಕಲಶ್ ಠೇವಣಿ ಎಫ್‌ಡಿ ಯೋಜನೆಯಲ್ಲಿ ಸಾಮಾನ್ಯ ಜನರಿಗೆ 7.10 ಶೇಕಡಾ ಬಡ್ಡಿದರವನ್ನು ಮತ್ತು ಹಿರಿಯ ನಾಗರಿಕರಿಗೆ 7.60 ಶೇಕಡಾ ಬಡ್ಡಿದರವನ್ನು ಒದಗಿಸುತ್ತದೆ.
ಇದನ್ನು ಓದಿ: Bhavani Revanna: ಭವಾನಿ ರೇವಣ್ಣರ ಐಷಾರಾಮಿ ಕಾರಿಗೆ ಗುದ್ದಿದ್ದ ಬೈಕ್ ಸವಾರ – ಕಾರಿಂದ ಹೊರಬಂದ ಭವಾನಿ ಮಾತು ಕೇಳಿ ಶಾಕ್ ಆದ ಜನ