Husband – Wife: ರಾತ್ರಿ ನಿದ್ರೆಯಲ್ಲಿ ಏನೋ ಗುನುಗುಟ್ಟಿದ ಪತ್ನಿ – ಆ ಕ್ಷಣವೇ ಪೊಲೀಸ್ ಕರೆತಂದ ಪತಿ !! ಅಷ್ಟಕ್ಕೂ ಹೆಂಡತಿ ಹೇಳಿದ್ದಾದ್ರೂ ಏನು?
World news Wife admitted crime in her sleep husband call police at midnight woman sent jailed
Husband – Wife: ಪತಿ ಪತ್ನಿ (Husband – Wife) ಅಂದಮೇಲೆ ಅವರಿಬ್ಬರೂ ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ಅವರ ದಾಂಪತ್ಯವು ಪ್ರೀತಿ ವಿಶ್ವಾಸದ ಮೇಲೆ ನಿಂತಿರುತ್ತದೆ ಆದರೂ ಕೆಲವೊಮ್ಮೆ ಅವರ ಆಲೋಚನೆಗಳು ವಿಭಿನ್ನ ಆಗಿರುತ್ತವೆ. ಕೆಲವರು ತಮ್ಮ ಜೀವನವನ್ನು ಗುಟ್ಟಾಗಿಟ್ಟುಕೊಂಡಿರುತ್ತಾರೆ. ಹಲವು ವಿಚಾರಗಳನ್ನು ತಮ್ಮ ಸಂಗಾತಿ ಜೊತೆ ಹಂಚಿಕೊಳ್ಳೋದಿಲ್ಲ. ಯಾರಿಂದಲೋ ಸಂಗಾತಿಯ ಗುಟ್ಟು ರಟ್ಟಾದಾಗ ಅಥವಾ ಸಂಗಾತಿಯೇ ಬಾಯ್ಬಿಟ್ಟಾಗ ದಾಂಪತ್ಯದಲ್ಲಿ ಬಿರುಗಾಳಿ ಏಳುತ್ತದೆ. ಅಂತೆಯೇ ಈಗ ಇಲ್ಲೊಂದು ವಿಚಾರ ಬಯಲಿಗೆ ಬಂದಿದೆ.
ಅದರಲ್ಲೂ ರಾತ್ರಿ (Night) ನಿದ್ರೆ ಮಾಡುವಾಗ ಮಾತನಾಡುವ, ನಡೆದಾಡುವ ಜನರಿದ್ದಾರೆ. ಅವರು ತಮ್ಮ ಜೀವನದಲ್ಲಿ ನಡೆಯುವ ಅನೇಕ ವಿಷ್ಯಗಳನ್ನು ರಾತ್ರಿ ನಿದ್ರೆ (night) ಯಲ್ಲಿ ಬಾಯ್ಬಿಡುತ್ತಾರೆ. ಈ ಮಹಿಳೆಗೂ ಇದೇ ದೊಡ್ಡ ಶಾಪವಾಗಿದೆ. ರಾತ್ರಿ ನಿದ್ರೆಯಲ್ಲಿ ಪತ್ನಿ ಹೇಳಿದ ಮಾತು ಕೇಳಿ ದಂಗಾದ ಪತಿ ಆಕೆಯನ್ನು ಜೈಲಿಗೆ ನೂಕಿದ್ದಾನೆ.
ಆಂಟೊಯಿನ್ ಮತ್ತು ರುತ್ ಫೋರ್ಟೆ ದಂಪತಿ ಇಬ್ಬರು 2010ರಲ್ಲಿ ಮದುವೆಯಾಗಿದ್ದರು. ಆಂಟೊಯಿನ್ ಗೆ 61 ವರ್ಷ. ರುತ್ ಪೋರ್ಟೆಗೆ 47 ವರ್ಷ. ಮದುವೆಯಾದ್ಮೇಲೆ ಇಬ್ಬರೂ ಬಹಳ ಪ್ರೀತಿಯಿಂದ ಜೀವನ ನಡೆಸುತ್ತಿದ್ದರು. ಅವರ ವೈವಾಹಿಕ ಜೀವನ ತುಂಬಾ ಚೆನ್ನಾಗಿ ಸಾಗಿತ್ತು. ಇಬ್ಬರ ಮಧ್ಯೆ ಯಾವುದೇ ಗುಟ್ಟಿರಲಿಲ್ಲ. ಆದರೆ ಒಂದು ರಾತ್ರಿ ಇದ್ದಕ್ಕಿದ್ದಂತೆ ಆಂಟೊಯಿನ್ ತನ್ನ ಹೆಂಡತಿ ರುತ್ ಫೋರ್ಟೆಯನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ. ಆಂಟೊಯಿನ್ ಮತ್ತು ರುತ್ ಫೋರ್ಟೆ ಮಧ್ಯೆ ಆ ರಾತ್ರಿ ಯಾವುದೇ ಜಗಳ ನಡೆದಿರಲಿಲ್ಲ. ಆದ್ರೆ ರುತ್ ಫೋರ್ಟೆ ನಿದ್ರೆಯಲ್ಲಿ ಆಡಿದ ಮಾತೇ ಆಕೆಯನ್ನು ಸಂಕಷ್ಟಕ್ಕೆ ನೂಕಿದೆ. ಆಂಟೊಯಿಲ್ ಕಂಗಾಲ್ ಆಗಿದ್ದಲ್ಲದೆ ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾನೆ. ಮನೆಗೆ ಬಂದ ಪೊಲೀಸರು ರುತ್ ಫೊರ್ಟೆಯನ್ನು ಬಂಧಿಸಿ, ಜೈಲಿಗೆ ಹಾಕಿದ್ದಾರೆ.
ರುತ್ ಹಾಗೂ ಆಂಟೊಯಿಲ್ ಇಬ್ಬರು ಆ ದಿನ ರಾತ್ರಿ ಸುಖ ನಿದ್ರೆಯಲ್ಲಿದ್ದ ಸಂದರ್ಭದಲ್ಲಿ, ಕಣ್ಣು ಕಾಣದ ಮಹಿಳೆಯ ಎಟಿಎಂ ಅನ್ನು ರುತ್ ಫೊರ್ಟೆ ಕದ್ದಿರೋದಾಗಿ ನಿದ್ರೆಯಲ್ಲಿ ಹೇಳಿದ್ದಾಳೆ. ದಿವ್ಯಾಂಗ ಮಹಿಳೆ ಎಟಿಎಂ ಕದ್ದಿದ್ದಲ್ಲದೆ ಆಕೆ ಹಣದಿಂದ ತನ್ನಿಷ್ಟದ ವಸ್ತುಗಳನ್ನು ಖರೀದಿ ಮಾಡುತ್ತಿರುವುದಾಗಿ ಹೇಳಿದ್ದಾಳೆ. ಇದನ್ನು ಕೇಳಿದ ಪತಿ ಆಘಾತಕ್ಕೊಳಗಾಗಿದ್ದಾನೆ. ಪತ್ನಿ ರುತ್ ತನ್ನಿಂದ ಏನನ್ನೂ ಮುಚ್ಚಿಡೋದಿಲ್ಲವೆಂದು ಆಂಟೊಯಿಲ್ ಭಾವಿಸಿದ್ದ. ಆದ್ರೆ ಅದು ತಪ್ಪಾಗಿತ್ತು. ಅಲ್ಲದೆ ರುತ್ ಒಬ್ಬ ಅಸಹಾಯಕ ಮಹಿಳೆಗೆ ಮೋಸ ಮಾಡಿರುವುದು ಆಂಟೊಯಿಲ್ ಗೆ ಇಷ್ಟವಾಗ್ಲಿಲ್ಲ. ತಾನು ಪ್ರೀತಿಸಿದ್ದ ಮಹಿಳೆ ಇತರರಿಗೆ ಮೋಸ ಮಾಡಲು ಸಾಧ್ಯವಿಲ್ಲ ಎನ್ನುವ ಆಂಟೊಯಿಲ್ ಮೋಸ ಮಾಡಿದ ಪತ್ನಿಗೆ ತಕ್ಕ ಶಿಕ್ಷೆ ಆಗಬೇಕು ಎನ್ನುತ್ತಾನೆ. ಹಾಗಾಗಿಯೇ ಆತ ಪೊಲೀಸರಿಗೆ ಕರೆ ಮಾಡಿದ್ದ. ಪೊಲೀಸರು ರಿತ್ ಳನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದರು. ರುತ್ ತಪ್ಪು ಮಾಡಿದ್ದಾಳೆ ಎಂಬುದು ಕೋರ್ಟ್ ನಲ್ಲಿ ಸಾಭೀತಾಗಿದೆ. ಹಾಗಾಗಿ ಕೋರ್ಟ್ ಆಕೆಗೆ 16 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ: ಗ್ರಾಮ ಪಂಚಾಯಿತಿ ಸಿಬ್ಬಂದಿಗಳೇ ಇಲ್ಲಿದೆ ನಿಮಗೊಂದು ಭರ್ಜರಿ ಸಿಹಿ ಸುದ್ದಿ !!