Home Remedy For Cracked Heel: ಹಿಮ್ಮಡಿ ಒಡೆದು ವಿಪರೀತ ನೋವುತ್ತಿದೆಯಾ ?! ಅಡುಗೆ ಮನೆಯಲ್ಲಿರೋ ಈ ವಸ್ತುವನ್ನು ಹೀಗೆ ಬಳಸಿ, ನೋವು ಮಾತ್ರವಲ್ಲ ಒಡೆತವೂ ಮಾಯವಾಗುತ್ತೆ!!

Lifestyle health news skin care Home Remedy For Cracked Heel

Home Remedy For Cracked Heel: ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವ ಸಮಸ್ಯೆ ಅಧಿಕವಾಗಿ ಕಾಡುತ್ತದೆ. ಹಿಮ್ಮಡಿ ನೋವು ಕೆಲವರಿಗೆ ದೈನಂದಿನ ಚಟುವಟಿಕೆಗಳಲ್ಲಿ ಅಪಾರ ತೊಂದರೆ ಉಂಟುಮಾಡಬಹುದು. ಆದರೆ ಹಿಮ್ಮಡಿ ನೋವು ಕೆಲವರನ್ನು ದೀರ್ಘಕಾಲದವರೆಗೆ ಕಾಡುವುದರಿಂದ ಇದು ನಿವಾರಣೆ ಮಾಡಲಾಗದ ಸಮಸ್ಯೆ ಎಂದು ಭಾವಿಸುವುದು ತಪ್ಪು ಕಲ್ಪನೆ. ಯಾಕೆಂದರೆ ಕೆಲವು ಮನೆಮದ್ದುಗಳನ್ನು (Home Remedy for cracked heel) ಅಳವಡಿಸಿಕೊಳ್ಳುವ ಮೂಲಕ ಈ ಸಮಸ್ಯೆಯನ್ನು ಖಂಡಿತಾ ನಿವಾರಿಸಬಹುದು.

ಮುಖ್ಯವಾಗಿ ನಿಮ್ಮ ಹಿಮ್ಮಡಿಗಳು ಹೆಚ್ಚು ನೀರು ಮತ್ತು ಧೂಳಿನ ಸಂಪರ್ಕಕ್ಕೆ ಬಂದರೆ, ಅವು ಬಿರುಕುಗೊಳ್ಳುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಅಲ್ಲದೆ, ಸ್ಥೂಲಕಾಯತೆ, ಸರಿಯಾಗಿ ಹೊಂದಿಕೊಳ್ಳದ ಬೂಟುಗಳು, ದೀರ್ಘಕಾಲ ನಿಲ್ಲುವುದು, ಒಣ ಚರ್ಮ ಮತ್ತು ಸರಿಯಾದ ಆರೈಕೆ ಮತ್ತು ನೈರ್ಮಲ್ಯದ ಕೊರತೆ ಕೂಡಾ ಹಿಮ್ಮಡಿ ಒಡೆಯಲು ಇರುವ ಸಾಮಾನ್ಯ ಕಾರಣಗಳು.

ಸದ್ಯ ಒಡೆದ ಹಿಮ್ಮಡಿಗಳನ್ನು ಗುಣಪಡಿಸಲು ಇಲ್ಲಿದೆ ಸುಲಭ ಮನೆಮದ್ದು :
ತೆಂಗಿನೆಣ್ಣೆ:
ಒಡೆದ ಹಿಮ್ಮಡಿಗಳನ್ನು ವಾಸಿಮಾಡಲೂ ಕೂಡಾ ತೆಂಗಿನ ಎಣ್ಣೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದು ಹಿಮ್ಮಡಿಗಳನ್ನು ತೇವಗೊಳಿಸುವುದು ಮಾತ್ರವಲ್ಲದೆ ಅವುಗಳನ್ನು ಸೋಂಕಿನಿಂದ ರಕ್ಷಿಸುತ್ತದೆ.

ಅಥವಾ ಈ ಕೆಳಗಿನ ಕೆಲವು ಪದಾರ್ಥಗಳು ಚರ್ಮವನ್ನು ತೇವವಾಗಿಡುವ ಮತ್ತು ಪಾದಗಳನ್ನು ಮೃದುಗೊಳಿಸುವ ಕೆಲಸ ಮಾಡುತ್ತದೆ. ಮುಖ್ಯವಾಗಿ, ವಿನೆಗರ್, ಆಲಿವ್ ಎಣ್ಣೆ, ಶಿಯಾ ಬಟರ್ , ಹಿಸುಕಿದ ಬಾಳೆಹಣ್ಣುಗಳು, ಪ್ಯಾರಾಫಿನ್ ಮೇಣ, ಓಟ್ ಮೀಲ್ ಅನ್ನು ಎಣ್ಣೆಯೊಂದಿಗೆ ಬೆರೆಸಿ ಹಚ್ಚುವುದು

ಬಾಳೆಹಣ್ಣು :
2 ಮಾಗಿದ ಬಾಳೆಹಣ್ಣನ್ನು ಹಿಸುಕಿ ಪೇಸ್ಟ್ ಮಾಡಿ ಮತ್ತು ಅದನ್ನು ಪಾದಗಳ ಹಿಮ್ಮಡಿಗೆ ಹಚ್ಚಿ ಸುಮಾರು 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಪಾದಗಳನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ. 2 ವಾರಗಳಲ್ಲಿ ಹಿಮ್ಮಡಿ ಒಡೆಯುವ ಸಮಸ್ಯೆ ಸಂಪೂರ್ಣವಾಗಿ ಗುಣವಾಗುತ್ತದೆ.

ಉಗುರುಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸುವುದು:
ಒಡೆದ ಹಿಮ್ಮಡಿಗಳನ್ನು ಸರಿಪಡಿಸಲು, ಪಾದಗಳನ್ನು ಸುಮಾರು 20 ನಿಮಿಷಗಳ ಕಾಲ ಉಗುರುಬೆಚ್ಚಗಿನ ನೀರಿನಲ್ಲಿ ನೆನೆಸಿಟ್ಟುಕೊಳ್ಳಿ. ನಂತರ ಪಾದಗಳನ್ನು ನೀರಿನಿಂದ ಹೊರ ತೆಗೆದು ಸಾಸಿವೆ ಎಣ್ಣೆಯನ್ನು ಹಚ್ಚಿ ನಂತರ ಸಾಕ್ಸ್ ಧರಿಸಿದರೆ ಕೆಲವೇ ದಿನಗಳಲ್ಲಿ ಹಿಮ್ಮಡಿ ಸರಿಯಾಗುತ್ತದೆ.

ಜೇನುತುಪ್ಪ :
ಜೇನುತುಪ್ಪವನ್ನು ನೈಸರ್ಗಿಕ ನಂಜುನಿರೋಧಕ ಆದಕಾರಣ ಇದು ಬಿರುಕು ಬಿಟ್ಟ ಪಾದಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿ ಬೆಚ್ಚಗಿನ ನೀರಿಗೆ 1 ಕಪ್ ಜೇನುತುಪ್ಪವನ್ನು ಮಿಶ್ರಣ ಮಾಡಿ. ಪಾದಗಳನ್ನು ಸ್ವಚ್ಛಗೊಳಿಸಿ, ಈ ಮಿಶ್ರಣದಲ್ಲಿ 20 ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ ಪಾದಗಳನ್ನು ತೊಳೆದು ಮಾಯಿಶ್ಚರೈಸರ್ ಹಚ್ಚಿ. ಇದು ಚರ್ಮವನ್ನು ತೇವಗೊಳಿಸಿ, ಚರ್ಮವನ್ನು ಒಣಗುವುದನ್ನು ತಡೆಯುತ್ತದೆ. ರಾತ್ರಿ ಮಲಗುವ ಮುನ್ನ ಇದನ್ನು ಮಾಡಿಕೊಂದು ಬಂದರೆ ಹಿಮ್ಮಡಿ ಸಮಸ್ಯೆ ನಿವಾರಣೆಯಾಗುತ್ತದೆ.

ಇದರ ಹೊರತು ನಿಮ್ಮ ಪಾದಗಳನ್ನು ಸುಮಾರು 10 ನಿಮಿಷಗಳ ಕಾಲ ಉಗುರು ಬೆಚ್ಚಗಿನ ನೀರಿನಲ್ಲಿ ನೆನೆಸಿ. ಡೆಡ್ ಸೆಲ್ ಗಳನ್ನೂ ತೆಗೆದು ಹಾಕಲು ಸಹಾಯ ಮಾಡಲು ಪಾದದ ಸ್ಕ್ರಬ್ಬರ್‌ನಿಂದ ಹಿಮ್ಮಡಿಗಳನ್ನು ನಿಧಾನವಾಗಿ ಉಜ್ಜಿಕೊಳ್ಳಿ. ಇನ್ನು ಕೆನೆ ಅಥವಾ ಪೆಟ್ರೋಲಿಯಂ ಜೆಲ್ಲಿಯಿಂದ ಚೆನಾಗಿ ಮಸಾಜ್ ಮಾಡಿ. ಮಲಗುವ ವೇಳೆಗೆ ಕಾಟನ್ ಸಾಕ್ಸ್ ಧರಿಸುವುದನ್ನು ಮರೆಯಬೇಡಿ.
ಹೀಗೆ ಮಾಡಿದಲ್ಲಿ ನಿಮ್ಮ ಹಿಮ್ಮಡಿ ಒಡೆಯುವ ಸಮಸ್ಯೆ ಮಾಯವಾಗುತ್ತದೆ.

ಇದನ್ನೂ ಓದಿ: ಇಂದು ಇಲ್ಲಿನ ಶಾಲೆಗಳಿಗೆ ರಜೆ – ಸರ್ಕಾರದಿಂದ ಆದೇಶ !!

Leave A Reply

Your email address will not be published.