Pensioners: ಪಿಂಚಣಿದಾರರೇ, ಬ್ಯಾಂಕ್ ಖಾತೆಗೆ ಮಿಸ್ ಮಾಡ್ದೆ ಇದನ್ನು ಲಿಂಕ್ ಮಾಡಿ !! ಇಲ್ಲಾಂದ್ರೆ ಸರ್ಕಾರ ಪಾವತಿಸುವ ವೇತನ ಕಟ್
Pensioners: ಪಿಂಚಣಿದಾರರಿಗೆ ಜೀವನ್ ಪ್ರಮಾಣ ಪತ್ರ ಸಲ್ಲಿಕೆ ಕಡ್ಡಾಯ, ನೀಡಿದ ಸಮಯದೊಳಗೆ ಇದನ್ನು ಸಲ್ಲಿಸಬೇಕು ಎಂದು ಸರ್ಕಾರ ಹೇಳುತ್ತಾ ಬಂದಿದೆ. ಇದರ ನಡುವೆಯೇ ಬಳ್ಳಾರಿ ಪಿಂಚಣಿದಾರರಿಗೆ( Pensioners) ಜಿಲ್ಲಾಧಿಕಾರಿಗಳು ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ.
ಹೌದು, ಬಳ್ಳಾರಿ(Ballary) ಜಿಲ್ಲಾಧಿಕಾರಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಮ್ಮ ಜಿಲ್ಲೆಯ ಪಿಂಚಣಿದಾರರಿಗೆ ಹೊಸ ಆದೇಶವೊಂದನ್ನು ಹೊರಡಿಸಿದ್ದು, ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ವಿವಿಧ ಸಾಮಾಜಿಕ ಭದ್ರತೆ ಪಿಂಚಣಿ ಯೋಜನೆಗಳಾದ ರೈತರ ವಿಧವಾ ವೇತನ, ಮನಸ್ವನಿ ಯೋಜನೆ, ಮೈತ್ರಿ ಯೋಜನೆ, ಸಂಧ್ಯಾ ಸುರಕ್ಷ ಯೋಜನೆ, ಅಂಗವಿಕಲ ಯೋಜನೆ, ನಿರ್ಗತಿಕ ವಿಧಾನ ವೇತನ ಹಾಗೂ ವೃದ್ಯಾಪ್ಯ ವೇತನ ಪಡೆಯುತ್ತಿರುವವರು ತಮ್ಮ ಬ್ಯಾಂಕ್ ಖಾತೆ ಮತ್ತು ಅಂಚೆ ಖಾತೆಗಳಿಗೆ ಕಡ್ಡಾಯವಾಗಿ ಆಧಾರ್ ಜೋಡಣೆ ಮತ್ತು ಇ-ಕೆವೈಸಿ ಜೋಡಣೆ ಮಾಡಿಸಿಕೊಳ್ಳಬೇಕು ಆದೇಶ ಹೊರಡಿಸಿದ್ದಾರೆ.
ಇದನ್ನು ಓದಿ: ಮಂಗಳೂರಿನಲ್ಲಿ ಪಾಪಿ ತಾಯಿಯ ಭೀಭತ್ಸ್ಯ ಕೃತ್ಯ!! ಹಸುಗೂಸನ್ನು ಕೊಂದು ಮಹಿಳೆ ಆತ್ಮಹತ್ಯೆ!!
ಜಿಲ್ಲಾಡಳಿತ ಆದೇಶ ಹೊರಡಿಸಿದಂತೆ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹಾಗೂ ಇ-ಕೆವೈಸಿ ಯನ್ನು ಮಾಡದೆ ಇದ್ದರೆ ಪಿಂಚಣಿದಾರರು ಸರ್ಕಾರದಿಂದ ಪಡೆಯುವಂತಹ ಎಲ್ಲಾ ರೀತಿಯ ವೇತನ ಪಾವತಿಗಳನ್ನು ನಿಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
Chase Graham