Home Breaking Entertainment News Kannada Sangeeta shringeri: ಅಮ್ಮನ ಕಣ್ಣಿನ ಆಪರೇಷನ್’ಗಾಗಿ ಆ ಕೆಲಸವನ್ನೂ ಮಾಡಿದ್ದಾರಂತೆ ಸಂಗೀತ !! ಬಿಗ್ ಬಾಸ್...

Sangeeta shringeri: ಅಮ್ಮನ ಕಣ್ಣಿನ ಆಪರೇಷನ್’ಗಾಗಿ ಆ ಕೆಲಸವನ್ನೂ ಮಾಡಿದ್ದಾರಂತೆ ಸಂಗೀತ !! ಬಿಗ್ ಬಾಸ್ ಮನೆಯಲ್ಲಿ ಸತ್ಯ ಬಿಚ್ಚಿಟ್ಟ ನಟಿ

BBK Sangeetha sringeri

Hindu neighbor gifts plot of land

Hindu neighbour gifts land to Muslim journalist

BBK Sangeeta sringeri : ಬಿಗ್ ಬಾಸ್(Bigg boss) ಮನೆಯಲ್ಲಿ ಕಂಟೆಸ್ಟೆಂಟ್ಗಳು ತಮ್ಮ ಜೀವನದ ಹಲವಾರು ಸತ್ಯಗಳನ್ನು, ಯಾರಿಗೂ ತಿಳಿದ ವಿಚಾರಗಳನ್ನು ತೆರೆದಿಡುತ್ತಾರೆ. ಅಂತೆಯೇ ಇದೀಗ ಕನ್ನಡ ಬಿಗ್ ಬಾಸ್-10ರ ಪ್ರಬಲ ಕಂಟೆಸ್ಟೆಂಟ್ ಆಗಿರುವ ಸಂಗೀತ ಶೃಂಗೇರಿ (Sangeeta Shringeri) ಅವರು ಅವರು ತಮ್ಮ ಜೀವನದ ಒಂದು ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ಹೌದು, ಸಂಗೀತ (BBK Sangeeta sringeri) ಅವರು ಸದ್ಯ ಕನ್ನಡ ಇಂಡಸ್ಟ್ರಿಯಲ್ಲಿ ಕೊಂಚ ಮಟ್ಟಿಗೆ ಬೇಡಿಕೆಯ ನಟಿಯಾಗಿದ್ದಾರೆ. ಆದರೆ ಅವರು ಇಂಡಸ್ಟ್ರಿಗೂ ಬರುವ ಮೊದಲು ಸಾಕಷ್ಟು ನೋವುಂಡುಬಂದಿದ್ದಾರೆ. ಬಿಗ್ ಬಾಸ್ ಸ್ಪರ್ಧಿಯಾಗಿ ಇದೀಗ 50 ದಿನಗಳನ್ನು ಪೂರೈಸಿರುವ ಸಂಗೀತ ತಮ್ಮ ಕೆಲವು ಭಾವನಾತ್ಮಕ ವಿಚಾರಗಳನ್ನು ತೆರೆದಿಟ್ಟಿದ್ದು, ತಮ್ಮ ತಾಯಿಯ ಕಣ್ಣಿನ ಆಪರೇಷನ್ ಮಾಡಿಸುವಾಗ ಪಟ್ಟ ಕಷ್ಟದ ಬಗ್ಗೆ ಮಾತನಾಡಿದ್ದಾರೆ.

ಬೆಳ್ತಂಗಡಿ: ಗುರುವಾಯನಕೆರೆ ಕಾಲೇಜಿನ ಹಾಸ್ಟೆಲ್ 11 ಹುಡುಗರು ನಾಪತ್ತೆ! ಹುಡುಗ್ರು ಎಸ್ಕೇಪ್ ರೂಟ್ ಹಿಡಿದದ್ದೇ ವಿಚಿತ್ರ !

ಅಂದಹಾಗೆ ಸಂಗೀತ ಅವರ ಬಾಲ್ಯ ಕಡು ಕಷ್ಟದಿಂದ ಕೂಡಿದ್ದು ಸಾಕಷ್ಟು ನೋವುಂಡಿದ್ದಾರಂತೆ. ಎಷ್ಟರ ಮಟ್ಟಿಗೆ ಅಂದ್ರೆ ಕಾಲೇಜು ಫೀಸ್ ಕಟ್ಟುವುದಕ್ಕೂ ಕಷ್ಟ ಆಗಿತ್ತು ಎಂದು ಹೇಳಿದ್ದಾರೆ. ಇದರೊಂದಿಗೆ ಅಮ್ಮನಿಗೆ ಕಣ್ಣಿನ ಸಮಸ್ಯೆ ಕೂಡ ಇತ್ತಂತೆ. ಒಂದು ಕಣ್ಣು ಸರಿಯಾಗಿ ಕಾಣಿಸುತ್ತಿರಲಿಲ್ಲಂತೆ. ಹೇಗಾದರು ಮಾಡಿ ಆಪರೇಷನ್ ಮಾಡಿಸಿ ಕಣ್ಣು ಕಾಣುವಂತೆ ಮಾಡಬೇಕು, ಅಮ್ಮನ ಕಣ್ಣು ಸರಿಯಾಗಿಸಬೇಕು ಎಂಬುದು ಸಂಗೀತ ಅವರ ಆಸೆಯಂತೆ. ಆದರೆ ಇದಕ್ಕೆ ಹಣ ಹೊಂದಿಸಲು ತುಂಬಾ ಕಷ್ಟ ಆದಾಗ ಅದಕ್ಕಾಗಿ ಸಂಗೀತ ಅವರು ಮದುವೆ ಮನೆಯಲ್ಲಿ ಸ್ವಾಗತ ಕೋರುವ ಕೆಲಸವನ್ನು ಮಾಡಿದ್ದಾರಂತೆ. ಕೆಲವರು ಕೆಲಸ ಮಾಡಿಸಿಕೊಂಡವರು ಹಣವನ್ನೇ ಕೊಡದೆ ಆಟ ಆಡಿಸಿದ್ದಾರಂತೆ. ಹೀಗೆ ಬದುಕಿನ ಕೆಲವು ವಿಚಾರ ಹಂಚಿಕೊಂಡು ಸಂಗೀತ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: Mangaluru ಹವಾಮಾನ ವೈಪರಿತ್ಯದ ಪರಿಣಾಮ ವೈರಲ್ ಜ್ವರ ಪ್ರಮಾಣ ಹೆಚ್ಚಳ! ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕ್ರಮ !