School holiday: ಇಂದು ಇಲ್ಲಿನ ಶಾಲೆಗಳಿಗೆ ರಜೆ – ಸರ್ಕಾರದಿಂದ ಆದೇಶ !!

Education news school holidays for some schools due to bomb threat in Bengaluru latest news

Share the Article

Bomb Threat: ಈಗಾಗಲೇ ಖಾಸಗಿ ಶಾಲೆಗಳಿಗೆ ಇಮೇಲ್ ಮುಖೇನ ಬಾಂಬ್ ಬೆದರಿಕೆ(Bomb Threat) ಹಾಕಲಾಗಿತ್ತು. ಇದೀಗ ಈ ಪ್ರಕರಣದ ಕುರಿತು ತನಿಖೆ ಆರಂಭವಾಗಿದೆ. ಈ ಹಿನ್ನೆಲೆ ಇಂದು ಕೆಲವು ಶಾಲೆಗಳಿಗೆ ಮುಂಜಾಗ್ರತೆ ಗೆ ಶಾಲೆಗೆ ರಜೆ ನೀಡಲಾಗಿದೆ.

ಮುಖ್ಯವಾಗಿ ಉಪಮುಖ್ಯಮಂತ್ರಿ ಮನೆಯ ಎದುರುಗಡೆ ಇರುವ ಖಾಸಗಿ ಶಾಲೆಗೂ ಸಹ ರಜೆ ಘೋಷಿಸಲಾಗಿದೆ. ಇನ್ನು ಇವತ್ತು ಸಹ ಕೆಲವು ಶಾಲೆಗಳಿಗೆ ಸೈಬರ್ ಕ್ರೈಂ (CrIme) ಅಧಿಕಾರಿಗಳು ಭೇಟಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸದ್ಯ ಬಾಂಬ್ ಸ್ಕ್ವಾಡ್ ನಿಂದ ಕೆಲವು ಶಾಲೆಗಳಿಗೆ ಗ್ರೀನ್ (Green) ಸಿಗ್ನಲ್ ಈಗಾಗಲೇ ಸಿಕ್ಕಿದೆ. ಗ್ರೀನ್ ಸಿಗ್ನಲ್​ ಸಿಕ್ಕಿರುವ ಶಾಲೆಗಳಿಗೆ ಎಂದಿನಂತೆ ಪ್ರಾರಂಭಿಸಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೆಲವು ಶಾಲೆಗಳಿಗೆ ಸ್ಯಾನಿಟೈಸ್ ಮಾಡಿ ಶಾಲೆ ಪ್ರಾರಂಭಿಸಿ ಎಂದು ಅಧಿಕಾರಿಗಳು ಹೇಳಿದ್ದಾರೆ. ಕೆಲವು ಖಾಸಗಿ ಶಾಲೆಗಳಿಗೆ ಸೈಬರ್ ಕ್ರೈಂ ಅಧಿಕಾರಿಗಳು ಭೇಟಿ ನೀಡಿ ಮಾಹಿತಿಗಳನ್ನು ಪಡೆದು ತೆರಳಿದ್ದಾರೆ. ನಗರದಲ್ಲಿ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣದ ತನಿಖೆ ನಡೆಯುತ್ತಿದೆ.

ಸದ್ಯ ಪೊಲೀಸರಿಗೆ ತಲೆನೋವಾದ ಬಾಂಬ್ ಬೆದರಿಕೆ ಕೇಸ್ ಗಳು‌‌. ಈ ಹಿಂದೆ ಕೂಡ ಹಲವು ಬಾರಿ ಇದೇ ರೀತಿ ಬಾಂಬ್ ಬೆದರಿಕೆ ಮೇಲ್ ಕೇಸ್ ಗಳು ದಾಖಲಾಗಿದ್ದವು ಎನ್ನಲಾಗಿದೆ.

ಇದನ್ನೂ ಓದಿ: ಪ್ರೊ ಕಬಡ್ಡಿ ಆರಂಭಕ್ಕೆ ಕ್ಷಣಗಣನೆ – ಇಂದು ಕಾದಾಡಲಿವೆ ಈ ಎರಡು ಪ್ರಬಲ ತಂಡಗಳು

Leave A Reply