8th Pay Commission: 8ನೇ ವೇತನ ಆಯೋಗ ರಚನೆ ಕುರಿತು ಬಿಗ್ ಅಪ್ಡೇಟ್ ಕೊಟ್ಟ ಕೇಂದ್ರ ಸರ್ಕಾರ !!

Business news central government big update on 8th pay commission latest news

8th Pay Commission: ಕೇಂದ್ರ ಸರ್ಕಾರ ನೌಕರರಿಗೆ ಬಿಗ್ ಶಾಕ್ ನೀಡಿದೆ. ಕೇಂದ್ರ ಸರ್ಕಾರ 8ನೇ ವೇತನ ಆಯೋಗವನ್ನು(8th Pay Commission)ರಚಿಸುವ ಯಾವುದೇ ಯೋಜನೆ ನಮ್ಮ ಮುಂದಿಲ್ಲ ಎಂದು ಸರಕಾರ ಖಾತ್ರಿಪಡಿಸಿದೆ.

ಕೇಂದ್ರ ಸರಕಾರದ ಈ ನಿರ್ಣಯವನ್ನು 54 ಲಕ್ಷ ಕೇಂದ್ರ ಸರಕಾರಿ ನೌಕರರು, ಪಿಂಚಣಿದಾರರ ವೇತನ ಪರಿಷ್ಕರಿಸಲು ಒಪ್ಪಿಕೊಳ್ಳುವುದೇ ಎಂಬ ಪ್ರಶ್ನೆ ಉದ್ಭವಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ವಿತ್ತ ಕಾರ್ಯದರ್ಶಿ ಟಿ.ವಿ.ಸೋಮನಾಥನ್‌ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಸಾಮಾನ್ಯವಾಗಿ ಲೋಕಸಭಾ ಚುನಾವಣೆಗೆ ಮೊದಲೇ ಹಿಂದಿನ ಸರಕಾರಗಳು ವೇತನ ಆಯೋಗ ರಚಿಸುವ ಯೋಜನೆ ಹಾಕಿಕೊಂಡಿದೆ ಎಂದೆಲ್ಲ ಸುದ್ದಿ ಹರಿದಾಡುತ್ತಿದ್ದವು. 2013ರ ಸೆಪ್ಟಂಬರ್‌ನಲ್ಲಿ ಯುಪಿಎ ಸರಕಾರ ಚುನಾವಣೆ ಸಮೀಪಿಸುತ್ತಿದಂತೆ 7ನೇ ವೇತನ ಆಯೋಗ ರಚಿಸಿತ್ತು. ಆದರೆ ಈ ಬಾರಿ ಬಿಜೆಪಿ ಸರಕಾರ ಹೊಸ ಪಿಂಚಣಿ ಪದ್ಧತಿ ಪರಿಶೀಲಿಸಲು ಸರಕಾರ ಮುಂದಾಗಿದೆ.

ಇದನ್ನೂ ಓದಿ: Physical Assault: ಅಪ್ರಾಪ್ತ ಬಾಲಕ, ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ – ಅಪರಾಧಿಗೆ 189 ವರ್ಷ ಜೈಲುವಾಸ ವಿಧಿಸಿದ ಹೊಸದುರ್ಗ ಕೋರ್ಟ್ !! ಅರೆ ಏನಿದು ವಿಚಿತ್ರ ಶಿಕ್ಷೆ?

Leave A Reply

Your email address will not be published.