Home Karnataka State Politics Updates Exit Poll Results 2023: ಪಂಚ ರಾಜ್ಯ ಚುನಾವಣೆ- ಯಾವ ರಾಜ್ಯದಲ್ಲಿ ಯಾರಿಗೆ ಮೇಲುಗೈ?!

Exit Poll Results 2023: ಪಂಚ ರಾಜ್ಯ ಚುನಾವಣೆ- ಯಾವ ರಾಜ್ಯದಲ್ಲಿ ಯಾರಿಗೆ ಮೇಲುಗೈ?!

Exit Poll Results 2023
Image source- Vistara news

Hindu neighbor gifts plot of land

Hindu neighbour gifts land to Muslim journalist

Exit Poll Results 2023 ಇಡೀ ದೇಶವೇ ಕುತೂಹಲದಿಂದ ಕಾದಿದ್ದ ಪಂಚ ರಾಜ್ಯ ಚುನಾವಣೆ ಕೊನೆಗೂ ಮುಕ್ತಾಯವಾಗಿದೆ. ಇನ್ನೇನಿದ್ದರು ಚನರ ಚಿತ್ತ ಪಲಿತಾಂಶದತ್ತ. ಚುನಾವಣೆ ಮುಗಿಯುತ್ತಿದ್ದಂತೆ ಹಲವು ಮಾಧ್ಯಮಗಳು ಎಕ್ಸಿಟ್ ಪೋಲ್ ಸಮೀಕ್ಷೆ(Exit Poll Results 2023) ಮೂಲಕ ಯಾವ ರಾಜ್ಯದಲ್ಲಿ ಯಾರಿಗೆ ಗೆಲುವು ಅನ್ನುವುದನ್ನು ತಿಳಿಸಿವೆ. ಕೆಲವಂತೂ ಭಾರೀ ಕುತೂಹಲ ಕೆರಳಿಸಿದೆ. ಹಾಗಿದ್ರೆ ಯಾವ ರಾಜ್ಯದಲ್ಲಿ ಯಾವ ಪಕ್ಷ ಗೆಲುವು ಸಾಧಿಸಲಿದೆ ನೋಡೋಣ ಬನ್ನಿ.

ಮಧ್ಯಪ್ರದೇಶ:
ಮಧ್ಯ ಪ್ರದೇಶದಲ್ಲಿ ಮೊದಲು ಬಿಜೆಪಿ ಆಡಳಿತವಿತ್ತು. ಹೀಗಾಗಿ ರಿಪಬ್ಲಿಕ್ – ಮ್ಯಾಟ್ರಿಜ್, ಟುಡೇಸ್ ಚಾಣಾಕ್ಯ, ಇಂಡಿಯಾ ಟಿವಿ – ಸಿಎನ್‌ಎಕ್ಸ್‌ ಹಾಗೂ ಜನ್ ಕಿ ಬಾತ್ ಸಮೀಕ್ಷಾ ಸಂಸ್ಥೆಗಳು ಬಿಜೆಪಿ ತನ್ನ ಸರ್ಕಾರ ಉಳಿಸಿಕೊಳ್ಳುತ್ತೆ ಅನ್ನೋ ನಿಲುವನ್ನ ವ್ಯಕ್ತಪಡಿಸಿವೆ. ಆದರೆ, ಇಂಡಿಯಾ ಟುಡೇ – ಆಕ್ಸಿಸ್, ಪೋಲ್ ಸ್ಟ್ರಾಟ್ ಸಮೀಕ್ಷಾ ಸಂಸ್ಥೆಗಳು ಮಾತ್ರ ಕಾಂಗ್ರೆಸ್ ಗೆಲ್ಲಬಹುದು ಎಂದು ಭವಿಷ್ಯ ನುಡಿದಿವೆ. ಇನ್ನು ಜನ್ ಕಿ ಬಾತ್ ಸಂಸ್ಥೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಟೈಟ್ ಫೈಟ್ ಇರಲಿದೆ ಎಂದು ಅಂದಾಜಿಸಿದೆ. ಹೀಗಾಗಿ ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆಯಲ್ಲೇ ಸಾಕಷ್ಟು ಭಿನ್ನತೆ ಇದೆ.

ತೆಲಂಗಾಣ :
ತೆಲಂಗಾಣದ ರಾಜ್ಯಕ್ಕೆ ಜನ್‌ ಕೀ ಬಾತ್‌ ನೀಡಿರುವ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ 56-68 ಸೀಟ್‌ಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದಿದ್ದು, ಆಡಳಿತಾರೂಢ ಬಿಆರ್‌ಎಸ್‌ 46-56 ಸ್ಥಾನ, ಬಿಜೆಪಿ 4-9 ಸ್ಥಾನ, ಎಐಎಂಐಎಂ 5-7 ಸ್ಥಾನ ಹಾಗೂ ಇತರೆ 1 ಸ್ಥಾನ ಗೆಲ್ಲುವ ಭವಿಷ್ಯ ನುಡಿದಿದೆ. ಒಟ್ಟಿನಲ್ಲಿ ಈ ಸಲ ಜನರು BPRS ಅನ್ನು ಕಿತ್ತೊಗೆದು ಕಾಂಗ್ರೆಸ್ ಗೆ ಮಣೆ ಹಾಕಲು ನಿರ್ಧರಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಹೀಗಾದರೆ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ 2 ರಾಜ್ಯದಲ್ಲಿ ಅಧಿಕಾರ ಹಿಡಿದಂತಾಗುತ್ತದೆ.

ಮಿಝೋರಂ:
ಮೀಜೋರಾಂನಲ್ಲಿ ಜನ್‌ ಕೀ ಬಾತ್‌ ನೀಡಿರುವ ಸಮೀಕ್ಷೆಯಲ್ಲಿ ಜಡ್‌ಪಿಎಂ 15-25 ಸೀಟ್‌ ಗೆಲ್ಲುವ ನಿರೀಕ್ಷೆ ಇದೆ. ಆಡಳಿತಾರೂಢ ಎಂಎನ್‌ಎಫ್‌ 10 ರಿಂದ 14 ಸ್ಥಾನ ಗೆಲ್ಲುವ ಸಾಧ್ಯತೆ ಇದ್ದರೆ, ಕಾಂಗ್ರೆಸ್‌ 5-9, ಬಿಜೆಪಿ 0ಯಿಂದ 2 ಸ್ಥಾನ ಗೆಲ್ಲುವ ಸಾಧ್ಯತೆ ಇದೆ.

ರಾಜ್ಯಸ್ಥಾನ :
ರಾಜಸ್ಥಾನದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ನೇರ ಹಣಾಹಣಿ ಇದೆ. ಅಶೋಕ್‌ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದು, ಈ ಬಾರಿಯೂ ಗೆದ್ದು ಬೀಗುವ ಉತ್ಸಾಹದಲ್ಲಿದೆ. ಮತ್ತೊಂದೆಡೆ, 2018ರಲ್ಲಿ ಅಧಿಕಾರ ಕಳೆದುಕೊಂಡಿರುವ ಬಿಜೆಪಿಯು ಈ ಬಾರಿ ಗೆದ್ದು, ಮತ್ತೆ ಅಧಿಕಾರ ಪಡೆಯಲು ಯತ್ನಿಸುತ್ತಿದೆ. ಹಾಗಾಗಿಯೇ, ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್‌ ಹಾಗೂ ಬಿಜೆಪಿಯು ಜನರಿಗೆ ಉಚಿತ ಕೊಡುಗೆಗಳ ಮಹಾಪೂರವೇ ಹರಿಸಿವೆ. ಹಾಗಾಗಿ, ಈ ಬಾರಿ ಮತದಾರನ ಒಲವು ಯಾರ ಪರ ಇದೆ ಎಂಬುದು ಕುತೂಹಲ ಕೆರಳಿಸಿದೆ. ರಾಜಸ್ಥಾನದಲ್ಲಿ ಶೇ.75ರಷ್ಟು ಮತದಾನ ನಡೆದಿದೆ.

ಛತ್ತೀಸಗಡ:
ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಡಬಹುದು ಎಂದು ಎಕ್ಸಿಟ್​ ಪೋಲ್ ಸಮೀಕ್ಷೆಗಳು ಸುಳಿವು ನೀಡಿವೆ. ಎಕ್ಸಿಟ್ ಪೋಲ್ ಟ್ರೆಂಡ್‌ಗಳ ಪ್ರಕಾರ ಛತ್ತೀಸ್‌ಗಢದಲ್ಲಿ ಬಿಜೆಪಿ 35-45 ಮತ್ತು ಕಾಂಗ್ರೆಸ್ 40-50 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಆದರೆ ಇಲ್ಲಿ ಮೊದಲಿದ್ದ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Shocking news: ಉತ್ತರ ಕಾಶಿ ಸುರಂಗದಿಂದ ಕಾರ್ಮಿಕರು ಹೊರ ಬರುತ್ತಿದ್ದಂತೆ ನಡೆದೇ ಹೋಯ್ತು ಹೃದಯವಿದ್ರಾವಕ ಘಟನೆ – ಬಹಳ ಹೊತ್ತು ಉಳಿಯಲಿಲ್ಲ ಈ ಕುಟುಂಬದ ಸಂಭ್ರಮ !!