Dayal Padmanabhan: ಮಂಗಳೂರಿಗರ ತಲೆಯಲ್ಲಿ ಎಲ್ಲಾ ನಮ್ಮಿಂದಲೇ ಅನ್ನೋ EGO ಕೂತಿದೆ, ಎಲ್ಲರೊಂದಿಗೆ ಕೆಲಸ ಮಾಡಿ- ಶೆಟ್ರು ಗ್ಯಾಂಗ್ ವಿರುದ್ಧ ತಿರುಗಿಬಿದ್ದ ಖ್ಯಾತ ನಿರ್ದೇಶಕ !!

Entertainment news Sandalwood news Dayal padmanabhan about Mangalore Shetty gang in kannada film industry

Dayal Padmanabhan: ನಮಗೆಲ್ಲರಿಗೂ ಗೊತ್ತಿರುವ ಖ್ಯಾತ ದಯಾಳ್ ಪದ್ಮನಾಭನ್ (Dayal Padmanabhan) ಈಗ ಶೆಟ್ರು ಗ್ಯಾಂಗ್ ಬಗ್ಗೆ ಮಾತನಾಡಿದ್ದಾರೆ. ಹೌದು, ಆ ಕರಾಳ ರಾತ್ರಿ, ಸರ್ಕಸ್, ಮಸಾಲಾ ಸೇರಿದಂತೆ ಸೂಪರ್ ಹಿಟ್ ಕನ್ನಡ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ದಯಾಳ್ ಪದ್ಮನಾಭನ್ ಸದ್ಯಕ್ಕೆ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಮತ್ತು ರಾಜ್‌ ಬಿ ಶೆಟ್ಟಿ ನಿರ್ದೇಶನ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿದೆ ಹೀಗಾಗಿ ಮಾರ್ಕೆಟ್‌ ರೂಲ್‌ ಮಾಡುತ್ತಿರುವುದು ಅವರೇ ಎಂದು ಎಲ್ಲೆಡೆ ಹೇಳಲಾಗುತ್ತಿದೆ. ನಿರ್ದೇಶಕ ದಯಾಳ್ ಪದ್ಮನಾಭನ್ ಶೆಟ್ರು ಗ್ಯಾಂಗ್‌ಗೆ ಸಣ್ಣ ಸಲಹೆ ಕೊಟ್ಟಿದ್ದಾರೆ.

‘ಪದೇ ಪದೇ ನಿಮ್ಮ ಸರ್ಕಲ್‌ ಒಳಗೆ ಸಿನಿಮಾ ಮಾಡಿದರೆ ನಿಮ್ಮ ಕಂಫರ್ಟ್ ಜೋನ್‌ನಲ್ಲಿ ಇರುತ್ತೀರ. ಹೀಗಾಗಿ ನಿಮ್ಮ Egoಗಳನ್ನು ದೂರು ಮಾಡಿ ಎಲ್ಲರ ಜೊತೆ ಕೆಲಸ ಮಾಡುವುದಕ್ಕೆ ಶುರು ಮಾಡಿ. ಡೈರೆಕ್ಟರ್‌ಗಳು ತುಂಬಾ ಜನ ಇದ್ದಾರೆ. ಎಲ್ಲರ ಜೊತೆ ಕೆಲಸ ಮಾಡಿ ಎಂದು ಹೇಳುತ್ತಿರುವೆ.’ ಎಂದು ಕನ್ನಡ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

‘ಅವರ ತಲೆಗಳಲ್ಲಿ ಕುಳಿತು ಬಿಟ್ಟಿದೆ ನಾವು ಮಂಗಳೂರು ಜನರು ಒಟ್ಟಾಗಿ ಬಂದು ಎಲ್ಲ ಸಿನಿಮಾನೂ ಹಿಟ್ ಕೊಡುತ್ತಿದೆ ಎಂದು. ಆಮೇಲೆ ನಾವು ಇಂಡಸ್ಟ್ರಿಯನ್ನು ಸೇವ್ ಮಾಡುತ್ತಿದ್ದೀವಿ ಅನ್ನೋದು ತಲೆಯಲ್ಲಿದೆ. ಅವರು ಅಂದುಕೊಂಡಿರುವುದರಲ್ಲಿ ತಪ್ಪಿಲ್ಲ. ಆ ಫೀಲ್ ಮತ್ತು ಪ್ರಿವಿಲೇಜ್ ಅವರಿಗೆ ಇದ್ದರೆ ತಪ್ಪಿಲ್ಲ ಆದರೆ ಅದು ತಲೆಯಲ್ಲಿ ಇರಬಾರದು. ಈಗ ಮಾಧ್ಯಮಗಳಲ್ಲಿ ನೋಡಿರುತ್ತಾರೆ ಜನರು ಈಗ ಕನ್ನಡ ಇಂಡಸ್ಟ್ರಿನ ಸೇವ್ ಮಾಡುತ್ತಿರುವುದೇ ಶೆಟ್ಟಿ ಗ್ಯಾಂಗ್ ಅಂತ. ಅದನ್ನು ಓದಿದ್ದಾಗ ನನಗೆ ನಿಜ ಬೇಸರ ಆಗುತ್ತದೆ. ಒಬ್ರು ವಿಮರ್ಶೆ ಬರೆಯುವವರು ಸಿನಿಮಾ ಚೆನ್ನಾಗಿಲ್ಲ ಅಂದ್ರುನೂ ಶೆಟ್ರು ಗ್ಯಾಂಗ್ ಸಿನಿಮಾ ಸೂಪರ್ ಎನ್ನುತ್ತಾರೆ. ನಿಮ್ಮ ಜಾತಿಗಳನ್ನು ಹೊರ ಇಟ್ಟು ಇಂಡಸ್ಟ್ರಿಗೆ ಬನ್ನಿ. ಸಿನಿಮಾ ಚೆನ್ನಾಗಿಲ್ಲ ಅಂದ್ರೂ ಸಾಫ್ಟ್ ಆಗಿ ಹೇಳುತ್ತಾರೆ. ಆ ವ್ಯಕ್ತಿಗಳ ಮೇಲೆ ನನಗೆ ಕೋಪ ಇಲ್ಲ ಆದರೆ ನಮ್ಮ ಇಂಡಸ್ಟ್ರಿ ಪರವಾಗಿ ಇಂಡಸ್ಟ್ರಿಗೆ ಒಳ್ಳೆಯದಾಗಲಿ ಎಂದು ಧ್ವನಿ ಎತ್ತುತ್ತಿರುವೆ. ಅವರನ್ನು ಬೈದರೆ ನನಗೆ ಏನು ಆಗುತ್ತದೆ? 500 ಜನ ಲೈಕ್ ಮತ್ತು ಕಾಮೆಂಟ್ ಮಾಡಿ ಸುಮ್ಮನಾಗುತ್ತಾರೆ’ ಎಂದು ದಯಾಳ್ ಹೇಳಿದ್ದಾರೆ. ಒಟ್ಟಿನಲ್ಲಿ ಒಳ್ಳೆ ಒಳ್ಳೆ ಕನ್ನಡ ಸಿನಿಮಾ ನೋಡಿ ಬೆಳೆಸಿ’ ಎಂದು ಕನ್ನಡ ಚಿತ್ರರಂಗದ ಮಾರ್ಕೆಟ್‌ ಪರಿಸ್ಥಿತಿ ವಿವರಿಸಿದ್ದಾರೆ.

ಇದನ್ನೂ ಓದಿ: ಡ್ರೋನ್ ವಿಚಾರದಲ್ಲಿ ನನಗೆ ಏನೆಲ್ಲಾ ಹಿಂಸೆ ಕೊಟ್ರು ಗೊತ್ತಾ?! ಅಯ್ಯೋ ದೇವ್ರೇ…. ಎಂದು ಬಿಕ್ಕಿ ಬಿಕ್ಕಿ ಅತ್ತ ಡ್ರೋನ್ ಪ್ರತಾಪ್

1 Comment
Leave A Reply

Your email address will not be published.