Savings schemes: ಹಿರಿಯ ನಾಗರಿಕರಿಗೆ ಭರ್ಜರಿ ಗುಡ್ ನ್ಯೂಸ್- 60 ವರ್ಷ ಮೇಲ್ಪಟ್ಟವರಿಗೆ ಫ್ರೀ ಆಗಿ ಸಿಗುತ್ತೆ ಪೆನ್ಶನ್ !! ಕೇಂದ್ರದಿಂದ ಹೊಸ ಘೋಷಣೆ
Business news central government new scheme free pension for above 60 years senior citizens
Free pension scheme: ಭವಿಷ್ಯದಲ್ಲಿ ಯಾವುದೇ ಆರ್ಥಿಕ ಸಮಸ್ಯೆ ಇಲ್ಲದೆ ಜೀವನ ನಡೆಸಲು, ಭವಿಷ್ಯವನ್ನು ಆರ್ಥಿಕವಾಗಿ ಭದ್ರಪಡಿಸಿಕೊಳ್ಳಲು ಹಣವನ್ನು (financial stability) ಇತರ ವಿಷಯಗಳಿಗೆ ಖರ್ಚು ಮಾಡುವುದಕ್ಕಿಂತ ಅದನ್ನು ಉತ್ತಮ ಹೂಡಿಕೆ ಯೋಜನೆಯಲ್ಲಿ ಹೂಡಿಕೆ (investment) ಮಾಡುವುದು ಒಳ್ಳೆಯದು. ಇದಕ್ಕಾಗಿ ಉಳಿತಾಯ ಹೂಡಿಕೆ (savings schemes) ಯೋಜನೆಗಳು ಸಾಕಷ್ಟಿವೆ. ಅದರಲ್ಲೂ ಸರ್ಕಾರವೂ ಕೂಡ ಸಾಮಾನ್ಯ ಜನರಿಗೆ ಅನುಕೂಲವಾಗುವಂತಹ ಹೂಡಿಕೆ ಯೋಜನೆ ಬಿಡುಗಡೆ ಮಾಡಿದೆ(Free pension scheme).
ಬ್ಯಾಂಕುಗಳಲ್ಲಿ (Banks) ಇರಬಹುದು ಅಥವಾ ಪೋಸ್ಟ್ (post office) ಅಫೀಸ್ ನಲ್ಲಿ ಇರಬಹುದು ಉಳಿತಾಯ ಮಾಡಲು ನೀವು ಬಯಸಿದರೆ ನಿಮ್ಮ ಹೂಡಿಕೆ ಹಣಕ್ಕೆ ತಕ್ಕಂತೆ ಬೇರೆ ಬೇರೆ ರೀತಿಯ ಪಿಂಚಣಿ ಯೋಜನೆಗಳು (pension schemes) ಲಭ್ಯ ಇವೆ.
ಸಾಮಾನ್ಯವಾಗಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕೆಲವು ಪಿಂಚಣಿ ಯೋಜನೆಗಳನ್ನು ಸರ್ಕಾರವೇ ಜಾರಿಗೆ ತಂದಿದ್ದು ಈ ಮೂಲಕ ವಾರ್ಷಿಕವಾಗಿ ಅಥವಾ ಮಾಸಿಕವಾಗಿ ಪಿಂಚಣಿ ಪಡೆದುಕೊಳ್ಳಬಹುದು. ನೀವು ಎಷ್ಟು ಹೂಡಿಕೆ ಮಾಡುತ್ತಿರೋ ಆ ಮೊತ್ತದ ಆಧಾರದ ಮೇಲೆ ಬಡ್ಡಿ ನಿರ್ಧರಿಸಿ ಪಿಂಚಣಿ ಹಣವನ್ನು ನೀಡಲಾಗುತ್ತದೆ.
ಇನ್ನು ಮಾಸಿಕ ಪಿಂಚಣಿ ಹೂಡಿಕೆಯಲ್ಲಿ ಕೆಲವು ಬದಲಾವಣೆಗಳನ್ನು ತರಲಾಗಿದ್ದು ಹಿರಿಯ ನಾಗರಿಕರಿಗೆ ಇದು ಪ್ಲಸ್ ಆಗಿದೆ. ಯಾಕಂದ್ರೆ 2024ರ ಆರಂಭದಲ್ಲಿ ಪಿಂಚಣಿ ಹಣವನ್ನು ಹೆಚ್ಚಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.
ಮುಖ್ಯವಾಗಿ ಹರಿಯಾಣ ರಾಜ್ಯದಲ್ಲಿ ಹೊಸ ನಿಯಮ ಜಾರಿ (Pension hike in Haryana):
ಹರಿಯಾಣ ರಾಜ್ಯದಲ್ಲಿ ವಾಸಿಸುವ ಹಿರಿಯ ನಾಗರಿಕರಿಗೆ ಸಿಗುವ ಪಿಂಚಣಿ ದರವನ್ನ ಹೆಚ್ಚಿಸಲು ರಾಜ್ಯ ಮುಖ್ಯಮಂತ್ರಿ, ಮನೋಹರ್ ಲಾಲ್ ಕಟ್ಟರ್ (CM Manohar Lal Khattar) ನಿಯಮವನ್ನು ಜಾರಿಗೊಳಿಸಿದ್ದಾರೆ.
ಈ ಮೂಲಕ 60 ವರ್ಷ ಮೇಲ್ಪಟ್ಟ ವೃದ್ಧರು ಹಿಂದಿಗಿಂತಲೂ ಹೆಚ್ಚಿನ ಪಿಂಚಣಿ ಹಣವನ್ನು ಪ್ರತಿ ತಿಂಗಳು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇದಕ್ಕೆ ಮುಖ್ಯಮಂತ್ರಿ ಮನೋಹರ್ ಅವರು ತಮ್ಮ ಅಧಿಕೃತ “X” ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು ಈ ಮೂಲಕ ಸಾರ್ವಜನಿಕರಿಗೆ ಪಿಂಚಣಿ ಹಣದ ಹೆಚ್ಚಳದ ಗುಡ್ ನ್ಯೂಸ್ ನೀಡಿದ್ದಾರೆ.
ಹರಿಯಾಣ ರಾಜ್ಯದಲ್ಲಿ ಇನ್ನು ಮುಂದೆ ವೃದ್ಧಾಪ್ಯ ವೇತನ ಅಥವಾ ಪಿಂಚಣಿಯನ್ನು ಮೂರು ಸಾವಿರ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಈ ಹೊಸ ನಿಯಮ ಜನವರಿ 1, 2024 ರಿಂದಲೇ ಜಾರಿಗೆ ಬರಲಿದೆ. ಇಲ್ಲಿಯವರೆಗೆ ಹರಿಯಾಣ ರಾಜ್ಯದಲ್ಲಿ ಪಿಂಚಣಿ ಹಣವನ್ನು 2,750 ಗಳಿಗೆ ಸೀಮಿತ ಮಾಡಲಾಗಿತ್ತು. ಇದೀಗ ಪಿಂಚಣಿ ಹಣ ರೂ.250ಗಳನ್ನು ಹೆಚ್ಚಿಸಲಾಗಿದ್ದು ಪ್ರತಿ ತಿಂಗಳು ವೃದ್ಧರು ಇನ್ನು ಮುಂದೆ 3,000 ರೂ . ಪಿಂಚಣಿ ಪಡೆಯಲಿದ್ದಾರೆ. ಮಾಸಿಕ ಪಿಂಚಣಿ ಹಣ ಹೆಚ್ಚಳ ಮಾಡಿದ್ದು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ನಿಜಕ್ಕೂ ಸಂತಸ ತಂದಿದೆ. ಇದೇ ರೀತಿ ನಮ್ಮ ರಾಜ್ಯದಲ್ಲಿಯೂ ಕೂಡ ವೃದ್ಧಾಪ್ಯ ವೇತನವನ್ನು ಹೆಚ್ಚಿಸುವುದಾಗಿ ಮಾನ್ಯ ಮುಖ್ಯಮಂತ್ರಿಗಳು ಅಧಿಕಾರಿಗಳ ಜೊತೆಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಜನತೆಗೆ ಗುಡ್ ನ್ಯೂಸ್- ಶೀಘ್ರದಲ್ಲೇ 2ನೇ ವಿಮಾನ ನಿಲ್ದಾಣ ಸ್ಥಾಪನೆ !! ಎಲ್ಲಿ, ಯಾವಾಗ ?