China Pneumonia Case: ಚೀನಾದ ನಿಗೂಢ ಕಾಯಿಲೆ ಭಾರತಕ್ಕೂ ಲಗ್ಗೆ! ಉತ್ತರಾಖಂಡದ ಇಬ್ಬರು ಮಕ್ಕಳಲ್ಲಿ ರೋಗ ಲಕ್ಷಣ ಪತ್ತೆ!!

Uttarakhand China Pneumonia Case: ಚೀನಾದಲ್ಲಿ ಪತ್ತೆಯಾದ ರೋಗವು ಇದೀದ ಉತ್ತರಾಖಂಡದಲ್ಲಿ ಕಂಡು ಬಂದಿದೆ. ಉತ್ತರಾಖಂಡದ ಬಾಗೇಶ್ವರದಲ್ಲಿ ಇಬ್ಬರು ಮಕ್ಕಳಲ್ಲಿ ಈ ಇನ್ಫ್ಲುಯೆನ್ಸ ದ ರೋಗ ಲಕ್ಷಣಗಳು ಕಂಡು ಬಂದಿದೆ. ಈ ನಿಟ್ಟಿನಲ್ಲಿ ಮಕ್ಕಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಗ್ಯ ಇಲಾಖೆ ನಿರಂತರವಾಗಿ ಕೆಲಸ ಮಾಡುತ್ತಿದೆ.

 

ಕೊರೊನಾ ನಂತರ ಚೀನಾದಲ್ಲಿ ಈಗ ಮಕ್ಕಳಲ್ಲಿ ಉಸಿರಾಟದ ಸೋಂಕು ಹಬ್ಬಿದ ನಂತರ ಈ ರೋಗದ ಬಗ್ಗೆ ದೇಶದ ಬಹುತೇಕ ಎಲ್ಲಾ ರಾಜ್ಯಗಳು ಅಲರ್ಟ್‌ ಆಗಿದೆ. ಉತ್ತರಾಖಂಡದ ಆರೋಗ್ಯ ಇಲಾಖೆಯು ಚೀನಾದಲ್ಲಿ ಮೈಕ್ರೋ ಪ್ಲಾಸ್ಮಾ ನ್ಯುಮೋನಿಯಾ ಮತ್ತು ಇನ್ಫ್ಲುಯೆನ್ಸ ಹರಿವಿನ ಹರಡುವಿಕೆಯ ಬಗ್ಗೆ ಜಾಗರೂಕತೆ ವಹಿಸಲು ಪ್ರಾರಂಭಿಸಿದೆ. ಈ ಬಗ್ಗೆ ಎಚ್ಚರಿಕೆಯನ್ನೂ ನೀಡಲಾಗಿದೆ.

ಭಾರೀ ಎಚ್ಚರಿಕೆಯ ನಂತರ, ಬಾಗೇಶ್ವರ ಜಿಲ್ಲೆಯ ಇಬ್ಬರು ಮಕ್ಕಳಲ್ಲಿ ಇನ್ಫ್ಲುಯೆನ್ಸದಂತಹ ಲಕ್ಷಣಗಳು ಕಂಡುಬಂದಿವೆ. ಇಬ್ಬರ ಮಾದರಿಗಳನ್ನು ಪರೀಕ್ಷೆಗಾಗಿ ಸುಶೀಲಾ ತಿವಾರಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಪರೀಕ್ಷಾ ವರದಿಗಾಗಿ ಕಾಯಲಾಗುತ್ತಿದೆ. ತನಿಖಾ ವರದಿ 4ರಿಂದ 5 ದಿನಗಳಲ್ಲಿ ಬರಲಿದೆ. ತನಿಖಾ ವರದಿ ಬಂದ ನಂತರವಷ್ಟೇ ಈ ವೈರಸ್ ಹೌದು ಅಲ್ಲವೋ ಎಂದು ತಿಳಿದು ಬರಲಿದೆ.ಸದ್ಯ ಆರೋಗ್ಯ ಇಲಾಖೆ ಈ ಬಗ್ಗೆ ಸಂಪೂರ್ಣ ಎಚ್ಚೆತ್ತುಕೊಂಡಂತಿದೆ.

ಈ ರೋಗದ ಐದನೇ ಹಂತದಲ್ಲಿ ಆಮ್ಲಜನಕದ ಅಗತ್ಯವಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಎಲ್ಲಾ ಆಸ್ಪತ್ರೆಗಳಲ್ಲಿ ಪೂರ್ಣ ಪ್ರಮಾಣದ ಆಮ್ಲಜನಕವನ್ನು ಇರಿಸಿಕೊಳ್ಳಲು ತಿಳಿಸಲಾಗಿದೆ. ಇದಲ್ಲದೆ, ವೆಂಟಿಲೇಟರ್‌ಗಳು ಮತ್ತು ಇತರ ವಸ್ತುಗಳನ್ನು ಸಿದ್ಧವಾಗಿಡಲು ಸಹ ಆದೇಶವನ್ನು ನೀಡಲಾಗಿದೆ. ಆಸ್ಪತ್ರೆಗಳಲ್ಲೂ ಐಸೋಲೇಷನ್ ವಾರ್ಡ್‌ಗಳನ್ನು ರಚಿಸಲಾಗಿದೆ ಎಂದು ವರದಿಯಾಗಿದೆ.

ಉತ್ತರಾಖಂಡದ ಎಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಮತ್ತು ಸಿಎಂಒಗಳನ್ನು ಉತ್ತರಾಖಂಡ ಆರೋಗ್ಯ ಇಲಾಖೆಯನ್ನು ಅಲರ್ಟ್‌ ಆಗಿ ಇರಿಸಿದೆ. ಈ ಕುರಿತು ಆದೇಶ ಹೊರಡಿಸಿದ ಆರೋಗ್ಯ ಕಾರ್ಯದರ್ಶಿ ಹಾಗೂ ರಾಜೇಶ್ ಕುಮಾರ್ ಅವರು, ರೋಗದ ಬಗ್ಗೆ ಎಲ್ಲರೂ ಸಂಪೂರ್ಣ ಜಾಗೃತರಾಗಿರಿ, ಆಸ್ಪತ್ರೆಗಳಲ್ಲಿ ಸಂಪೂರ್ಣ ವ್ಯವಸ್ಥೆ ಕಲ್ಪಿಸಬೇಕು ಮತ್ತು ಯಾವುದರ ಬಗ್ಗೆಯೂ ನಿಷ್ಕಾಳಜಿತನ ತೋರಬಾರದು ಎಂದು ಸೂಚನೆ ನೀಡಿದ್ದಾರೆ.

ಇದನ್ನು ಓದಿ: December Bank Holiday 2023: ಅಬ್ಬಬ್ಬಾ.. ಡಿಸೆಂಬರ್ ನಲ್ಲಿ ಬರೋಬ್ಬರಿ 18 ದಿನ ಬ್ಯಾಂಕ್ ರಜೆ !! ಇಲ್ಲಿದೆ ರಜೆ ಪಟ್ಟಿ

Leave A Reply

Your email address will not be published.