Plight of Nut Growers : ಅಡಿಕೆ ಬೆಳೆಗಾರರಿಗೆ ಬಿಗ್ ಶಾಕ್- ಗಾಯದ ಮೇಲೆ ಬರೆ ಎಳೆದೇ ಬಿಟ್ಟ ಸರ್ಕಾರ !!

Karnataka news plight of nut growners separate meter for nut peeling machine

Plight of Nut Growers: ರಾಜ್ಯದಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗದ ಅಡಿಕೆ ಬೆಳೆಗಾರರಂತೂ ಭಾರೀ ಸಂಕಷ್ಟದಲ್ಲಿ(Plight of Nut Growers) ಸಿಲುಕಿದ್ದಾರೆ. ಒಂದೆಡೆ ಬೆಲೆ ಏರು-ಪೇರಿನಿಂದ ಕಂಗೆಟ್ಟರೆ ಒಂದೆಡೆ ಮಳೆ ಕೊರತೆ. ಇದರೊಂದಿಗೆ ಹಳದಿ ಎಲೆರೋಗ, ಚುಕ್ಕಿರೋಗ. ಮಗದೊಡೆ ಕೊಳೆರೋಗ, ಕಾರ್ಮಿಕರ ಸಮಸ್ಯೆಯಿಂದ ರೋಸಿ ಹೋಗಿದ್ದಾರೆ. ಆದರೂ ಏನೋ ಹೊಂದಿಕೊಂಡು, ನಿಭಾಯಿಸಿಕೊಂಡು ನಿರ್ವಹಿಸುತ್ತಿದ್ದರೆ ಸರ್ಕಾರದ ಈ ಹೊಸ ಆದೇಶ ಅಡಿಕೆ ಬೆಳೆಗಾರರ ಗಾಯದ ಮೇಲೆ ಬರೆ ಎಳೆದಂತಾಗಿದೆ.

 

ಹೌದು, ಮೇಲೆ ಹೇಳಿರವ ಸಮಸ್ಯೆಗಳೆಲ್ಲವನ್ನು ಬೆಳೆಗಾರರು ನಿಭಾಯಿಸಿಕೊಂಡು ಕೃಷಿ ಕೆಲಸ ನಿರ್ವಹಿಸುತ್ತಿದ್ದರು. ಅಡಿಕೆ ಸುಲಿಯುವವರ ಕೊರತೆಯಿಂದಾಗಿ ಬೆಳೆಗಾರರು ಮನೆ ವಿದ್ಯುತ್ಗೆ ಎರಡು ಬೆಲ್ಟ್ ಯಂತ್ರದ ಅಳವಡಿಕೆ ಮೂಲಕ ಅಡಿಕೆ ಸುಲಿಯುತ್ತಿದ್ದರು. ಆದರೀಗ ಸರ್ಕಾರ ಅಡಿಕೆ ಸುಲಿಯುವ ಯಂತ್ರಕ್ಕೂ ಪ್ರತ್ಯೇಕ ಮೀಟರ್ ಅಳವಡಿಕೆಗೆ ಮುಂದಾಗಿರೋದು ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರಿಂದಾಗಿ ರಾಜ್ಯದ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಸೇರಿದಂತೆ ಪಶ್ಚಿಮ ಘಟ್ಟ ಹಾಗೂ ಕರಾವಳಿ ಭಾಗದ ಅಡಿಕೆ ಬೆಳೆಗಾರರು ಸರ್ಕಾರದ ವಿರುದ್ಧ ರೆಬೆಲ್ ಆಗಿದ್ದಾರೆ.

ಅಂದಹಾಗೆ ಪ್ರತ್ಯೇಕ ಮೀಟರ್ ಕೂರಿಸಿದ್ರೆ ವರ್ಷದಲ್ಲಿ ಎರಡು ಮೂರು ತಿಂಗಳು ಮಾತ್ರ ಬಳಸೋ ಯಂತ್ರಕ್ಕೆ ವರ್ಷಪೂರ್ತಿ ಕಮರ್ಷಿಯಲ್ ಮಿನಿಮಮ್ ಚಾರ್ಜ್ ಕಟ್ಟಲೇಬೇಕು. ಇದು ಅಡಿಕೆ ಬೆಳೆಗಾರರಿಗೆ ದೊಡ್ಡ ಹೊಡೆತವಾಗಿದೆ. ಹೀಗಾಗಿ ಮಲೆನಾಡಿನ ಭಾಗದವರೇ ಆದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡ ಸರ್ಕಾರಕ್ಕೆ ಪತ್ರ ಬರೆದು ವರ್ಷದಲ್ಲಿ 2-3 ತಿಂಗಳ ಮಾತ್ರ ಯಂತ್ರ ಬೇಕಾಗೋದು. ಅಡಿಕೆ ಬೆಳೆಗಾರರ ಹಿತದೃಷ್ಠಿಯಿಂದ ಆದೇಶವನ್ನ ಮರುಪರಿಶೀಲನೆ ಮಾಡಿ ಹಿಂಪಡೆಯಬೇಕೆಂದು ಮನವಿ ಮಾಡಿದ್ದಾರೆ

ಇದನ್ನೂ ಓದಿ: love possessiveness : ದಾರಿಯಲ್ಲಿ ಬೇರೆ ಹುಡುಗಿಯರನ್ನು ನೋಡಿದ ಪ್ರಿಯತಮ – ಸೂಜಿ ಹಿಡಿದು ಪ್ರಿಯತಮೆ ಏನು ಮಾಡಿದ್ಲು ಗೊತ್ತಾ?! ಯಪ್ಪಾ.. ವಿಚಾರ ತಿಳುದ್ರೆ ಬೆಚ್ಚಿಬೀಳ್ತೀರಾ !!

Leave A Reply

Your email address will not be published.