PMGKAY: ದೇಶಾದ್ಯಂತ ಸ್ತ್ರೀ ಶಕ್ತಿ ಸಂಘಗಳಿಗೆ ಭರ್ಜರಿ ಉಡುಗೊರೆ ಘೋಷಿಸಿದ ಮೋದಿ
India news central cabinet approves expansion of PMGKAY and providing drones to women self help groups
PMGKAY: ದೇಶದ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ನಡುವೆ, ಪ್ರಧಾನಿ ನರೇಂದ್ರ ಮೋದಿಯವರು(Pm Narendra Modi)ಜನತೆಗೆ ಬೊಂಬಾಟ್ ಸಿಹಿ ಸುದ್ದಿ (Good News)ನೀಡಿದ್ದಾರೆ. ಬಡವರಿಗೆ ಆಹಾರದ ಖಾದತಿ ಮತ್ತು ಮಹಿಳೆಯರಿಗೆ ಆದಾಯದ ಹೊಸ ಮೂಲ ಸೃಷ್ಟಿಸುವ ಎರಡು ಬಂಪರ್ ಕೊಡುಗೆಗಳನ್ನು ಘೋಷಣೆ ಮಾಡಿದ್ದಾರೆ.
ದೇಶದೆಲ್ಲೆಡೆ 80 ಕೋಟಿಗೂ ಹೆಚ್ಚು ಬಡ ಜನರಿಗೆ ಪಡಿತರ ವಿತರಣೆ ಮಾಡುವ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ (PM Garib Kalyan Anna Yojana) ಅನುಸಾರ ತಿಂಗಳಿಗೆ 5 ಕೆಜಿ ಉಚಿತ ಪಡಿತರ ಆಹಾರ ಧಾನ್ಯಗಳನ್ನು ಒದಗಿಸುವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು(PMGKAY) ಇನ್ನೂ 5 ವರ್ಷಗಳವರೆಗೆ ವಿಸ್ತರಣೆ ಮಾಡಲಾಗಿದೆ. ಇದಲ್ಲದೆ, 15, 000 ಸ್ತ್ರೀಶಕ್ತಿ ಸಂಘಗಳಿಗೆ ಕೃಷಿ ಡ್ರೋನ್ ಒದಗಿಸುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ಈ ಮೂಲಕ ಜನತೆಗೆ ನೆರವಾಗಿದೆ. ಈ ಕುರಿತು ಕೇಂದ್ರ ಮಾಹಿತಿ ಮತ್ತು ಪ್ರಸರಣ ಖಾತೆ ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದಾರೆ. ಗರೀಬ್ ಕಲ್ಯಾಣ್ ಅನ್ನ ಯೋಜನೆ 2028ರವರೆಗೂ ಲಭ್ಯವಿರಲಿದೆ.
ಇದನ್ನೂ ಓದಿ: Revenue department: ರಾಜ್ಯಾದ್ಯಂತ ಜಮೀನು ದಾಖಲೆಗಳಲ್ಲಿ ಮಹತ್ತರ ಬದಲಾವಣೆ- ಸರ್ಕಾರದಿಂದ ಹೊಸ ನಿರ್ಧಾರ