Home Jobs AIIMS Recruitment 2023: ಏಮ್ಸ್ ನಲ್ಲಿ ಭರ್ಜರಿ ಉದ್ಯೋಗಾವಕಾಶ- ಬೋಧಕೇತರ ಗ್ರೂಪ್ ಬಿ, ಗ್ರೂಪ್‌ ಸಿ...

AIIMS Recruitment 2023: ಏಮ್ಸ್ ನಲ್ಲಿ ಭರ್ಜರಿ ಉದ್ಯೋಗಾವಕಾಶ- ಬೋಧಕೇತರ ಗ್ರೂಪ್ ಬಿ, ಗ್ರೂಪ್‌ ಸಿ ಹುದ್ದೆಗಳಿಗೆ ತಕ್ಷಣ ಹೀಗೆ ಅರ್ಜಿ ಹಾಕಿ

AIIMS Recruitment 2023

Hindu neighbor gifts plot of land

Hindu neighbour gifts land to Muslim journalist

AIIMS Recruitment 2023: ನಿರುದ್ಯೋಗಿಗಳಿಗೆ ಸುವರ್ಣ ಅವಕಾಶ ಒಂದು ಇಲ್ಲಿದೆ. ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ (ಎಐಐಎಂಎಸ್), ನಲ್ಲಿ
3036 ಬೋಧಕೇತರ ಗ್ರೂಪ್ ಬಿ, ಗ್ರೂಪ್‌ ಸಿ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 1ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಹೌದು, ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ (AIIMS Recruitment 2023), ನವದೆಹಲಿಯು ಗುತ್ತಿಗೆ ಆಧಾರದ ಮೇಲೆ ಬೋಧಕೇತರ ಗ್ರೂಪ್ ಬಿ ಮತ್ತು ಸಿ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕ ಮಾಡಲಿದೆ.

ಸಹಾಯಕ ಆಡಳಿತಾಧಿಕಾರಿ, ಸಹಾಯಕ ಆಹಾರ ತಜ್ಞರು, ಸಹಾಯಕ ಇಂಜಿನಿಯರ್ (ಸಿವಿಲ್/(ಎಲೆಕ್ಟ್ರಿಕಲ್), ಸಹಾಯಕ ಲಾಂಡ್ರಿ ಮೇಲ್ವಿಚಾರಕರು, ಸಹಾಯಕ ಮಳಿಗೆ ಅಧಿಕಾರಿ, ಶ್ರವಣಶಾಸ್ತ್ರಜ್ಞ ಮತ್ತು ಸ್ಪೀಚ್ ಥೆರಪಿಸ್ಟ್/ಕಿರಿಯ ಶ್ರವಣಶಾಸ್ತ್ರಜ್ಞ/ ತಾಂತ್ರಿಕ ಸಹಾಯಕ, ಆಡಿಯಾಲಜಿಸ್ಟ್, ಬಯೋ ಮೆಡಿಕಲ್ ಇಂಜಿನಿಯರ್, ಕ್ಯಾಷಿಯರ್, ಕೋಡಿಂಗ್ ಕ್ಲರ್ಕ್/ಮೆಡಿಕಲ್ ರೆಕಾರ್ಡ್ ತಂತ್ರಜ್ಞರು/ಜೂನಿಯರ್ ಮೆಡಿಕಲ್ ರೆಕಾರ್ಡ್ ಅಧಿಕಾರಿ)/ವೈದ್ಯಕೀಯ ದಾಖಲೆ ತಂತ್ರಜ್ಞರು (ರೆಕಾರ್ಡ್ ಕ್ಲರ್ಕ್) , ಡಾರ್ಕ್ ರೂಮ್ ಅಸಿಸ್ಟೆಂಟ್ ಗ್ರೇಡ್ 2, ಡಯಟಿಶಿಯನ್, ಡ್ರೈವರ್, ಭ್ರೂಣಶಾಸ್ತ್ರಜ್ಞ, ಆರೋಗ್ಯ ಶಿಕ್ಷಣತಜ್ಞ (ಸಾಮಾಜಿಕ ಮನಶ್ಶಾಸ್ತ್ರಜ್ಞ) , ಹಿಂದಿ ಅಧಿಕಾರಿ, ಜೂನಿಯರ್ ಅಡ್ಮಿನಿಸ್ಟ್ರೇಟಿವ್ ಆಫೀಸರ್/ಆಫೀಸ್ ಅಸಿಸ್ಟೆಂಟ್ (ಎನ್.ಎಸ್.)/ಕಾರ್ಯನಿರ್ವಾಹಕ ಸಹಾಯಕ , ಜೂನಿಯರ್ ಫಿಸಿಯೋಥೆರಪಿಸ್ಟ್, ಲ್ಯಾಬ್ ಟೆಕ್ನಿಷಿಯನ್, ಮ್ಯಾನೇಜರ್/ಸೂಪರ್ವೈಸರ್/ಗ್ಯಾಸ್ ಆಫೀಸರ್, ಮೆಡಿಕಲ್ ರೆಕಾರ್ಡ್ ಆಫೀಸರ್, ಮಲ್ಟಿ ಟಾಸ್ಕಿಂಗ್ ಸ್ಟಾಫ್, ಫಿಸಿಯೋಥೆರಪಿಸ್ಟ್, ಸೀನಿಯರ್ ನರ್ಸಿಂಗ್ ಆಫೀಸರ್/ಸ್ಟಾಫ್ ನರ್ಸ್ ಗ್ರೇಡ್-1, ಸ್ಟೆನೋಗ್ರಾಫರ್, ಯೋಗ ಬೋಧಕ ಮುಂತಾದ ಒಟ್ಟು 3036 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಒಟ್ಟು ಹುದ್ದೆ: 3036 ಹುದ್ದೆಗಳು

ಪ್ರಮುಖ ದಿನಾಂಕಗಳು:
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01-12-2023
ಪ್ರವೇಶ ಪತ್ರ ನೀಡುವ ದಿನಾಂಕ: 12-12-2023
ಪರೀಕ್ಷೆಯ ದಿನಾಂಕ:
18-12-2023 ರಿಂದ 20-12-2023 ವರೆಗೆ

ಅರ್ಜಿ ಶುಲ್ಕ:
ಸಾಮಾನ್ಯ/ಒಬಿಸಿಗೆ ಅಭ್ಯರ್ಥಿಗಳಿಗೆ : ರೂ. 3,000
ಎಸ್‌ ಸಿ/ ಎಸ್‌ ಟಿ/ ಇಡಬ್ಲ್ಯೂಸಿ ಅಭ್ಯರ್ಥಿಗಳಿಗೆ : ರೂ. 2,400

ವಯಸ್ಸಿನ ಮಿತಿ: ಗರಿಷ್ಠ 35 ವರ್ಷ

ಶೈಕ್ಷಣಿಕ ವಿದ್ಯಾರ್ಹತೆಗಳು: ( ಸಾಮಾನ್ಯ ಅರ್ಹತೆಗಳು)

1. ಅಭ್ಯರ್ಥಿಗಳು ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಯಿಂದ ಎಸ್‌ ಎಸ್‌ ಎಲ್‌ ಸಿ ಮತ್ತು ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿಯನ್ನು ತೇರ್ಗಡೆ ಹೊಂದಿರಬೇಕು.

2. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮ್ಯಾನೇಜಮೆಂಟ್‌ ವಿಭಾಗದಲ್ಲಿ ಎಂ ಬಿ ಎ/ ಡಿಪ್ಲೊಮಾ ಅಥವಾ ಅದಕ್ಕೆ ತತ್ಸಮಾನ ಪದವಿಯನ್ನು ಪಡೆದಿರಬೇಕು.

3. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ / ಎಲೆಕ್ಟ್ರಿಕಲ್/ಸಿವಿಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರಬೇಕು.

4. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮನೋವಿಜ್ಞಾನದಲ್ಲಿ ಎಂ ಎ/ಎಂ ಎಸ್ಸಿ / ಎಂ ಫಿಲ್‌ ಪದವಿ ಪಡೆದಿರಬೇಕು.

5. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ. ಜೀವ ವಿಜ್ಞಾನ/ ಪ್ರಾಣಿಶಾಸ್ತ್ರ/ ಸೂಕ್ಷ್ಮ ಜೀವಶಾಸ್ತ್ರ/ ಜೆನೆಟಿಕ್ಸ್/ ಶರೀರಶಾಸ್ತ್ರ/ ಬಯೋಟೆಕ್ನಾಲಜಿ/ ಬಯೋಕೆಮಿಸ್ಟ್ರಿ/ ಅನ್ಯಾಟಮಿ/ ಎಂಡೋಕ್ರೈನಾಲಜಿ ಪದವಿ ಅಥವಾ ಎಂ ಡಿ/ಪಿ ಹೆಚ್‌ ಡಿ/ ಎಂ ವಿ ಎಸ್ಸಿ ಪದವಿ ಪಡೆದಿರಬೇಕು.

6. ಕಡ್ಡಾಯವಾಗಿ ಕಂಪ್ಯೂಟರ್‌ ಜ್ಞಾನ ಹೊಂದಿರಬೇಕು.

ಪರೀಕ್ಷೆಯ ಮಾದರಿ:
ಈ ಮೇಲ್ಕಂಡ ಹುದ್ದೆಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದು 2 ಪತ್ರಿಕೆಯನ್ನು ಹೊಂದಿರುತ್ತದೆ. 1. ಸಾಮಾನ್ಯ ಪತ್ರಿಕೆ 2. ಕಡ್ಡಾಯ ಪತ್ರಿಕೆ .

1. ಸಾಮಾನ್ಯ ಪತ್ರಿಕೆ : ಈ ಪರೀಕ್ಷೆಯು ಜನರಲ್ ಇಂಟೆಲಿಜೆನ್ಸ್ ಮತ್ತು ರೀಸನಿಂಗ್, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ , ಕಂಪ್ಯೂಟರ್‌ ಜ್ಞಾನ , ಇಂಗ್ಲಿಷ್/ಹಿಂದಿ ಭಾಷೆ ಮತ್ತು ಗ್ರಹಿಕೆ ಮತ್ತು ಸಾಮಾನ್ಯ ಜ್ಞಾನದ ವಿಷಯಕ್ಕೆ ಸಂಬಂಧಿಸಿದಂತೆ ಒಟ್ಟು 40 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪ್ರತಿಯೊಂದು ಪ್ರಶ್ನೆಗೆ ಒಂದು ಅಂಕ ನಿಗದಿ ಪಡಿಸಲಾಗಿದ್ದು, 45 ನಿಮಿಷಗಳ ಅವಧಿಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

2. ಕಡ್ಡಾಯ ಪತ್ರಿಕೆ : ಅಭ್ಯರ್ಥಿಯು ತಾನು ಅರ್ಜಿ ಸಲ್ಲಿಸಿದ ಹುದ್ದೆಯ ಶೈಕ್ಷಣಿಕ ವಿದ್ಯಾರ್ಹತೆಗೆ ಅನುಗುಣವಾಗಿ ಕಡ್ಡಾಯ ಪತ್ರಿಕೆಯನ್ನು ನಡೆಸಲಾಗುತ್ತದೆ.

ಅರ್ಹತೆ ಮಾನದಂಡಗಳು:
1. ಸಾಮಾನ್ಯ/ ಇಡ್ಬ್ಲೂಎಸ್‌ ಅಭ್ಯರ್ಥಿಗಳು ಶೇಕಡಾ 40 ಅಂಕ ಪಡೆಯಬೇಕು.
2. ಓಬಿಸಿ ಅಭ್ಯರ್ಥಿಗಳು ಶೇಕಡಾ 35 ಅಂಕ ಪಡೆಯಬೇಕು.
3. ಎಸ್‌ ಸಿ/ ಎಸ್‌ ಟಿ ಅಭ್ಯರ್ಥಿಗಳು ಶೇಕಡಾ 30 ಅಂಕ ಪಡೆಯಬೇಕು.
4. ಎಲ್ಲಾ ವರ್ಗದ ಅಂಗವಿಕಲ ಅಭ್ಯರ್ಥಿಗಳು ಶೇಕಡಾ 30 ಅಂಕ ಪಡೆಯಬೇಕು.

ಇನ್ನು ತಪ್ಪು ಉತ್ತರಕ್ಕೆ ಯಾವುದೇ ಋಣಾತ್ಮಕ ಅಂಕ ಕಡಿತಗೊಳಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ವೆಬ್‌ಸೈಟ್‌ ವೀಕ್ಷಿಸಬಹುದು.

ಇದನ್ನೂ ಓದಿ,: ಸರ್ಕಾರಿ ನೌಕರರಿಗೆ ಹೊಡೀತು ಲಾಟ್ರಿ- ಹೊಸ ವರ್ಷಕ್ಕೆ ‘ಡಿಎ’ ಯಲ್ಲಿ ಭರ್ಜರಿ ಏರಿಕೆ