Uttara kashi: ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ಯಶಸ್ವಿ ರಕ್ಷಣೆ – ಸಾವನ್ನು ಗೆದ್ದೇ ಬಿಟ್ಟ ಕಾರ್ಮಿಕ ‘ಸೈನಿಕರು’ !!

Share the Article

Uttara kashi: ಉತ್ತರಾಖಂಡ ರಾಜ್ಯದ ಉತ್ತರಕಾಶಿ(Uttara kashi) ಜಿಲ್ಲೆಯ ಸಿಲ್ಕ್ಯಾರಾದ ಸುರಂಗದಲ್ಲಿ ಕಳೆದ 17 ದಿನಗಳಿಂದ ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು ಇಂದು ಸಂಜೆ 8 ಗಂಟೆ ಸುಮಾರಿಗೆ ಯಶಸ್ವಿಯಾಗಿ ರಕ್ಷಿಸಲಾಗಿದೆ. ಕೊನೆಗೂ ಸರ್ಕಾರ ತನ್ನ ಕಾರ್ಯದಲ್ಲಿ ಯಶಸ್ವಾಯಾಗಿದೆ.

ಹೌದು, ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗ ಕುಸಿತ ಘಟನೆಯಲ್ಲಿ ಸುರಂಗದೊಳಗೆ ಸಿಲುಕಿದ್ದ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ಕರೆತರುವ ಬೃಹತ್ ಸಾಹಸಮಯ ಕಾರ್ಯಾಚರಣೆ ಫಲ ಕೊಟ್ಟಿದ್ದು, ಅಧಿಕಾರಿಗಳು ಹಾಗೂ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸಿಬ್ಬಂದಿ ನಿಟ್ಟುಸಿರುಬಿಟ್ಟಿದ್ದಾರೆ. ಸಂಜೆ 7.50ಕ್ಕೆ ಮೊದಲ ಕಾರ್ಮಿಕ ಹೊರಗೆ ಬಂದಿದ್ದು, ಇತ್ತ ಕಾರ್ಮಿಕರ ಕುಟುಂಬಗಳಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಸ್ಟ್ರೆಚರ್ ಮೂಲಕ ಒಬ್ಬೊಬ್ಬರನ್ನೇ ಕರೆತರಲಾಗುತ್ತಿದೆ.

ಇದನ್ನು ಓದಿ: Escape Drama: ಮಕ್ಕಳನ್ನು ಬಸ್‌ಸ್ಟ್ಯಾಂಡಿನಲ್ಲಿ ಬಿಟ್ಟು ಸಮುದ್ರಕ್ಕೆ ಹಾರಿದ ಮಹಿಳೆ ಪತ್ತೆ! ಆತ್ಮಹತ್ಯೆ ನಾಟಕವಾಡಲು ಕಾರಣವೇನು?

ಅಂದಹಾಗೆ ಕಾರ್ಯಾಚರಣೆ 398 ಗಂಟೆಗಳ ಕಾಲ ನಡೆದಿದೆ. ಮೊದಲ ಹಂತದಲ್ಲಿ ಒಟ್ಟು 12 ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಮುಂದಿನ ಅರ್ಧಗಂಟೆಯಲ್ಲಿ ಸುರಂಗದಲ್ಲಿ ಸಿಲುಕಿರುವ ಉಳಿದ ಕಾರ್ಮಿಕರು 67 ಮೀಟರ್‌ ಕೊರೆದಿರುವ ಪೈಪ್‌ನ ಮೂಲಕ ಹೊರ ಬರಲಿದ್ದಾರೆ. ಅದರೊಂದಿಗೆ ಕಾರ್ಮಿಕರನ್ನು ಉಳಿಸುವ ನಿಟ್ಟಿನಲ್ಲಿ ನಡೆದ ರಣರೋಚಕ ಆಪರೇಷನ್‌ ಯಶಸ್ವಿಯಾಗಿ ಮುಕ್ತಾಯ ಕಂಡಿದೆ. ಕಾರ್ಮಿಕರ ರಕ್ಷಣೆಗೆ ಸಿಎಂ ಧಾಮಿ ಸಂತಸ ವ್ಯಕ್ತಪಡಿಸಿದ್ದಾರೆ.

Leave A Reply