Gruha Lakshmi Scheme: ಗೃಹಲಕ್ಷ್ಮೀಯ ಬರೋಬ್ಬರಿ 59 ಕಂತಿನ ಹಣವನ್ನೂ ಒಬ್ಬರಿಗೇ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್- ಯಾರಿಗೆ, ಯಾಕಾಗಿ ಗೊತ್ತಾ ?!

Karnataka news Congress guarantee Lakshmi hebbalkar transfers 59 months gruha lakshmi scheme money to one person

Gruha Lakshmi Scheme: ಗೃಹ ಲಕ್ಷ್ಮಿ ಯೋಜನೆ’ಗೆ (Gruha lakshmi scheme) ಈಗಾಗಲೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಾಹುಲ್ ಗಾಂಧಿಯವರ (Rahul Gandhi) ನೇತೃತ್ವದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಆದರೆ ಪ್ರತಿ ತಿಂಗಳು ಯಜಮಾನಿಯರಿಗೆ ಪಾವತಿಸುವ ಮೊದಲು ನಾಡದೇವಿ ಚಾಮುಂಡೇಶ್ವರಿಯ ಸನ್ನಿಧಿಗೂ ಗೃಹಲಕ್ಷ್ಮೀ ಯೋಜನೆ ಹಣ ಸಲ್ಲಿಸಬೇಕು. ಆ ಮೂಲಕ ಮೊದಲ ಹಣ ನಾಡದೇವತೆಗೆ ಸಲ್ಲಿಕೆಯಾಗಿ ಬಳಿಕ ಉಳಿದವರಿಗೆ ಯೋಜನೆಯ ಹಣ ನೀಡುವಂತೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​ ಅವರಿಗೆ ಎಂಎಲ್​ಸಿ ದಿನೇಶ್ ಗೂಳಿಗೌಡ ಪತ್ರ ಬರೆದಿದ್ದರು.

ಬಳಿಕ ಈ ಬಗ್ಗೆ ಕ್ರಮ ವಹಿಸುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಡಿಸಿಎಂ ಡಿಕೆ ಶಿವಕುಮಾರ್ ಸೂಚಿಸಿದ್ದರು. ಅದರ ಫಲವಾಗಿ ಚಾಮುಂಡೇಶ್ವರಿ ತಾಯಿಗೆ ಹಣ ಸಂದಾಯ ಮಾಡಲಾಗುತ್ತಿದೆ. ಸದ್ಯ ಇದೀಗ ಪ್ರತಿ ತಿಂಗಳು ನಾಡದೇವತೆ ತಾಯಿ ಚಾಮುಂಡೇಶ್ವರಿಗೂ 2 ಸಾವಿರ ಅರ್ಪಣೆ ಮಾಡಲಾಗುತ್ತಿದ್ದು 59 ತಿಂಗಳ ಒಟ್ಟು ಮೊತ್ತವನ್ನು ದೇವಸ್ಥಾನಕ್ಕೆ ಸಂದಾಯ ಮಾಡಲಾಗಿದೆ.

ಹೌದು, ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವ ರಾಜ್ಯದ ಮಹತ್ವದ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ನಾಡದೇವತೆ ಚಾಮುಂಡೇಶ್ವರಿಗೆ 59 ತಿಂಗಳ ಒಟ್ಟು ಹಣ 1,18,000 ರೂಗಳನ್ನು ಸಂದಾಯ ಮಾಡಲಾಗಿದೆ. ಸದ್ಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ವೈಯಕ್ತಿಕ ಹಣವನ್ನು ತಾಯಿ ಚಾಮುಂಡೇಶ್ವರಿಗೆ ಅರ್ಪಿಸಿದ್ದಾರೆ. ಪ್ರತಿ ತಿಂಗಳು 2 ಸಾವಿರ ರೂಪಾಯಿಯಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರಿನಲ್ಲಿ ದೇವರಿಗೆ ಹಣ ಸಂದಾಯವಾಗಲಿದೆ.

ಇದನ್ನೂ ಓದಿ: Tamilunadu: ಒಂದು ದಿನವೂ ಮಿಸ್ ಮಾಡಲ್ವಂತೆ, ಪ್ರತೀ ದಿನವೂ ಮೋದಿಗೆ ಲೇಟರ್ ಬರೀತಾಳಂತೆ ಈ ಲೇಡಿ !! ಅಬ್ಬಬ್ಬಾ, ಈವರೆಗೂ ಬರೆದ ಪತ್ರವೆಷ್ಟು, ಮೋದಿ ಕೊಡ್ತಿರೋ ರಿಪ್ಲೇ ಏನು ?!

Leave A Reply

Your email address will not be published.