Neethu Vanajaksshi Bigg Boss Records :ಬಿಗ್ ಬಾಸ್ ಮನೆಯಿಂದ ಹೊರ ಬಂದ ನೀತು – ಅಬ್ಬಬ್ಬಾ..50 ದಿನಕ್ಕೆ ಇಷ್ಟೆಲ್ಲಾ ದಾಖಲೆ ಬರೆದ್ರಾ?!

Neethu Vanajaksshi Bigg Boss Records : ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟ ಸ್ಪರ್ಧಿಗಳು ಹೆಚ್ಚು ಫೇಮಸ್ ಆಗುವುದು ಕಾಮನ್. ಈ ಸಲದ ಬಿಗ್ ಬಾಸ್ ಸೀಸನ್ 10 ರಲ್ಲಿ ಸ್ಪರ್ಧಿಸಿದ್ದ ನೀತು ವನಜಾಕ್ಷಿ (Neethu Vanajaksshi) ಹೆಸರೀಗ ಗೊತ್ತಿಲ್ಲದೆ ಇರುವವರೇ ವಿರಳ.

 

ನೀತು ವನಜಾಕ್ಷಿ ಅವರು ಟ್ರಾನ್ಸ್‌ಜೆಂಡರ್‌ ಆಗಿದ್ದು, ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟು ತಮ್ಮ ಆಟದ ಶೈಲಿಯ ಮೂಲಕ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡರು. ಅಷ್ಟೇ ಅಲ್ಲದೆ, ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ಕಿಚ್ಚನ ಚಪ್ಪಾಳೆ ಪಡೆದ ಮೊದಲ ಕಂಟೆಸ್ಟಂಟ್‌ ಕೂಡ ಆಗಿದ್ದಾರೆ. ದೊಡ್ಮನೆಯಲ್ಲಿ 50 ದಿನದ ಆಟ ಮುಗಿಸಿ ಮನೆಯಿಂದ ಹೊರ ಬಿದ್ದ ನೀತು ಬಿಗ್‌ ಬಾಸ್‌ ನಲ್ಲೂ ಹಲವು ದಾಖಲೆಗಳನ್ನು(Neethu Vanajaksshi Bigg Boss Records) ಬರೆದಿದ್ದಾರೆ.

ಇದನ್ನು ಓದಿ: Bengaluru Kambala: ಬೆಂಗಳೂರು ಕಂಬಳ ಆಯೋಜಕರ ವಿರುದ್ಧ ದಾಖಲಾಯ್ತು ದೂರು – ಇಲ್ಲಿದೆ ಕಾರಣ

ನೀತು ಅವರು ಎರಡು ಬಾರಿ ಬಿಗ್‌ ಬಾಸ್‌ ಮನೆಯ ಕ್ಯಾಪ್ಟನ್‌ ಆಗಿದ್ದರು. ಎರಡು ಬಾರಿ ಕ್ಯಾಪ್ಟನ್‌ ಆದ ಹೆಗ್ಗಳಿಕೆಗೆ ಕೂಡ ನೀತು ಪಾತ್ರರಾಗಿದ್ದಾರೆ. ಕ್ಯಾಪ್ಟನ್ ಆದರೂ ಕೂಡ ನೀತು ವನಜಾಕ್ಷಿ ಅವರು ಎಲಿಮಿನೇಷನ್‌ನಿಂದ ಬಚಾವ್ ಆಗಲು ಸಾಧ್ಯವಾಗಿಲ್ಲ. ಕಳೆದ ವಾರ ನಾಮಿನೇಟ್ ಆಗಿದ್ದ ನೀತು ಅವರು ಮನೆಯ ಕ್ಯಾಪ್ಟನ್ ಆಗಿದ್ದರು ಕೂಡ ವೀಕ್ಷಕರಿಂದ ಕಡಿಮೆ ಓಟ್ ಬಂದ ಹಿನ್ನೆಲೆಯಲ್ಲಿ ಇದೀಗ ದೊಡ್ಮನೆಯಿಂದ ಹೊರಬಿದ್ದಿದ್ದಾರೆ. ಇದರ ನಡುವೆ, ಕ್ಯಾಪ್ಟನ್‌ ಆಗಿ ಮನೆಯಿಂದ ಹೊರಬಂದ ಮೊದಲ ಸ್ಪರ್ಧಿ ನೀತು ಆಗಿರುವ ಹೆಗ್ಗಳಿಕೆ ಕೂಡ ನೀತು ಪಡೆದಿದ್ದಾರೆ.

ಇದನ್ನು ಓದಿ: Child Trade: ಅಯ್ಯೋ ದೇವ್ರೇ ಇದೆಂತಾ ದಂಧೆ ಮಾರ್ರೆ?! ಒಂದು ಮಗು ಹೆತ್ತರೆ ತಾಯಿಗೂ, ಏಜೆಂಟ್ ಗೂ ಸಿಗುತ್ತೆ ಲಕ್ಷ ಲಕ್ಷ ಕ್ಯಾಶ್ !!

Leave A Reply

Your email address will not be published.