Interest Rate Hike: ಹಿರಿಯ ನಾಗರಿಕರಿಗೆ ಭರ್ಜರಿ ಗುಡ್ ನ್ಯೂಸ್ – ಬಡ್ಡಿ ದರದಲ್ಲಿ ಭರ್ಜರಿ ಏರಿಕೆ ಮಾಡಿದೆ ಈ ಬ್ಯಾಂಕ್ !!

Business news good news for senior citizens this bank hiked interest rate on FD latest news

Interest Rate Hike: ಖಾಸಗಿ ವಲಯದ ಸಾಲ ನೀಡುವ ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಯೆಸ್‌ ಬ್ಯಾಂಕ್‌(Yes Bank), ಸ್ಥಿರ ಠೇವಣಿಗಳ (FD) ಮೇಲಿನ ಬಡ್ಡಿ ದರವನ್ನು ಹೆಚ್ಚಳ ಮಾಡಲಾಗಿದೆ. 2 ಕೋಟಿಗಿಂತ ಕಡಿಮೆ ಠೇವಣಿಗಳ ಮೇಲೆ ಆಯ್ದ ಅವಧಿಗೆ ಬಡ್ಡಿ ದರವನ್ನು ಹೆಚ್ಚಳ ಮಾಡಲಾಗಿದೆ. ಯೆಸ್‌ ಬ್ಯಾಂಕ್‌ನ ಪರಿಷ್ಕೃತ ಬಡ್ಡಿ ದರ(Interest Rate hike)ನವೆಂಬರ್ 21, 2023 ರಿಂದ ಜಾರಿಗೆ ಬಂದಿವೆ. ಯೆಸ್‌ ಬ್ಯಾಂಕ್‌ ಸ್ಥಿರ ಠೇವಣಿಗಳ ಮೇಲೆ ಹೆಚ್ಚಿಸಿರುವ ಬಡ್ಡಿ ದರವು ಏಳು ದಿನಗಳಿಂದ ಹತ್ತು ವರ್ಷಗಳ ಅವಧಿ ಪೂರ್ಣಗೊಳ್ಳುವವರೆಗೆ ಸಾಮಾನ್ಯ ನಾಗರಿಕರಿಗೆ ಶೇ 3.25 ರಿಂದ ಶೇ 7.75 ಮತ್ತು ಹಿರಿಯ ನಾಗರಿಕರಿಗೆ ಶೇ 3.75 ರಿಂದ ಶೇ 8.25 ಒದಗಿಸುತ್ತಿದೆ.

ಬ್ಯಾಂಕ್‌ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ತನ್ನ ಸಾಮಾನ್ಯ ಗ್ರಾಹಕರಿಗೆ ಏಳು ದಿನಗಳಿಂದ 10 ವರ್ಷ ಅವಧಿ ಮುಗಿಯವರೆಗೆ ಸ್ಥಿರ ಠೇವಣಿಗಳ ಮೇಲೆ 3% ನಿಂದ ಶೇ 7.1 ಬಡ್ಡಿಯನ್ನು ಒದಗಿಸುತ್ತಿದೆ. ಐಸಿಐಸಿಐ ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ ಏಳು ದಿನಗಳಿಂದ 10 ವರ್ಷ ಅವಧಿ ಪೂರ್ಣಗೊಳ್ಳುವವರೆಗೆ ಸ್ಥಿರ ಠೇವಣಿಗಳ ಮೇಲೆ ಶೇ 3 ರಿಂದ ಶೇ 7.1 ಬಡ್ಡಿಯನ್ನು ಒದಗಿಸಲಾಗುತ್ತಿದೆ. ಹಿರಿಯ ನಾಗರಿಕರಿಗೆ ಶೇ 3.5 ರಿಂದ ಶೇ 7.65 ರಷ್ಟು ಬಡ್ಡಿ ದರವನ್ನು ನಿಗದಿ ಮಾಡಲಾಗಿದೆ. ಭಾರತದ ಖಾಸಗಿ ವಲಯದಲ್ಲಿನ ಅತಿದೊಡ್ಡ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್, ಸಾಮಾನ್ಯ ಗ್ರಾಹಕರಿಗೆ ಏಳು ದಿನಗಳಿಂದ 10 ವರ್ಷ ಮುಗಿಯುವವರೆಗೆ ಎಫ್‌ಡಿಗಳ ಮೇಲೆ ಶೇ 3 ರಿಂದ ಶೇ 7.20 ಬಡ್ಡಿ ದರವನ್ನು ನೀಡುತ್ತಿದೆ. ಅದು ಹಿರಿಯ ನಾಗರಿಕರಿಗೆ ಶೇ 3.5 ರಿಂದ ಶೇ 7.75 ಬಡ್ಡಿ ದರ ಸಿಗುತ್ತಿದೆ.

ಯೆಸ್‌ ಬ್ಯಾಂಕ್‌ ಸ್ಥಿರ ಠೇವಣಿಗಳ ಮೇಲೆ ಹೆಚ್ಚಳ ಮಾಡಿರುವ ಬಡ್ಡಿ ದರ ಹೀಗಿದೆ.

ಯೆಸ್‌ ಬ್ಯಾಂಕ್‌ ತನ್ನ ಅವಧಿ ಮತ್ತು ಬಡ್ಡಿ ದರ ಹೀಗಿದೆ:

7 ದಿನಗಳಿಂದ 14 ದಿನಗಳು– ಬಡ್ಡಿದರ ಶೇ 3.25
15 ದಿನಗಳಿಂದ 45 ದಿನಗಳು– ಬಡ್ಡಿ ದರ ಶೇ 3.70
46 ದಿನಗಳಿಂದ 90 ದಿನಗಳು– ಬಡ್ಡಿ ದರ ಶೇ 4.10
91 ದಿನಗಳಿಂದ 120 ದಿನಗಳು– ಬಡ್ಡಿ ದರ ಶೇ 4.75
121 ದಿನಗಳಿಂದ 180 ದಿನಗಳು–ಬಡ್ಡಿ ದರ ಶೇ 5.00
181 ದಿನಗಳಿಂದ 271 ದಿನಗಳು– ಬಡ್ಡಿ ದರ ಶೇ 6.10
272 ದಿನಗಳಿಂದ 1 ವರ್ಷ ಅವಧಿಗೆ– ಬಡ್ಡಿ ದರ ಶೇ 6.35
1 ವರ್ಷ – ಬಡ್ಡಿ ದರ ಶೇ 7.25
1 ವರ್ಷ 1 ದಿನದಿಂದ 18 ತಿಂಗಳುಗಳು– ಬಡ್ಡಿ ದರ ಶೇ 7.50
18 ತಿಂಗಳಿಂದ 24 ತಿಂಗಳುಗಳು– ಬಡ್ಡಿ ದರ ಶೇ 7.75
24 ತಿಂಗಳುಗಳಿಂದ 36 ತಿಂಗಳುಗಳು– ಬಡ್ಡಿ ದರ ಶೇ 7.25
36 ತಿಂಗಳುಗಳಿಂದ 60 ತಿಂಗಳುಗಳು– ಬಡ್ಡಿ ದರ ಶೇ 7.25
60 ತಿಂಗಳುಗಳು– ಬಡ್ಡಿ ದರ ಶೇ 7.25
60 ತಿಂಗಳ ಮೇಲೆ 1 ದಿನದಿಂದ 120 ತಿಂಗಳುಗಳು– ಬಡ್ಡಿ ದರ ಶೇ 7 ಸಿಗಲಿದೆ.

ಇದನ್ನೂ ಓದಿ: Ration Card Correction: ರೇಷನ್ ಕಾರ್ಡ್ ದಾರರಿಗೆ ಮತ್ತೆ ಗುಡ್ ನ್ಯೂಸ್- ಕಾರ್ಡ್ ತಿದ್ದುಪಡಿಗೆ ಮತ್ತೆ ಈ 2 ದಿನ ಅವಕಾಶ ಕೊಟ್ಟ ಸರ್ಕಾರ!!

Leave A Reply

Your email address will not be published.