Home Karnataka State Politics Updates Mallikarjun Kharge: ಕಾಂಗ್ರೆಸ್ ನ ಈ ಕಾರ್ಯಕರ್ತರಿಗೆ ಗೇಟ್ ಪಾಸ್ ?! ವೈರಲ್ ಆಯ್ತು ಖರ್ಗೆ...

Mallikarjun Kharge: ಕಾಂಗ್ರೆಸ್ ನ ಈ ಕಾರ್ಯಕರ್ತರಿಗೆ ಗೇಟ್ ಪಾಸ್ ?! ವೈರಲ್ ಆಯ್ತು ಖರ್ಗೆ ಹೇಳಿಕೆ ವಿಡಿಯೋ

Mallikarjun Kharge

Hindu neighbor gifts plot of land

Hindu neighbour gifts land to Muslim journalist

Mallikarjun Kharge: ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆಯ (Telangana Assembly Election 2024) ಭರದ ಸಿದ್ಧತೆ ನಡೆಯುತ್ತಿದೆ. ರಾಜಕೀಯ ಪಕ್ಷಗಳು ಜನರ ಮನವೊಲಿಸಲು ಹರಸಾಹಸ ಪಡುತ್ತಿದೆ. ಇದರ ಬೆನ್ನಲ್ಲೇ, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ತೆಲಂಗಾಣದಲ್ಲಿ ನಡೆದ ಚುನಾವಣೆ ರ‍್ಯಾಲಿ ಸಂದರ್ಭ ತಮ್ಮ ಪಕ್ಷದ ಕಾರ್ಯಕರ್ತರ ವಿರುದ್ಧವೇ ಆಕ್ರೋಶ ಹೊರ ಹಾಕಿದ್ದಾರೆ.

ತೆಲಂಗಾಣದ ಕಲ್ವಕುರ್ತಿಯಲ್ಲಿ ನಡೆದ ಚುನಾವಣೆ ರ‍್ಯಾಲಿಯ ಸಂದರ್ಭ ಮಲ್ಲಿಕಾರ್ಜುನ ಖರ್ಗೆ ಅವರು ಮುನಿಸಿಕೊಂಡು ತಮ್ಮ ಕಾರ್ಯಕರ್ತರಿಗೆ ಗದರಿದ ವಿಡಿಯೊವನ್ನು ಬಿಜೆಪಿ ಐಟಿ ಸೆಲ್‌ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವಿಯ ಅವರು ಶೇರ್ ಮಾಡಿದ್ದಾರೆ. “ಸುಮ್ಮನೆ ಕುಳಿತುಕೊಳ್ಳಿ, ಇಲ್ಲವೇ ಎದ್ದು ಹೋಗಿ. ಹಾಗೆಲ್ಲ ಮಾತನಾಡಬೇಡಿ. ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ನಾಯಕ ಮಾತನಾಡುತ್ತಿರುವುದು ನಿಮಗೆ ಕಾಣಿಸುತ್ತಿಲ್ಲವೆ? ಬಾಯಿಗೆ ಬಂದ ಹಾಗೆ ಮಾತನಾಡಬೇಡಿ. ಸುಮ್ಮನೆ ಕುಳಿತು ಕೇಳುವುದಿದ್ದರೆ ಕೇಳಿ, ಇಲ್ಲವೇ ನಿಮ್ಮ ದಾರಿ ನೀವು ನೋಡಿಕೊಳ್ಳಿ” ಎಂದು ಖರ್ಗೆ ಅವರು ಹೇಳಿದ್ದಾರೆ. ಈ ವೀಡಿಯೋವನ್ನು ಅಮಿತ್‌ ಮಾಳವಿಯ ಅವರು ಶೇರ್‌ ಮಾಡಿ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ದ ಕಿಡಿ ಕಾರಿದ್ದಾರೆ.

“ಇದು ಸಾಮಾನ್ಯ ಸಂಗತಿ ಅಲ್ಲ. ಕಾಂಗ್ರೆಸ್‌ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ರ‍್ಯಾಲಿಯಲ್ಲಿ ಈ ರೀತಿ ವರ್ತಿಸಿರುವುದು ಸರಿಯಲ್ಲ. ಖರ್ಗೆ ಅವರು ಅಸಹಾಯಕರಾಗಿ ಅವರು ಪಕ್ಷದ ಕಾರ್ಯಕರ್ತರ ವಿರುದ್ಧ ಕೂಗಾಡಿದ್ದು, ತಮ್ಮ ಪಕ್ಷದ ಕಾರ್ಯಕರ್ತರು ಗೌರವ ನೀಡುತ್ತಿಲ್ಲ ಎಂದು ಖರ್ಗೆ ಅವರು ಅಸಹಾಯಕರಾಗಿದ್ದಾರೆ” ಎಂದು ಮಾಳವಿಯ ಅವರು ಟೀಕಿಸಿದ್ದಾರೆ.

ಇದನ್ನೂ ಓದಿ: UP Student Beaten, Urinated: 12 ತರಗತಿ ವಿದ್ಯಾರ್ಥಿ ಮುಖಕ್ಕೆ ಮೂತ್ರ ಮಾಡಿ, ಹಿಗ್ಗಾ ಮುಗ್ಗ ಥಳಿತ- ಘಟನೆ ಬಗ್ಗೆ ಕೇಳಿದ್ರೆ ನೀವೂ ಮರುಗುತ್ತೀರಾ!!