7th Pay Commission: ಬೆಳ್ಳಂಬೆಳಗ್ಗೆಯೇ ಸರ್ಕಾರಿ ನೌಕರರಿಗೆ ಬೊಂಬಾಟ್ ನ್ಯೂಸ್ – ಈ ಸಣ್ಣ ಬದಲಾವಣೆಯಿಂದ ವೇತನದಲ್ಲಾಗಿದೆ ಭರ್ಜರಿ 49, 420 ಹೆಚ್ಚಳ !!
Business news 7th pay commission update Central Government employees salary hike
7th Pay Commission: ಹೊಸ ವರ್ಷದಲ್ಲಿ ತುಟ್ಟಿಭತ್ಯೆ ಮತ್ತೆ ಹೆಚ್ಚಾಗಲಿದ್ದು, ಮುಂದಿನ ವೇತನ ಆಯೋಗದ ಬಗ್ಗೆ ಸರ್ಕಾರವು ಅಪ್ಡೇಟ್ ನೀಡಲಿದ್ದು, ಇನ್ನೊಂದೆಡೆ ಫಿಟ್‌ಮೆಂಟ್ ಅಂಶದ ಬಗ್ಗೆಯೂ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ. ತುಟ್ಟಿಭತ್ಯೆಯ ಕುರಿತು ಹೇಳುವುದಾದರೆ. ಇದುವರೆಗೆ ಬಂದಿರುವ ಎಐಸಿಪಿಐ ಸೂಚ್ಯಂಕದ ಅಂಕಿಅಂಶಗಳು ಮುಂದಿನ ಬಾರಿಯೂ ಶೇ.4-5ರಷ್ಟು ತುಟ್ಟಿಭತ್ಯೆ ಹೆಚ್ಚಳವನ್ನು ಸೂಚಿಸುತ್ತಿವೆ. ಇದರೊಂದಿಗೆ ಹಿರಿಯ ವೇತನ ಶ್ರೇಣಿಯ ನೌಕರರ ವೇತನ 20 ಸಾವಿರ ರೂ.ಗಳಷ್ಟು ಹೆಚ್ಚಾಗಲಿದೆ.
ಪ್ರಸ್ತುತ ಇರುವ ಶೇ 46 ರಷ್ಟು ತುಟ್ಟಿಭತ್ಯೆಯನ್ನು ಕೇಂದ್ರದಲ್ಲಿರುವ ಮೋದಿ ಸರ್ಕಾರವು ಹೊಸ ವರ್ಷ ಜನವರಿ 2024 ರಲ್ಲಿ ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಶೇಕಡಾ 4-5 ರಷ್ಟು ಹೆಚ್ಚಿಸಬಹುದು ಎನ್ನಲಾಗುತ್ತಿದೆ. ಸೆಪ್ಟೆಂಬರ್‌ವರೆಗಿನ ಎಐಸಿಪಿಐ ಸೂಚ್ಯಂಕ ಡೇಟಾವನ್ನು ಬಿಡುಗಡೆ ಮಾಡಲಾಗಿದೆ. ಇದುವರೆಗೆ ತುಟ್ಟಿಭತ್ಯೆ ಶೇ.2.50ರಷ್ಟು ಹೆಚ್ಚಾಗಿದೆ. ಪ್ರಸ್ತುತ ಡಿಎ ಅಂಕವು 48.54 ಪ್ರತಿಶತದಲ್ಲಿದೆ. ಒಂದು ವೇಳೆ ಎಲ್ಲಾ ಅಂದಾಜುಗಳು ಸರಿಯಾದರೆ, ತುಟ್ಟಿಭತ್ಯೆ ಶೇ. 51 ರಷ್ಟು ತಲುಪಬಹುದು.
ಇದೇ ವೇಳೆ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಭಾರಿ ಏರಿಕೆಯಾಗಲಿದೆ. 7ನೇ ವೇತನ ಆಯೋಗದ (7th Pay Commission) ಅಡಿಯಲ್ಲಿ ಫಿಟ್‌ಮೆಂಟ್ ಅಂಶ ಹೆಚ್ಚಳದಿಂದಾಗಿ ಕೇಂದ್ರ ನೌಕರರ ವೇತನ 8,860 ರೂ. ಹೆಚ್ಚಾಗಲಿದೆ. ಫಿಟ್‌ಮೆಂಟ್ ಅಂಶವು ಪ್ರಸ್ತುತ 2.57 ಆಗಿದೆ. 3.68ಕ್ಕೆ ಹೆಚ್ಚಿಸಿದರೆ, ಲೆವೆಲ್-1ರ ದರ್ಜೆಯ ವೇತನದ ಕನಿಷ್ಠ ಮಿತಿ 26,000 ರೂ. ಅಂದರೆ ಸಂಬಳದಲ್ಲಿ ನೇರವಾಗಿ 8000 ರೂಗಳಾಗಲಿದೆ.
ಉದಾಹರಣೆಗೆ, ಹಂತ-1 ರಲ್ಲಿ ಗ್ರೇಡ್ ಪೇ 1800 ರಲ್ಲಿ ಕೇಂದ್ರ ಉದ್ಯೋಗಿಯ ಮೂಲ ವೇತನವು ರೂ 18,000 ಆಗಿದ್ದರೆ, ಭತ್ಯೆಗಳನ್ನು ಹೊರತುಪಡಿಸಿ, ಫಿಟ್ಮೆಂಟ್ ಅಂಶದ ಪ್ರಕಾರ ಲೆಕ್ಕಹಾಕಿದ ವೇತನವು ರೂ 18,000 X 2.57 = ರೂ 46,260 ಆಗುತ್ತದೆ. ಇದನ್ನು 3.68 ಎಂದು ಪರಿಗಣಿಸಿದರೆ ಸಂಬಳ 26,000X3.68= 95,680 ರೂ.ಗಲಾಗುತ್ತದೆ ಅಂದರೆ ನೌಕರರ ವೇತನದಲ್ಲಿ ಒಟ್ಟು ವ್ಯತ್ಯಾಸ 49,420 ರೂ.ಗಳಾಗಲಿದೆ ಈ ಲೆಕ್ಕಾಚಾರವನ್ನು ಕನಿಷ್ಠ ಮೂಲ ವೇತನ ಆಧರಿಸಿ ಮಾಡಲಾಗಿದೆ. ಇದರಿಂದ 1 ಕೋಟಿಗೂ ಹೆಚ್ಚು ನೌಕರರು ಮತ್ತು ಪಿಂಚಣಿದಾರರು ಇದರ ನೇರ ಲಾಭ ಪಡೆಯಲಿದ್ದಾರೆ.
ಇದನ್ನೂ ಓದಿ: Aadhar card: ಆಧಾರ್ ಕಾರ್ಡ್ ಇರುವವರಿಗೆ ದೇಶಾದ್ಯಂತ ಬಂತು ಹೊಸ ರೂಲ್ಸ್ – ಡಿ. 14 ರೊಳಗೆ ಈ ಕೆಲಸ ಕಡ್ಡಾಯ!!