Karwar Crime News: ಮಕ್ಕಳನ್ನು ಬಸ್‌ಸ್ಟ್ಯಾಂಡ್‌ನಲ್ಲಿ ಬಿಟ್ಟು ಸಮುದ್ರಕ್ಕೆ ಹಾರಿದ ಮಹಿಳೆ!

Karwar crime news woman jumps into sea leaving children latest news

Share the Article

Karwar Crime News: ಮಹಿಳೆಯೊಬ್ಬರು ತನ್ನ ಇಬ್ಬರು ಗಂಡುಮಕ್ಕಳನ್ನು ಬಸ್‌ಸ್ಟ್ಯಾಂಡ್‌ನಲ್ಲಿ ಬಿಟ್ಟು ಸಮುದ್ರಕ್ಕೆ ಹಾರಿದ ಘಟನೆಯೊಂದು ನಡೆದಿದೆ(Karwar Crime News). ಈ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಡ್‌ಬಂದರ್‌ ಬಳಿ ಶನಿವಾರ ಸಂಜೆ ನಡೆದಿದೆ.

ಸಾಂತಗಲ್‌ ಗ್ರಾಮದ ನಿವಾಸಿಯಾಗಿರುವ ನಿವೇದಿತಾ ನಾಗರಾಜ ಭಂಡಾರಿ ಸಮುದ್ರಕ್ಕೆ ಹಾಕಿ ಪ್ರಾಣ ಕಳೆದುಕೊಂಡ ಮಹಿಳೆ. ನಿನ್ನೆ ಶನಿವಾರ ಮನೆಯಿಂದ ಸ್ಕೂಟಿಯಲ್ಲಿ ಇಬ್ಬರು ಗಂಡು ಮಕ್ಕಳನ್ನು ಕರೆದುಕೊಂಡು ಬಂದ ಮಹಿಳೆ ಕುಮಟಾದ ಪಿಕ್‌ಅಪ್‌ ಬಸ್‌ನಿಲ್ದಾಣದ ಬಳಿ ಮಕ್ಕಳನ್ನು ಬಿಟ್ಟು, ಈಗ ಬರುತ್ತೇನೆ ಎಂದು ಹೋದವರು ಮತ್ತೆ ಬರಲೇ ಇಲ್ಲ.

ಗಲ್ಯ ಸರ, ಕಾಲುಂಗುರ, ಮೊಬೈಲ್‌ ಇವರನ್ನು ತನ್ನ ಸ್ಕೂಟಿಯಲ್ಲೇ ಬಿಟ್ಟು ಸಮುದ್ರಕ್ಕೆ ಹಾರಿದ್ದಾರೆ. ಅಲ್ಲೇ ಇದ್ದ ಲೈಫ್‌ಗಾರ್ಡ್‌ ಇವರ ರಕ್ಷಣೆಗೆ ಧಾವಿಸಿದರೂ ಅಲೆಗಳ ಅಬ್ಬರಕ್ಕೆ ಮಹಿಳೆ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದಾರೆ.

ನನ್ನ ಸಾವಿಗೆ ನಾನೇ ಕಾರಣ, ಏನೋ ಸಾಧನೆ ಮಾಡಬೇಕು ಎಂದುಕೊಂಡಿದ್ದೆ. ಆದರೆ ಜೀವನ ಸಾವಿನ ಅಂಚಿಗೆ ಬಂದಿದೆ. ಹೆಣ ಸಿಗಬಾರದು ಎಂದೇ ಸಮುದ್ರಕ್ಕೆ ಹಾರುತ್ತಿರುವುದಾಗಿ ಎಂದು ಬರೆದಿರುವ ಡೆತ್‌ ನೋಟೊಂದನ್ನು ಸ್ಕೂಟಿಯಲ್ಲಿ ಬಿಟ್ಟು ಹೋಗಿದ್ದಾರೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಹುಡುಕಾಟ ಮುಂದುವರಿದಿದೆ. ಕುಮಟಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: SBI ಗ್ರಾಹಕರೇ ಇತ್ತ ಗಮನಿಸಿ; UPI ಪಾವತಿ ಸೇವೆ ತಾತ್ಕಾಲಿಕ ಸ್ಥಗಿತ!!

Leave A Reply