Registration of Births and Deaths: ರಾಜ್ಯದ ಜನತೆಗೆ ಮತ್ತೆ ಶಾಕ್ ಕೊಟ್ಟ ಸರ್ಕಾರ- ಜನನ, ಮರಣ ನೋಂದಣಿ ಶುಲ್ಕದಲ್ಲಿ ಭಾರೀ ಹೆಚ್ಚಳ !!

Registration of Births and Deaths: ರಾಜ್ಯ ಸರ್ಕಾರ(State Government)ರಾಜ್ಯದ ಜನತೆಗೆ ಬಿಗ್ ಶಾಕ್ ನೀಡಿದೆ. ದಿನಂಪ್ರತಿ ಪ್ರತಿ ವಸ್ತುಗಳ ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿರುವ ಜನತೆಗೆ ರಾಜ್ಯ ಸರ್ಕಾರ ಮತ್ತೊಂದು ಕಹಿ ಸುದ್ದಿ(Big Shock)ನೀಡಿದ್ದು, ಜನನ, ಮರಣ ನೋಂದಣಿ(Registration of Births and Deaths) ವಿಳಂಬ ಶುಲ್ಕವನ್ನು ಏರಿಕೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ.

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಿದ್ದು, ನವೆಂಬರ್ 9 ರಂದು ಜನನ, ಮರಣ ನೋಂದಣಿ ( Registration of Births and Deaths ) ನಿಯಮಗಳು 1999ರ ನಿಯಮಗಳನುಸಾರ ವಿಳಂಬ ನೋಂದಣಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಹಾಲಿ ಪಾವತಿಸುತ್ತಿರುವ ವಿಳಂಬ ಶುಲ್ಕವನ್ನು ಪರಿಷ್ಕರಣೆ ಮಾಡುವ ನಿಯಮಗಳಿಗೆ ತಿದ್ದುಪಡಿ ಮಾಡಲು ಅನುಮೋದನೆ ನೀಡಲಾಗಿತ್ತು. ಅದರಂತೆ ಇದೀಗ ಅಧಿಕೃತವಾಗಿ ವಿಳಂಬ ಶುಲ್ಕವನ್ನು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಅಧಿಸೂಚನೆಯ ಅನುಸಾರ ಒಂದು ವರ್ಷದ ಬಳಿಕ ನೋಂದಾಯಿಸುವ ಜನನ, ಮರಣ ಘಟನೆಗಳಿಗೆ ಮೊದಲನೇ ವರ್ಗದ ದಂಡಾಧಿಕಾರಿ ಅಥವಾ ಮಹಾಪ್ರಾಂತ ದಂಡಾಧಿಕಾರಿಯ (Presidency Magistrate) ಆದೇಶದ ಬದಲಿಗೆ ಇನ್ನು ಮುಂದೆ ಕಂದಾಯ ಇಲಾಖೆಯ ಉಪ ವಿಭಾಗಾಧಿಕಾರಿ (Assistant Commissioner) ರವರ ಆದೇಶವನ್ನು ಪಡೆಯುವ ಕುರಿತು ಮತ್ತು ವಿಳಂಬ ಶುಲ್ಕವನ್ನು ರೂ.100/-, ರೂ.200/- ಮತ್ತು ರೂ.500/- ಗಳಿಗೆ ಪರಿಷ್ಕರಣೆ ಮಾಡಲಾಗಿದೆ.

*ಜನನ, ಮರಣ ಘಟಿಸಿದ 21 ದಿನಗಳ ಬಳಿಕ ಹಾಗೂ 30 ದಿನಗಳೊಳಗಾಗಿ ನೋಂದಾಯಿಸುವ ವಿಳಂಬ ನೋಂದಣಿ ಹಾಲಿ ಶುಲ್ಕ ರೂ.2ರಿಂದ ರೂ.100ಕ್ಕೆ ಏರಿಕೆ ಮಾಡಲಾಗಿದೆ.
* ಜನನ, ಮರಣ ಘಟಿಸಿದ 30 ದಿನಗಳ ನಂತರ ಹಾಗೂ 1 ವರ್ಷದ ಒಳಗಾಗಿ ನೋಂದಾಯಿಸುವ ವಿಳಂಬ ನೋಂದಣಿ ಶುಲ್ಕವನ್ನು ರೂ.5 ರಿಂದ 200ಕ್ಕೆ ಹೆಚ್ಚಳ ಮಾಡಲಾಗಿದೆ.
* ಜನನ, ಮರಣ ಘಟಿಸಿದ 1 ವರ್ಷದ ನಂತ್ರದ ವಿಳಂಬ ನೋಂದಣಿ ಶುಲ್ಕವನ್ನು ಹ ರೂ.10ರಿಂದ ರೂ.500ಕ್ಕೆ ಪರಿಷ್ಕರಿಸಲಾಗಿದೆ.

ಇದನ್ನು ಓದಿ: Doorstep Medicine Supply: ಜನಸಾಮಾನ್ಯರಿಗೆ ಗ್ಯಾರಂಟಿ ಬಳಿಕ ಮತ್ತೊಂದು ಗುಡ್ ನ್ಯೂಸ್- ಇನ್ಮುಂದೆ ಇಂತವರ ಮನೆ ಬಾಗಿಲಿಗೇ ಬರುತ್ತೆ ಈ ಎಲ್ಲಾ ಸೌಲಭ್ಯ !!

1 Comment
  1. […] ಇದನ್ನು ಓದಿ: Birth- Death Registeration:ರಾಜ್ಯದ ಜನತೆಗೆ ಮತ್ತೆ ಶಾಕ್ ಕೊ… […]

Leave A Reply

Your email address will not be published.