Home Karnataka State Politics Updates DL, RC New Rule: DL, RCಗೆ ಬಂತು ಹೊಸ ರೂಲ್ಸ್- ಸಾರಿಗೆ ಇಲಾಖೆಯಿಂದ ಹೊಸ...

DL, RC New Rule: DL, RCಗೆ ಬಂತು ಹೊಸ ರೂಲ್ಸ್- ಸಾರಿಗೆ ಇಲಾಖೆಯಿಂದ ಹೊಸ ನಿರ್ಧಾರ!!

DL, RC New Rule

Hindu neighbor gifts plot of land

Hindu neighbour gifts land to Muslim journalist

DL, RC New Rule: ಆರ್‌ಟಿ‌ಓ ಇನ್ನು ಮುಂದೆ ಡಿಎಲ್ & ಆರ್‌ಸಿ ಕಾರ್ಡ್ ನಲ್ಲಿ ಹೊಸ ಬದಲಾವಣೆ ತರಲು ಹೊಸ ಚಿಂತನೆ (DL, RC New Rule) ಮಾಡಿಕೊಂಡಿದೆ. ಹೌದು, ಡಿಜಿಟಲ್ ಕ್ರಾಂತಿಗೆ ಮುಂದಾಗಿರುವ ಸಾರಿಗೆ ಇಲಾಖೆ ಚಿಪ್‌ಗಳು ಮತ್ತು ಕ್ಯೂಆರ್ ಕೋಡ್‌ಗಳನ್ನು ಒಳಗೊಂಡ ಅತ್ಯಾಧುನಿಕ ಸೌಲಭ್ಯಗಳುಳ್ಳ ಡಿಎಲ್ ಮತ್ತು ಆರ್‌ಸಿ ಪರಿಚಯಿಸಲು ಆರ್‌ಟಿ‌ಓ ತಯಾರಿ ನಡೆಸುತ್ತಿದೆ.

ಈಗಾಗಲೇ ಮೊದಲಿದ್ದ ಡಿ‌ಎಲ್, ಆರ್‌ಸಿ ಕಾರ್ಡುಗಳಿಗೆ ಹೋಲಿಸಿದರೆ, ಈ ಕಾರ್ಡುಗಳಲ್ಲಿ ಹೆಚ್ಚುವರಿ ಮಾಹಿತಿ ಇರಲಿದ್ದು, ಈ ಕಾರ್ಡ್ ಸಹಾಯದಿಂದ ಕಾರ್ಡ್ ದಾರರ ಮಾಹಿತಿ ಅಧಿಕಾರಿಗಳಿಗೆ, ಟ್ರಾಫಿಕ್ ಪೊಲೀಸರಿಗೆ ಕ್ಷಣಮಾತ್ರದಲ್ಲಿ ಲಭ್ಯವಾಗಲಿದೆ. ಇದರಿಂದ ಟ್ರಾಫಿಕ್ ಪೊಲೀಸರು ಮತ್ತು ಅಧಿಕಾರಿಗಳಿಗೆ ವಾಹನ ಮಾಲೀಕನ ಹಾಗೂ ಆತನ ಡಿಎಲ್ ಬಗ್ಗೆ ಮಾಹಿತಿ ಶೀಘ್ರದಲ್ಲಿ ಸಿಗಲಿದೆ.

ಇದನ್ನು ಓದಿ: School Viral News: ಸ್ಕೂಲಲ್ಲೇ ಮಗುವಿನ ತಲೆಗೆ ಕುಕ್ಕಿದ ಕೋಳಿ- ಶಾಲೆಗೆ ಬಂದು ಪೋಷಕರು ಮಾಡಿದ್ದೇನು ಗೊತ್ತಾ?!

ಡಿಜಿಟಲ್ ಡಿ‌ಎಲ್, ಆರ್‌ಸಿ ಈ ರೀತಿ ಮಾಹಿತಿ ಒಳಗೊಂಡಿದೆ:
* ಆರ್‌ಸಿಯ ಮುಂಭಾಗದಲ್ಲಿ ರಿಜಿಸ್ಟ್ರೇಷನ್ ನಂಬರ್ ರಿಜಿಸ್ಟ್ರೇಷನ್ ದಿನಾಂಕ
ವ್ಯಾಲಿಡಿಟಿ, ಇಂಜಿನ್ ನಂಬರ್ಗಳು, ಮಾಲೀಕನ ಮಾಹಿತಿ ಮತ್ತು ವಿಳಾಸ ಇರಲಿದೆ.
* ಮುಖ್ಯವಾಗಿ ಈ ಸ್ಮಾರ್ಟ್ ಕಾರ್ಡ್ ಗೆ ಚಿಪ್ ಕೂಡ ಅಳವಡಿಸಲಾಗಿರುತ್ತದೆ.
* ಕಾರ್ಡಿನ ಹಿಂಭಾಗದಲ್ಲಿ ಕ್ಯೂಆರ್ ಕೋಡ್ ಜೊತೆಗೆ ವಾಹನದ ಮಾದರಿ, ತುರ್ತು ಸಂಪರ್ಕ ಸಂಖ್ಯೆಗಳನ್ನು ನಮೂದಿಸಲಾಗಿರುತ್ತದೆ.
* ಆರ್‌ಸಿ ಕಾರ್ಡಿನ ಹಿಂಭಾಗದಲ್ಲಿ ವಾಹನ ತಯಾರಕರ ಹೆಸರು, ಮಾಡೆಲ್, ವಾಹನದ ಮಾದರಿ ಸೇರಿದಂತೆ ಇತ್ಯಾದಿ ಮಾಹಿತಿಗಳು ಲಭ್ಯವಿರಲಿದೆ.

ಈಗಾಗ್ಲೇ ಹೊಸ ಡಿಜಿಟಲ್ ಸ್ಮಾರ್ಟ್ ಕಾರ್ಡ್ ಪೂರೈಕೆದಾರರನ್ನು ಆಯ್ಕೆ ಮಾಡಲು ಟೆಂಡರ್ ಪ್ರಕ್ರಿಯೆ ಆರಂಭಿಸುವಂತೆ ಸಾರಿಗೆ ಇಲಾಖೆಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಹೊಸ ವರ್ಷದ ಆರಂಭದಲ್ಲಿ ಅಂದಾಜು 2024 ರ ಫೆಬ್ರವರಿ ನಂತರ ಹೊಸ ಡಿಎಲ್ ಕಾರ್ಡ್ ಲಭ್ಯವಾಗುವ ಸಾಧ್ಯತೆ ಇದೆ ಎಂದು ಸಾರಿಗೆ ಇಲಾಖೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಇದನ್ನು ಓದಿ: ಮತ್ತೆ ಜೈಲಿಗೆ ಹೋದ ವರ್ತೂರ್​ ಸಂತೋಷ್​! ಈ ಸಲ ಕಂಬಿಯಿಂದ ತಪ್ಪಿಸಿಕೊಳ್ತಾರಾ ಇವ್ರು?