Home News Gujarat: ನನ್ನ ಸಂಬಳ ಕೊಡಿ ಎಂದು ಕೇಳಿದ ದಲಿತ ಸೇಲ್ಸ್‌ ಮ್ಯಾನೇಜರ್‌ ಮೇಲೆ ಬೂಟ್‌ ನೆಕ್ಕಿಸಿ,...

Gujarat: ನನ್ನ ಸಂಬಳ ಕೊಡಿ ಎಂದು ಕೇಳಿದ ದಲಿತ ಸೇಲ್ಸ್‌ ಮ್ಯಾನೇಜರ್‌ ಮೇಲೆ ಬೂಟ್‌ ನೆಕ್ಕಿಸಿ, ಹಲ್ಲೆ!!!

Gujarat

Hindu neighbor gifts plot of land

Hindu neighbour gifts land to Muslim journalist

ಗುಜರಾತ್‌ನಲ್ಲಿ ಸೇಲ್ಸ್‌ ಮ್ಯಾನೇಜರ್‌ ಒಬ್ಬರು ತಾವು ಕೆಲಸ ಮಾಡಿದ ಕಂಪನಿಯ ಬಾಸ್‌ ಗೆ ನನ್ನ ಸಂಬಳ ಕೊಡಿ ಮೇಡಂ ಎಂದು ಕೇಳಿದ್ದಕ್ಕೆ, ಕೋಪಗೊಂಡ ಮಹಿಳಾ ಉದ್ಯಮಿ, ಸೇಲ್ಸ್‌ ಮ್ಯಾನೇಜ್‌ ನಿಂದ ಬೂಟ್‌ ನೆಕ್ಕಿಸಿರುವ ಘಟನೆಯ ಜೊತೆಗೆ ಜನರನ್ನು ಬಿಟ್ಟು ಸೇಲ್ಸ್‌ ಮ್ಯಾನೇಜರ್‌ ಮೇಲೆ ಹಲ್ಲೆ ಮಾಡಿಸಿದ್ದಾರೆ. ಸೇಲ್ಸ್‌ ಮ್ಯಾನೇಜ್‌ ದಲಿತ ವ್ಯಕ್ತಿ ಎಂದು ವರದಿಯಾಗಿದೆ.

ಸೆರಾಮಿಕ್‌ ಕಂಪನಿಯ ಮುಖ್ಯಸ್ಥೆ ವಿಭೂತಿ ಪಟೇಲ್‌ ಎಂಬುವವರು ಸೇಲ್ಸ್‌ ಮ್ಯಾನೇಜರ್‌ ಮೇಲೆ ಹಲ್ಲೆ ಮಾಡಿದ ಮಹಿಳೆ. ನೀಲೇಶ್‌ ದಲ್ಸಾನಿಯಾರನ್ನು ಮುಖ್ಯಸ್ಥೆ ವಜಾಗೊಳಿಸಿದ್ದಾಳೆ. ಇದಾದ ನಂತರ ನೀಲೇಶ್‌ ಕಂಪನಿಗೆ ಹೋಗಿ ಕೆಲಸ ಮಾಡಿದ 18 ದಿನದ ಸಂಬಳ ಕೊಡಿ ಎಂದು ಮನವಿ ಮಾಡಿದ್ದಾರೆ.

ಅಷ್ಟಕ್ಕೇ ನೀಲೇಶ್‌ ದಲ್ಸಾನಿಯಾ ಅವರಿಂದ ಮುಖ್ಯಸ್ಥೆ ತಮ್ಮ ಬೂಟ್‌ ನೆಕ್ಕಿದ್ದಾರೆ. ಅಷ್ಟು ಮಾತ್ರವಲ್ಲದೇ, ಐವರು ಸಹಾಯಕರನ್ನು ಕರೆಸಿ ನೀಲೇಶ್‌ ಮೇಲೆ ತೀವ್ರವಾಗಿ ಹಲ್ಲೆ ಮಾಡಿಸಿದ್ದಾರೆ. ಇದೀಗ ಹಲ್ಲೆಗೊಳಗಾದ ನೀಲೇಶ್‌ ದಲ್ಸಾನಿಯಾ ಅವರು ವಿಭೂತಿ ಪಟೇಲ್‌ ಸೇರಿ ಹಲವರ ವಿರುದ್ಧ ಕೇಸ್‌ ದಾಖಲು ಮಾಡಿದ್ದಾರೆ.

ವಿಭೂತಿ ಪಟೇಲ್‌ ಅವರು ನೀಲೇಶ್‌ ದಲ್ಸಾನಿಯಾ ಅವರಿಗೆ ಜೀವ ಬೆದರಿಕೆ ಕೂಡಾ ಹಾಕಿದ್ದಾರೆ. ನೀಲೇಶ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

https://twitter.com/HateDetectors/status/1727952576413626684/photo/1?ref_src=twsrc%5Etfw%7Ctwcamp%5Etweetembed%7Ctwterm%5E1727952576413626684%7Ctwgr%5E7243af1dc89a9ce2c16e5f35c9699caad9436a46%7Ctwcon%5Es1_&ref_url=https%3A%2F%2Fvistaranews.com%2Fcrime%2Fbusinesswoman-forces-sacked-sales-manager-to-lick-her-boots-in-gujarat%2F515256.html

 

ಇದನ್ನು ಓದಿ: Astrology: ತುಂಬಾ ಕಷ್ಟದಲ್ಲಿ ಇದ್ದೀರಾ? ಹಾಗಾದ್ರೆ ತುಳಸಿ ಗಿಡದ ಪಕ್ಕ ಈ ವಸ್ತುಗಳನ್ನು ಇಡಿ ಸಾಕು, ಎಷ್ಟೇ ಬಡತನವಿದ್ದರೂ ಮಾಯವಾಗುತ್ತೆ