Marriage – Sindoor: ಹಣೆಗೆ ಕುಂಕುಮ ಇಡುವ ಕುರಿತು ಮಹತ್ವದ ಅಭಿಪ್ರಾಯ ತಿಳಿಸಿದ ಹೈಕೋರ್ಟ್ !!
National news forcibly applying sindoor does not mean marriage Patna high court
Marriage – Sindoor: ಮದುವೆಗೆ ಸಂಬಂಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪಾಟ್ನಾ ಹೈಕೋರ್ಟ್ ಮಹತ್ವದ ತೀರ್ಪು ಒಂದನ್ನು ನೀಡಿದೆ. ಮದುವೆಗೆ ಬೇಕಾದ ವಿಧಿ ವಿಧಾನಗಳಿವೆಯೋ ಅವೆಲ್ಲವನ್ನೂ ಅನುಸರಿಸಬೇಕು, ಒತ್ತಾಯ ಮಾಡಿ ಹಣೆಗೆ ಸಿಂಧೂರ ಇಟ್ಟಾಗ ಅದು ಮದುವೆಯಾಗಲು (Marriage – Sindoor) ಹೇಗೆ ಸಾಧ್ಯ , ಹೀಗಾದರೆ ಅದನ್ನು ಮಾನ್ಯವೆಂದು ಪರಿಗಣಿಸುವುದಿಲ್ಲ ಎಂದು ಪಾಟ್ನಾ ಹೈಕೋರ್ಟ್ ಹೇಳಿದೆ.
ಮುಖ್ಯವಾಗಿ ಹಿಂದೂ ಧರ್ಮದಲ್ಲಿ ಮದುವೆಗೆ ಅದರದ್ದೇ ಆದ ವ್ಯಾಖ್ಯಾನವಿದೆ, ರೂಢಿ, ಸಂಪ್ರದಾಯ, ವಿಧಿವಿಧಾನಗಳಿವೆ, ಆಚಾರಗಳು ಇವೆ. ಅಗ್ನಿ ಮುಂದೆ 7 ಸುತ್ತು ಪ್ರದಕ್ಷಿಣೆ ಹಾಕಬೇಕು, ಸಪ್ತಪದಿ ತುಳಿಯಬೇಕು, ಕನ್ಯಾದಾನ ಮಾಡಬೇಕು, ತಾಳಿ ಶಾಸ್ತ್ರ ಮಾಡಬೇಕು, ಹೀಗೆ ಹಲವಾರು ವಿಧಿಗಳಿವೆ ಅದ್ಯಾವುದನ್ನೂ ಮಾಡದೆ ನೇರ ಬಂದು ಹಣೆಗೆ ಸಿಂಧೂರವಿಟ್ಟರೆ ಅದು ಮದುವೆ ಹೇಗಾಗುತ್ತದೆ ಎಂದು ಕೋರ್ಟ್ ಪ್ರಶ್ನೆ ಮಾಡಿದೆ.
ಸದ್ಯ ಈಗಾಗಲೇ ಬಲವಂತದ ಮದುವೆ ಪ್ರಕರಣದಲ್ಲಿ, ನವೆಂಬರ್ 10 ರಂದು ಪಾಟ್ನಾ ಹೈಕೋರ್ಟ್ ಈ ತೀರ್ಪು ನೀಡಿದ್ದು, 10 ವರ್ಷಗಳ ಹಿಂದೆ ಸೇನೆಯಲ್ಲಿ ನಿಯೋಜಿತರಾಗಿದ್ದ ಯೋಧ ರವಿಕಾಂತ್ ಅವರು ಬಲವಂತವಾಗಿ ಮದುವೆಯಾಗಿದ್ದರು. ಸಪ್ತಪದಿ ತುಳಿಯದೆ ಮದುವೆ ಮಾನ್ಯವಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ.
ಇದನ್ನೂ ಓದಿ: Hair Care: ಮನೆ ಎದುರಲ್ಲೇ ಸಿಗೋ ಈ ಎಲೆಗಳನ್ನು ಅರೆದು ಕೂದಲಿಗೆ ಹಚ್ಚಿ- ಬಿಳಿ ಕೂದಲು ಎರಡೇ ದಿನಕ್ಕೆ ಕಪ್ಪಾಗೋ ಚಮತ್ಕಾರ ನೋಡಿ