PSI Recruitment: ಪೊಲೀಸ್ ಆಗೋ ಕನಸು ಕಂಡವರಿಗೆ ಭರ್ಜರಿ ಗುಡ್ ನ್ಯೂಸ್- ಈ ದಿನ ನಡೆಯಲಿದೆ 4,000 ಹೆಚ್ಚು ಹುದ್ದೆಗಳ ನೇಮಕಾತಿ!!

Karnataka news good news from the minister g Parameshwar for PSI recruitment

Share the Article

G.Parameshwar: ವಿಧಾನಸೌಧದಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವ‌ರ್(G.Parameshwar) ಅವರು ಪೊಲೀಸ್ ಸಬ್ ಇನ್ಸೆಕ್ಟರ್ (Police Dept) ಸೇರಿದಂತೆ 4,547 ಹುದ್ದೆಗಳಿಗೆ ಮುಂದಿನ ಆರು ತಿಂಗಳಲ್ಲಿ ನೇಮಕಾತಿ(PSI Recruitment)ನಡೆಯುವ ಕುರಿತು ಮಾಹಿತಿ ನೀಡಿದ್ದಾರೆ.

ಪೊಲೀಸ್ ಇಲಾಖೆಗೆ ಇನ್ನೂ 15,000 ಕಾನ್ಸ್ಟೇಬಲ್ ಗಳು ಅಗತ್ಯವಿದ್ದು, ಹಂತ ಹಂತವಾಗಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಪೊಲೀಸ್ ಇಲಾಖೆಯಲ್ಲಿ ಪ್ರತಿ ಎರಡು ವರ್ಷಗಳ ನಂತರ ವರ್ಗಾವಣೆ ಮಾಡುವ ಕಾನೂನು ರೂಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.ಡಿಸೆಂಬರ್ ನಲ್ಲಿ 545 ಪೊಲೀಸ್ ಇನ್ಸೆಕ್ಟ‌ರ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಇದಾದ ಬಳಿಕ 402, ಬಳಿಕ 600 ಪೋಲಿಸ್ ಸಬ್ ಇನ್ಸೆಕ್ಟರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.1547 ಪಿಎಸ್‌ಐ ಹುದ್ದೆಗಳನ್ನು (PSI Recruitment)ಮುಂದಿನ ಆರು ತಿಂಗಳೊಳಗೆ ಭರ್ತಿ ಮಾಡಲಾಗುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ 3000 ಕಾಸ್ಟೇಬಲ್ ಹುದ್ದೆಗಳ ನೇಮಕ ಪ್ರಕ್ರಿಯೆ ಶೀಘ್ರವೇ ನಡೆಯಲಿದೆ ಎಂದು ತಿಳಿಸಿದ್ದಾರೆ.1547 ಪೊಲೀಸ್ ಸಬ್ ಇನ್ಸೆಕ್ಟರ್ ಗಳು, 3000 ಕಾಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ಇದೇ ವೇಳೆ ಗೃಹ ಸಚಿವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Ration card: ಹೊಸ ರೇಷನ್ ಕಾರ್ಡ್’ಗೆ ಅರ್ಜಿ ಹಾಕಿದವರಿಗೆ ಭರ್ಜರಿ ಗುಡ್ ನ್ಯೂಸ್- ಯಾವುದೇ ಕಾರಣಕ್ಕೂ ಮಿಸ್ ಮಾಡ್ಬೇಡಿ ಈ ಸುವರ್ಣವಕಾಶ !!

Leave A Reply