Home ಕೃಷಿ Jowar price hike: ಜೋಳದ ಬೆಲೆಯಲ್ಲಿ ದಾಖಲೆಯ ಏರಿಕೆ – ರೈತರಿಗೆ ಹೊಡೀತು ಜಾಕ್ ಪಾಟ್

Jowar price hike: ಜೋಳದ ಬೆಲೆಯಲ್ಲಿ ದಾಖಲೆಯ ಏರಿಕೆ – ರೈತರಿಗೆ ಹೊಡೀತು ಜಾಕ್ ಪಾಟ್

Jowar price hike

Hindu neighbor gifts plot of land

Hindu neighbour gifts land to Muslim journalist

Jowar price hike: ರಾಜ್ಯದ ಪ್ರಮುಖ ಬೆಳೆಗಳಲ್ಲಿ ಒಂದಾಗಿರುವ ಜೋಳದ ಬೆಲೆಯು ಇದೀಗ ದಾಖಲೆ ಮಟ್ಟದಲ್ಲಿ ಏರಿಕೆ(Jowar price hike) ಕಂಡಿದ್ದು ರೈತರಿಗೆ ಭರ್ಜರಿ ಜಾಕ್ ಪಾಟ್ ಹೊಡೆದಿದೆ. ಈ ಮೂಲಕ ಬೆಳೆಗಾರರಲ್ಲಿ ಸಂತಸ ಮನೆಮಾಡಿದೆ.

ಹೌದು, ಕರ್ನಾಟಕದಲ್ಲಿ ಈ ಸಲ ಬರ ತಾಂಡವವಾಡುತ್ತಿರುವುದರಿಂದ ಅನೇಕ ಪ್ರಮುಖ ಬೆಳೆಗಳ ಬೆಲೆಯಲ್ಲಿ ಭಾರೀ ಬೆಲೆ ಏರಿಕೆ ಕಂಡಿದೆ. ಆದರೆ ಜೋಳದಲ್ಲಂತೂ ಈ ಸಲ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದ್ದು ಬೆಳೆಗಾರರಲ್ಲಿ ಹರ್ಷ ಉಂಟಾಗಿದೆ. ಜೊತೆಗೆ ಮಾರುಕಟ್ಟೆಗೆ ಬರುವ ಜೋಳವೂ ಕಡಿಮೆಯಾಗಿದ್ದಲ್ಲದೇ, ಈ ಬಾರಿಯ ಹಿಂಗಾರು ಜೋಳ (Maize) ಬಿತ್ತನೆ ಕೂಡ ಕಡಿಮೆ ಆಗಿದೆ. ಆದ್ದರಿಂದ ಈ ವರ್ಷ ಕ್ವಿಂಟಾಲ್ ಜೋಳಕ್ಕೆ ಅಂದಾಜು 8,000 ರೂ.ವರೆಗೆ ಏರಿಕೆ ಆಗುವ ಸಾಧ್ಯತೆಗಳು ಇವೆ ಎನ್ನಲಾಗಿದೆ.

ಅಂದಹಾಗೆ ಉತ್ತರ ಕರ್ನಾಟಕ ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ಹಿಂಗಾರು ಹಂಗಾಮಿನ ವೇಳೆ ಹೆಚ್ಚಾಗಿ ಜೋಳ ಬೆಳೆಯಲಾಗುತ್ತದೆ. ಆದರೆ ಈ ಭಾರಿ ಅಗತ್ಯವಾಗಿದ್ದ ಹಿಂಗಾರು ಮಳೆ ಕೈ ಕೊಟ್ಟಿದ್ದರಿಂದ ಜೋಳ ಬಿತ್ತನೆಯಲ್ಲಿ ಕುಸಿತವಾಗಿದೆ. ಹೀಗಾಗಿ ಈ ಬಾರಿ ಹಿಂದೆಂದಿಗಿಂತಲೂ ಜೋಳದ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ ಆಗುವ ಲಕ್ಷಣಗಳು ಕಾಣುತ್ತಿವೆ. ಪ್ರತಿ ಕ್ವಿಂಟಾಲ್ ಗೆ 8,000 ದಾಟುವುದು ಫಿಕ್ಸ್ ಆಗಿದೆ.

ಇನ್ನು ‘ಮೆಕ್ಕೆಜೋಳದ ಕಣಜ’ ಎಂದೇ ಹೆಸರಾಗಿರುವ ದಾವಣಗೆರೆ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಬರ ಆವರಿಸಿದ್ದರಿಂದ ಇಳುವರಿ ತೀವ್ರ ಕುಸಿದಿದ್ದು, ಮಾರುಕಟ್ಟೆಗೆ ಆವಕವೂ ಕಡಿಮೆಯಾಗಿದೆ. ಕಳೆದ ವರ್ಷ ನವೆಂಬರ್‌ ತಿಂಗಳು ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (ಎಪಿಎಂಸಿ) ನಿತ್ಯ 10,000 ಕ್ವಿಂಟಲ್ ಆವಕವಾಗುತ್ತಿತ್ತು. ಆದರೆ, ಈ ವರ್ಷ ಅದು 4,000 ಕ್ವಿಂಟಲ್‌ಗೆ ಕುಸಿದಿದೆ. ಹೀಗಾಗಿ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲೂ ಜೋಳದ ಆವಕ ಕಡಿಮೆಯಾಗಿದ್ದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Kantara -2: ವಿದೇಶದಲ್ಲಿ ನಡೆಯಲಿದೆ ಕಾಂತಾರ-2 ‘ಪಂಜುರ್ಲಿ’ ದೈವದ ಚಿತ್ರೀಕರಣ, ಇದೆನಾ ಕಾರಣ ?