Marriage Registration: ಹೊಸದಾಗಿ ಮದುವೆ ಆಗೋರಿಗೆ ದೇಶಾದ್ಯಂತ ಬಂತು ಹೊಸ ರೂಲ್ಸ್ – ಇನ್ಮುಂದೆ ಈ ಕೆಲಸ ಕಡ್ಡಾಯ!!
National News new rules for marriage registration biometric is mandatory for newly married couple
Marriage Registration:ಕರ್ನಾಟಕ ಬಜೆಟ್ 2023-24ರಲ್ಲಿ ಸಿಎಂ ಸಿದ್ದರಾಮಯ್ಯ ನೂತನ ವಧು ವರರಿಗೆ ಸಿಹಿ ಸುದ್ದಿ ನೀಡಿದ್ದು, ಇದುವರೆಗೆ ವಿವಾಹ ನೋಂದಣಿಗೆ (Marriage Registration)ಉಪ ನೋಂದಣಿ ಕಚೇರಿಯಲ್ಲಿ ಮಾತ್ರ ಇದ್ದ ಅವಕಾಶವನ್ನೂ ಆನ್ಲೈನ್ ಮೂಲಕ ಮಾಡಲು ರಾಜ್ಯ ಸರ್ಕಾರ ಅನುವು ಮಾಡಿಕೊಟ್ಟಿದೆ.
ಮದುವೆ ನೋಂದಣಿ (marriage registration) ಮಾಡಿಸಿಕೊಳ್ಳುವುದು ಕಡ್ಡಾಯವಾಗಿದ್ದು, ಪಾಸ್ಪೋರ್ಟ್ (Passport) ಪಡೆಯಲು , ಅದೇ ರೀತಿ ಬ್ಯಾಂಕ್ ಖಾತೆ(Bank Account) ತೆರೆಯುವುದಕ್ಕೆ ಮೊದಲಾದ ವ್ಯವಹಾರಗಳಿಗೆ ಗಂಡ ಹೆಂಡತಿ ಎನ್ನುವುದನ್ನು ನಿರೂಪಿಸುವ ಮ್ಯಾರೇಜ್ & (marriage certificate) ಅವಶ್ಯಕವಾಗಿರುತ್ತದೆ.
ಇತ್ತೀಚಿಗೆ ಮ್ಯಾರೇಜ್ ಸರ್ಟಿಫಿಕೇಟ್( Marraige Certificate) ಪಡೆಯಲು ಅರ್ಜಿ ಸಲ್ಲಿಸಿದವರ ಸಂಖ್ಯೆ ಹೆಚ್ಚಾಗಿದೆ. ಇದೀಗ ಮ್ಯಾರೇಜ್ ಸರ್ಟಿಫಿಕೇಟ್ ಮಾಡಿಸಲು ಕೆಲವೊಂದು ಕಡ್ಡಾಯ ನಿಯಮಗಳನ್ನು ಸರ್ಕಾರ ಜಾರಿಗೆ ತಂದಿದೆ. ಮ್ಯಾರೇಜ್ ಸರ್ಟಿಫಿಕೇಟ್ ಪಡೆಯುವ ಸಲುವಾಗಿ ಮೂರು ಸಾಕ್ಷಿದಾರರು ಬೇಕಾಗುತ್ತದೆ. ಮದುವೆ ನೋಂದಣಿಗೆ ಮೂವರು ವ್ಯಕ್ತಿಯ ಸಹಿ ಕೂಡ ಅವಶ್ಯಕವಾಗಿದ್ದು, ಮೂವರು ಸಾಕ್ಷಿಯನ್ನು ನೋಂದಣಿ ಕಚೇರಿಯಲ್ಲಿ ಕೇಳಲಾಗುತ್ತದೆ. ಇದರ ಜೊತೆಗೆ ಮೂರು ಸಾಕ್ಷಿಗಳು ಕೂಡ ಬಯೋಮೆಟ್ರಿಕ್ ಮೂಲಕ (Biometric registration)ಸಹಿ ಮಾಡಿದರೆ ಮಾತ್ರ ಆ ಮದುವೆಯನ್ನು ಮಾನ್ಯ ಎಂದು ಪರಿಗಣಿಸಲಾಗುತ್ತದೆ.ಮ್ಯಾರೇಜ್ ಸರ್ಟಿಫಿಕೇಟ್ ಮಾಡಿಸಿಕೊಳ್ಳುವಾಗ ಈ ಪ್ರಕ್ರಿಯೆಯಲ್ಲಿ ನೋಂದಾವಣಿಗೆ ಸುಮಾರು 30 ನಿಮಿಷಗಳ ಅವಧಿ ಬೇಕಾಗುತ್ತದೆ. ಬಯೋಮೆಟ್ರಿಕ್ ಫಿಂಗರ್ ಪ್ರಿಂಟ್ ಸರಿಹೊಂದದೆ ಇದ್ದಲ್ಲಿ ಆ ಮದುವೆ ನೋಂದಣಿ ಆಗುವುದಿಲ್ಲ ಎಂಬುದನ್ನು ಗಮನಿಸಬೇಕು.
ಇದನ್ನೂ ಓದಿ : ಅಬ್ಬಬ್ಬಾ.. ಸಂಗಾತಿಯನ್ನು ತಬ್ಬಿಕೊಂಡ್ರೆ ಈ ರೀತಿಯೆಲ್ಲಾ ಆಗುತ್ತಾ ?!