B Y Vijayendra: ಬಿ ವೈ ವಿಜಯೇಂದ್ರಗೆ ಬಿಗ್ ಶಾಕ್ ಕೊಟ್ಟ ಕಾಂಗ್ರೆಸ್ !!

B Y Vijayendra : ಬಿಜೆಪಿಯ ನೂತನ ರಾಜ್ಯ ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ(B Y Vijayendra) ಅವರು ಆಯ್ಕೆಯಾಗಿದ್ದು ಇನ್ನು ಕೂಡ ಈ ಒಂದು ಸಂಭ್ರಮವನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಆದರೆ ಈ ಹೊತ್ತಿನಲ್ಲೇ ಕಾಂಗ್ರೆಸ್ ನಿಂದ ವಿಜಯೇಂದ್ರ ಅವರಿಗೆ ದೊಡ್ಡ ಆಘಾತ ಎದುರಾಗಿದೆ.

ಬಿಜೆಪಿ(BJP) ರಾಜ್ಯಾಧ್ಯಕ್ಷರಾಗುತ್ತಿದ್ದಂತೆ ವಿಜಯೇಂದ್ರ ಅವರು ಮೊದಲಿಗಿಂತ ತುಂಬಾ ಚುರುಕಾಗಿದ್ದಾರೆ. ಅಧಿಕಾರ ಪಡೆದ ಕೂಡಲೆ ವಿಪಕ್ಷ ನಾಯಕನನ್ನೂ ಆರಿಸಿದ್ದಾರೆ. ಇನ್ನೇನಿದ್ದರೂ ಮುಂದಿನ ಲೋಕಸಭಾ ಚುನಾವಣೆಯನ್ನು ಗೆಲ್ಲುವತ್ತ ಗಮನ ಹರಿಸಿದ್ದಾರೆ. ಆದರೆ ಇದೀಗ ಅವರ ತವರು ಕ್ಷೇತ್ರವಾದ ಶಿಖಾರಿಪುದಲ್ಲೇ ದೊಡ್ಡ ಆಘಾತ ಎದುರಾಗಿದ್ದು, ಕಾಂಗ್ರೆಸ್(Congress) ಸುಮಾರು 30ವರುಷಗಳ ದಾಖಲೆಯನ್ನು ಮುರಿದಿದೆ. ಇದರಿಂದ ಆರಂಭದಲ್ಲೇ ವಿಜಯೇಂದ್ರ ಅವರಿಗೆ ಹಿನ್ನಡೆಯಾಗಿದೆ.

ಹೌದು, ಬಿ. ವೈ. ವಿಜಯೇಂದ್ರ ಪ್ರತಿನಿಧಿಸುವ ಶಿಕಾರಿಪುರ(Shikhari pura) ಕ್ಷೇತ್ರದ ತರಲಘಟ್ಟ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಸಾಧಿಸಿದೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಪಂಚಾಯಿತಿ ಅಧಿಕಾರವನ್ನು ಪಡೆದಿದೆ. 30 ವರ್ಷದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಗ್ರಾಮ ಪಂಚಾಯಿತಿ ಅಧಿಕಾರ ಕಾಂಗ್ರೆಸ್ ಪಾಲಾಗಿದೆ. ಅದರಲ್ಲೂ ಬಿ. ವೈ. ವಿಜಯೇಂದ್ರ ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದ ಕೆಲವೇ ದಿನಗಳಲ್ಲಿ ನಡೆದ ಚುನಾವಣೆಯಲ್ಲಿ ಅದೂ ಕೂಡ ತಮ ತವರು ಕ್ಷೇತ್ರದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು ವಿಜಯೇಂದ್ರ ಅವರಿಗೆ ಭಾರೀ ನಿರಾಸೆ ಉಂಟುಮಾಡಿದೆ.

 

ಇದನ್ನು ಓದಿ: Bengaluru Kambala: ಬೆಂಗಳೂರು ಕಂಬಳದ ಅತಿಥಿ ಹೆಸರು ಘೋಷಣೆ – ಹೆಸರು ಕೇಳುತ್ತಿದ್ದಂತೆ ಹೆಚ್ಚಿದ ಭಾರೀ ಆಕ್ರೋಶ !!

Leave A Reply

Your email address will not be published.